Advertisement

ಒಕ್ಕಟ್ಟಿನಿಂದ ಬಸವ ಜಯಂತಿ ಆಚರಣೆಗೆ ಸಲಹೆ

04:42 PM Mar 12, 2020 | Suhan S |

ಬೆಳಗಾವಿ: ಏಪ್ರಿಲ್‌ 26 ರಂದು ನಡೆಯಲಿರುವ ಬಸವ ಜಯಂತಿ ಆಚರಣೆಯ ಮೆರವಣಿಗೆ ಸಂದರ್ಭದಲ್ಲಿ ಶಿಸ್ತು ಸಮಯದ ನಿಬಂಧನೆ ಹಾಕಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಚನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು .ವಚನ ಸ್ಪರ್ಧೆ ಶರಣರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು ಎಂದು ವೀರಶೈವ, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಹೇಳಿದರು.

Advertisement

ಬಸವ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಗರದ ವೀರಶೈವ ಮಹಾಸಭೆಯ ಸಭಾಗೃಹದಲ್ಲಿ ನಡೆದ ವೀರಶೈವ, ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಸಲಹೆ ನೀಡಿದ ಸದಸ್ಯರು, ಬಸವ ಜಯಂತಿ ಒಂದು ದಿನಕ್ಕೆ ಸೀಮಿತವಾಗಬಾರದು .ಶಿವಾಜಿ ಜಯಂತಿ ಆಚರಣೆ ಮಾದರಿಯಲ್ಲಿ ಬಸವ ಜಯಂತಿಯನ್ನು ಸಹ ಉತ್ಸಾಹದಿಂದ ಆಚರಿಸುವಂತಾಗಬೇಕು ಭಿನ್ನಾಭಿಪ್ರಾಯ ಬದಿಗಿಟ್ಟು ಬಸವ ಮನಸ್ಸುಗಳೆಲ್ಲ ಒಂದಾಗಿ ಆಚರಿಸುವಂತಾಗಬೇಕು ಎಂದು ಹೇಳಿದರು.

ಆಚರಣೆಯ ಪೂರ್ವಭಾವಿಯಾಗಿ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ವಚನ ಸ್ಪರ್ಧೆ ಏರ್ಪಡಿಸಬೇಕು. ಮುಖ್ಯವಾಗಿ ಕಾರ್ಯಕ್ರಮದಲ್ಲಿ ಎಲ್ಲ ಪಂಗಡಗಳ ಎಲ್ಲ ಜನರು ಭಿನ್ನಾಭಿಪ್ರಾಯ ಮರೆತು ಉತ್ಸವ ನಡೆಸಲು ಮುಂದಾಗಬೇಕು. ಮನಸ್ಸುಗಳು ಘಾಸಿಯಾಗುವಂತೆ ಮಾತನಾಡುವುದು ಬೇಡ. ಬಸವಣ್ಣನವರನ್ನು ಒಂದು ಪಂಗಡಕ್ಕೆ ಸೀಮಿತ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಉಪಮಹಾಪೌರ ಜ್ಯೋತಿ ಭಾವಿಕಟ್ಟಿ ಅವರನ್ನು ಬೆಳಗಾವಿಯಲ್ಲಿ ನಡೆಯಲಿರುವ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಅವರು, ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತಮಗೆ ಒಪ್ಪಿಸಿರುವ ಕಾರ್ಯವನ್ನು ಸಮಾಜದ ಎಲ್ಲರ ಸಲಹೆ, ಸೂಚನೆ ಸಹಕಾರದೊಂದಿಗೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದರು.

ಸಭೆಯಲ್ಲಿ ಡಾ.ಎಚ್‌.ಬಿ. ರಾಜಶೇಖರ್‌, ಸೋಮು ಮಾವಿನಕಟ್ಟಿ, ಮಾಜಿ ಶಾಸಕ ಎಸ್‌ .ಸಿ.ಮಾಳಗಿ, ಖಡಬಡಿ, ಯ.ರು.ಪಾಟೀಲ,

Advertisement

ಮುರುಗೇಶ ಶಿವಪೂಜಿ, ಮುದಕವಿ, ಎ.ಟಿ.ಪಾಟೀಲ, ಶೈಲಜಾ ಭಿಂಗೆ, ಎಸ್‌.ಆರ್‌. ಚೋಬಾರಿ, ಪ್ರತಿಭಾ ಕಳ್ಳಿಮಠ , ಸುನಂದಾ ಎಮ್ಮಿ , ದಿವ್ಯಾ ವಾಲಿ, ಸದಾಶಿವ ದೇವರಮನಿ ಉಪಸ್ಥಿತರಿದ್ದರು. ಗುರುದೇವಿ ಹುಲೆಪ್ಪನವರಮಠ ಕಾರ್ಯಕ್ರಮ ನಿರ್ವಹಿಸಿದರು. ಕೊರಬು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next