Advertisement

ನರೇಗಾ ಯೋಜನೆ ಸದ್ಬಳಕೆಗೆ ಸಲಹೆ

02:16 PM May 13, 2020 | Suhan S |

ಗದಗ: ಕೋವಿಡ್‌-19ರ ಸೋಂಕು ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್‌ಡೌನ್‌ನ್ನು ಸಡಿಲಿಕೆಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಲು ಕ್ರಮ ಜರುಗಿಸಲಾಗಿದೆ. ರೈತರ, ಕೂಲಿ ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಹೇಳಿದರು.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಮುಂಡರಗಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ಕೈಗೊಂಡ ಜಲ ಸಂವರ್ಧನೆ, ಸಂರಕ್ಷಣೆ, ರೈತರ ಜಮೀನುಗಳಲ್ಲಿ ಬದುಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಈ ಕಾಮಗಾರಿಯಡಿ 300 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಮುಂಗಾರು ಪೂರ್ವ ರೈತರ ಹೊಲಗಳಲ್ಲಿ ಮಳೆ ನೀರು ಇಂಗುವಿಕೆ, ಅಂತರ್ಜಲ ಸಂವರ್ಧನೆಗೆ ಅಗತ್ಯದ ಕಾಮಗಾರಿ ಕೈಗೊಳ್ಳಬೇಕು. ಅದಕ್ಕಾಗಿ ರೈತರ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವವರ ಖಾತೆಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಹಣ ಪಾವತಿ ಆಗುತ್ತದೆ. ಆಸಕ್ತರು ಬಳಸಿಕೊಳ್ಳಬೇಕು. ಕೋವಿಡ್‌-19 ಸೋಂಕು ನಿಯಂತ್ರಣ ಪರಿಣಾಮಕಾರಿ ತಡೆಗೆ ಹಾಗೂ ಸೋಂಕಿನಿಂದ ಸ್ವ ರಕ್ಷಣೆಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಸದಸ್ಯ ಈರಪ್ಪ ನಾಡಗೌಡ್ರ, ಮುಂಡರಗಿ ತಾಪಂ ಇಒ ಕಲ್ಮನಿ, ಬಸಾಪೂರ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next