Advertisement

ವಿದೇಶಿ ವಸ್ತು ಧಿಕ್ಕರಿಸಲು ಸಲಹೆ

10:02 AM Aug 03, 2017 | |

ತಾಳಿಕೋಟೆ: ಸ್ನೇಹತ್ವದ ಮೂಲಕ ವ್ಯಾಪಾರ ನಡೆಸಿ ಆರ್ಥಿಕವಾಗಿ ಬಲಗೊಂಡ ಮೇಲೆ ಸ್ನೇಹದ ಹಾಸಿಗೆ ಮೇಲೆ ಕೂಡಿಸಿದ ಭಾರತದೊಂದಿಗೆ ಚೀನಾ ಯುದ್ದಕ್ಕೆ ತಯಾರಿ ನಡೆಸಿದೆ. ಚೀನಾ ವಸ್ತುಗಳನ್ನು ತಿರಸ್ಕರಿಸಿ ಚೀನಾದ ಆರ್ಥಿಕತೆಯನ್ನು ಧೂಳಿಪಟ ಮಾಡಬೇಕೆಂದು ರಾಷ್ಟ್ರೀಯ ಸ್ವದೇಶಿ ಜಾಗರಣಾ ಮಂಚ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ ಹೇಳಿದರು.

Advertisement

ರಾಷ್ಟ್ರೀಯ ಸ್ವದೇಶಿ ಜಾಗರಣಾ ಮಂಚ್‌ ಜಿಲ್ಲಾ ಘಟಕ ಪಟ್ಟಣದ ವಿಠಲ ಮಂದಿರದಲ್ಲಿ ಆಯೋಜಿಸಿದ್ದ ಸ್ವದೇಶಿ ಬಳಸಿ-ವಿದೇಶಿ ಅಳಿಸಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದೇಶ ವಸ್ತುಗಳ ತಾತ್ಕಾಲಿಕ ವ್ಯಾಮೋಹದಿಂದ ದೇಶದ ಮೇಲಾಗುತ್ತಿರುವ ಆರ್ಥಿಕ ದಾಳಿ ತಗ್ಗಿಸಲು ನಾವು ಒಂದಾಗಬೇಕು. ನಮ್ಮ ದೇಶದ ಗಡಿಯನ್ನು ಅಕ್ರಮಿಸಿಕೊಂಡು ನಮ್ಮ ದೇಶಕ್ಕೆ ಚೀನಾ ರಾಷ್ಟ್ರ ಸವಾಲೆಸೆಯುತ್ತಿದೆ. ಭಯೋತ್ಪಾದನೆಗೆ ಹೆಸರಾದಂತಹ ರಾಷ್ಟ್ರಗಳಿಗೆ ಭಾರತದೊಳಗೆ ನುಗ್ಗಲು ಸೇತುವೆಯಂತೆ ಆರ್ಥಿಕ ಸಹಾಯ ಮಾಡುತ್ತಿದೆ. ರಾಷ್ಟ್ರೀಯ ಜಾಗರಣ ಮಂಚ್‌ ಹಮ್ಮಿಕೊಂಡ ಜಾಗೃತಿ ಅಭಿಯಾನದಿಂದ ಶೇ. 20ರಷ್ಟು ಚೀನಾ ವಸ್ತುಗಳ ಮಾರಾಟ ಸ್ಥಗಿತಗೊಂಡಿದೆ. ನಾವೇಲ್ಲ ನಿಜವಾದ ಭಾರತೀಯರು ಎಂಬ ಸಂಕಲ್ಪ ಮಾಡಿ ತಾತ್ಕಾಲಿಕ ಸುಖ ನೀಡುವ ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಸ್ವದೇಶಿ ವಸ್ತುಗಳ ಬಳಕೆಗೆ ಮುಂದಾಗಿ ದೇಶ ರಕ್ಷಣೆ ಮಾಡಬೇಕು ಎಂದರು.

ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಹಾವರಗಿ ಮಾತನಾಡಿ, ವಿದೇಶಿ ವಸ್ತುಗಳ ಬಳಕೆಯಿಂದ ಭಾರತ ದೇಶಕ್ಕೆ ಆರ್ಥಿಕವಾಗಿ ಆಗುತ್ತಿರುವ ನಷ್ಟ ತಪ್ಪಿಸಲು ಎಲ್ಲರೂ ಒಂದಾಗಬೇಕಾಗಿದೆ. ಉಗ್ರಗಾಮಿಗಳಿಗೆ ಸಹಾಯ ಮಾಡುತ್ತ ದೇಶಕ್ಕೆ ಗಂಡಾಂತರ
ಒಡ್ಡಿರುವ ಚೀನಾ ದೇಶವನ್ನು ಬಗ್ಗು ಬಡಿಯಲು ಚೀನಾ ವಸ್ತುಗಳ ಖರೀದಿ ನಿಲ್ಲಿಸಬೇಕಾಗಿದೆ ಎಂದರು. ವಿಠಲಸಿಂಗ್‌ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನದ ಜಿಲ್ಲಾಧ್ಯಕ್ಷ ಎಸ್‌.ಎಚ್‌. ನಾಡಗೌಡ, ಗಿರೀಶ ನೀಲಗುಂದ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಹಿಪ್ಪರಗಿ, ಶ್ರೀಕಾಂತ ಪತ್ತಾರ, ರಾಘವೇಂದ್ರ ವಿಜಾಪುರ, ಮುನ್ನಾ ಠಾಕೂರ, ಬಸನಗೌಡ ಮಾಲಿಪಾಟೀಲ, ಅಶೋಕ ಹಂಚಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next