Advertisement

ನೂತನ ತಾಂತ್ರಿಕತೆ ಅಳವಡಿಕೆಗೆ ರೈತರಿಗೆ ಸಲಹೆ

04:08 PM Dec 29, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಬಶೆಟ್ಟಹಳ್ಳಿ ಹೋಬಳಿಯ ಜಿ ಕುರುಬರಹಳ್ಳಿಯಲ್ಲಿರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಪ್ರಗತಿಪರ ರೈತ ಬೈರಪ್ಪರ ತೋಟದಲ್ಲಿ ರಾಗಿ ಬೆಳೆಕ್ಷೇತ್ರೋತ್ಸವ ಹಾಗೂ ಆತ್ಮ ಯೋಜನೆಯಡಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷಿ ಇಲಾಖೆಯ ಉಪನಿರ್ದೇಶಕಿ ಡಾ.ಅನುರೂಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ರಾಗಿ ಮತ್ತು ತೊಗರಿಯಲ್ಲಿ ಹೆಚ್ಚಿನ ಉತ್ಪಾದನೆ ಮಾಡಬಹುದು.ಮಳೆಯಾಶ್ರಿತ ಜಮೀನಿನಲ್ಲಿ ಪರ್ಯಾಯ ಬೆಳೆಯಾಗಿತೊಗರಿಬೆಳೆ ಬೆಳೆಯುವುದರಿಂದ ಹೆಚ್ಚಿನ ಆದಾಯಪಡೆಯಬಹುದು ಎಂದರು.

Advertisement

ಕಡಿಮೆ ವೆಚ್ಚ: ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ತಜ್ಞ ಡಾ.ತನ್ವೀರ್‌ ಅಹಮದ್‌ ಮಾತನಾಡಿ,ರಾಗಿ ಬೆಳೆಯ ತಳಿಗಳು ಸಮಗ್ರ ಪೋಷಕಾಂಶಗಳನಿರ್ವಹಣೆ ನೈಸರ್ಗಿಕವಾಗಿ ಸಿಗುವ ಜೈವಿಕಪರಿಕರಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ಬೆಳೆಯಲು ಸಾಧ್ಯ ಎಂದರು. ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಸತೀಶ್‌ಕುಮಾರ್‌, ಬೆಳೆ ಸಮೀಕ್ಷೆಯ ಮಹತ್ವ ಮತ್ತು ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ತಿಮ್ಮರಾಜು,ತಾಲೂಕು ತಾಂತ್ರಿಕ ವ್ಯವಸ್ಥಾಪಕ ಎನ್‌.ಅಶ್ವತ್ಥನಾರಾಯಣಅವರು ರಾಗಿ ಬೆಳೆ ಕ್ಷೇತ್ರೊತ್ಸವದ ಆಯೋಜನೆ ಕುರಿತುರೈತರಿಗೆ ಮನವರಿಕೆ ಮಾಡಿಕೊಟ್ಟರು. ಇಲಾಖೆಯಿಂದದೊರೆಯುವ ಸೌಲಭ್ಯಗಳ ಕುರಿತು ರೈತರು ಮಾಹಿತಿಪಡೆದುಕೊಂಡು ವ್ಯವಸಾಯ ಕ್ಷೇತ್ರಗಳಲ್ಲಿ ಸ್ವಯಂಬದಲಾವಣೆ ಮಾಡಿಕೊಳ್ಳಬೇಕೆಂದು ಹೇಳಿದರು. ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ಕೃಷಿ ಅಧಿಕಾರಿಮೋಹನ್‌ಕುಮಾರ್‌ ಹಾಗೂ ಜಿ ಕುರುಬರಹಳ್ಳಿಯಸುತ್ತಮುತ್ತಲಿನ ಪ್ರಗತಿಪರ ರೈತರು ಭಾಗವಹಿಸಿ ಕ್ಷೇತ್ರೋತ್ಸವ ಯಶಸ್ವಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next