Advertisement

ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳಲು ಸಲಹೆ

12:10 PM Jan 11, 2022 | Team Udayavani |

ಜೇವರ್ಗಿ: ಯಾವುದೇ ಭಾಷೆ ಮೇಲು- ಕೀಳಲ್ಲ. ಪ್ರತಿಯೊಂದು ಭಾಷೆಗೆ ತನ್ನದೇ ಆದ ಮಹತ್ವವಿದೆ. ಮಾತೃಭಾಷೆಯನ್ನು ಹೃದಯಾಂತರಾಳದಿಂದ ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸಬೇಕು. ಇದರಿಂದ ಭಾಷಾ ತಾರತಮ್ಯ ನಿವಾರಣೆಯಾಗಲು ಸಾಧ್ಯವಿದೆ. ಎಲ್ಲ ಭಾಷೆಗಳನ್ನು ಗೌರವಿಸುವ ಭಾಷಾ ಸಾಮರಸ್ಯ ಮೈಗೂಡಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿದೆ ಎಂದು ಕಲಬುರಗಿ ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಪಿಯು ಕಾಲೇಜಿನ ಹಿಂದಿ ಉಪನ್ಯಾಸಕ ಜಮೀಲ್‌ ಅಹಮ್ಮದ್‌ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದ ಸಹಯೋಗದೊಂದಿಗೆ ಹಿಂದಿ ವಿಭಾಗದ ವತಿಯಿಂದ ಸೋಮವಾರ ಜರುಗಿದ “ವಿಶ್ವ ಹಿಂದಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

1975ರ ಜನವರಿ 10ರಂದು ನಾಗಪುರನಲ್ಲಿ ಹಿಂದಿ ಭಾಷೆಗೆ ಸಂಬಂಧಿ ಸಿದಂತೆ ಬೃಹತ ಸಮ್ಮೇಳನ ಜರುಗಿತು. ಹಿಂದಿ ಭಾಷೆಯ ಮಹತ್ವವನ್ನು ಸಾರುವ ದಿಕ್ಸೂಚಿ ಸಮ್ಮೇಳನ ಇದಾಗಿದೆ. ಅದರ ಸವಿನೆನಪಿಗಾಗಿ ಪ್ರತಿವರ್ಷ ಜನವರಿ 10ರಂದು “ವಿಶ್ವ ಹಿಂದಿ ದಿನವನ್ನು ಆಚರಿಸಲಾಗುತ್ತದೆ. ಹಿಂದಿ ಭಾಷೆಯು ರಾಷ್ಟಭಾಷೆಯಾಗಿದ್ದು, ಸರಳ ಹಾಗೂ ಸುಂದರವಾಗಿದೆ. ಇದು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಒಳಗೊಂಡಂತೆ ಎಲ್ಲರಿಗೂ ಅರ್ಥವಾಗುವ, ಮಾತನಾಡುವ ಭಾಷೆಯಾಗಿದ್ದು, ಇದು ದೇಶದ ಉದ್ದಗಲಕ್ಕೂ ವ್ಯಾಪಿಸಿದೆ. ಹಿಂದಿ ಭಾಷೆಯು ದೇಶದ ಸಂಸ್ಕೃತಿ, ಪರಂಪರೆಯ ರಾಯಭಾರಿಯಾಗಿ ಪ್ರತಿನಿಧಿಸುತ್ತದೆ ಎಂದರು.

ಪ್ರಾಚಾರ್ಯ ಮೊಹಮ್ಮದ್‌ ಅಲ್ಲಾ ಉದ್ದೀನ್‌ ಸಾಗರ, ಎನ್‌.ಎಸ್‌. ಎಸ್‌ ಅದಿಕಾರಿ ಎಚ್‌.ಬಿ.ಪಾಟೀಲ, ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ರವೀಂದ್ರಕುಮಾರ ಬಟಗೇರಿ, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿ, ಅತಿಥಿ ಉಪನ್ಯಾಸಕರಾದ ರಂಜಿತಾ ಠಾಕೂರ್‌, ಲಾಡ್ಲೆಮಶಾಕ್‌ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next