Advertisement

ಪಠ್ಯ ಮರು ಬಳಕೆಗೆ ಸಲಹೆ

08:34 PM Dec 22, 2022 | Team Udayavani |

ಸುವರ್ಣ ವಿಧಾನಸೌಧ: ಶಾಲಾ ಮಕ್ಕಳಿಗೆ ಪ್ರತಿ ವರ್ಷ ಹೊಸ ಪಠ್ಯಪುಸ್ತಕ ವಿತರಿಸುವ ಬದಲಿಗೆ ಪುಸ್ತಕ ಬ್ಯಾಂಕ್‌ ರಚಿಸಿ, 5-10 ವರ್ಷಕ್ಕೊಮ್ಮೆ ಹೊಸ ಪುಸ್ತಕ ನೀಡುವ ವ್ಯವಸ್ಥೆ ಜಾರಿ ಮಾಡಿದರೆ, ಸಾಕಷ್ಟು ಆರ್ಥಿಕ ಹೊರ ಕಡಿಮೆ ಮಾಡಬಹುದಾಗಿದೆ ಎಂದು ಬಿಜೆಪಿಯ ವೀರಣ್ಣ ಚರಂತಿಮಠ ಸರ್ಕಾರಕ್ಕೆ ಸಲಹೆ ನೀಡಿದರು.

Advertisement

ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.6 ಕೋಟಿ ಶಾಲಾ ವಿದ್ಯಾರ್ಥಿಗಳಿದ್ದು, ಅವರಿಗೆ ಪ್ರತಿ ವರ್ಷ ಹೊಸ ಪಠ್ಯಪುಸ್ತಕವನ್ನು ಮುದ್ರಿಸಿ ವಿತರಿಸಲಾಗುತ್ತಿದ್ದು, ದೊಡ್ಡ ಹೊರೆಯಾಗುತ್ತಿದೆ. ಪ್ರತಿ ವರ್ಷ 20 ಕೋಟಿ ಪುಸ್ತಕ ಮುದ್ರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಸೈನಿಕ ಶಾಲೆ, ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಪಠ್ಯಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಮುಂದೆ ಹೊಸ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲು ಪುಸ್ತಕ ಬ್ಯಾಂಕ್‌ ರಚಿಸಬೇಕು. ಇದರಿಂದ ಆರ್ಥಿಕ ಹೊರೆ ತಪ್ಪಲಿದೆ ಮತ್ತು ಕಾಗದಕ್ಕಾಗಿ ಮರ ಕಡಿಯುವುದು ತಪ್ಪುತ್ತದೆ, ಪರಿಸರ ಸಂರಕ್ಷಣೆಯೂ ಆಗಲಿದೆ ಎಂದರು.

ಇದಕ್ಕೆ ಸ್ಪಂದಿಸಿದ ಸಚಿವ ಎಚ್‌.ನಾಗೇಶ್‌, ಇದು ಉತ್ತಮ ಸಲಹೆಯಾಗಿದ್ದು, ಪಠ್ಯಪುಸ್ತಕ ರಚನಾ ಸಮಿತಿಯ ಮುಂದೆ ಈ ವಿಚಾರವಿಟ್ಟು ಯಾವ ರೀತಿ ಜಾರಿಗೊಳಿಸಬಹುದು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next