Advertisement

ಬೆಳೆಗಳ ರೋಗಗಳಿಗೆ ವಿಜ್ಞಾನಿಗಳ ಸಲಹೆ

02:09 PM May 15, 2020 | Suhan S |

ರಾಣಿಬೆನ್ನೂರ: ಜಿಲ್ಲೆಯಲ್ಲಿ ಟೊಮ್ಯಾಟೊ, ಸವತೆಕಾಯಿ ಮತ್ತು ಹಸಿ ಮೆಣಸಿನಕಾಯಿಯಲ್ಲಿ ಕಂಡು ಬರುತ್ತಿರುವ ವಿವಿಧ ರೋಗಗಳಿಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

Advertisement

ತಾಲೂಕಿನ ಚೌಡಯ್ಯದಾನಪುರ ಗ್ರಾಮಕ್ಕೆ ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿಯ ಮುಖ್ಯಸ್ಥ ಡಾ| ಅಶೋಕ ಪಿ. ಹಾಗೂ ಕೃಷಿ ಕಾಲೇಜಿನ ಕೃಷಿ ಅಭಿಯಂತರರು, ಡಾ| ನೀಲಕಾಂತ ಜೊತೆಗೆ ಕೃಷಿ ಕಾಲೇಜಿನ ಸಸ್ಯರೋಗ ಪ್ರಾಧ್ಯಾಪಕ ಡಾ| ರವಿಕುಮಾರವರು ಭೇಟಿ ನೀಡಿ ರೋಗಗಳ ನಿರ್ವಹಣೆ ಕುರಿತು ಮತ್ತು ಕೋವಿಡ್‌-19 ರೋಗದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದರು.

ಟೊಮ್ಯಾಟೊ ಬೆಳೆಯನ್ನು ಎಲ್ಲ ವಿಧವಾದ ಮಣ್ಣುಗಳಲ್ಲಿ ಬೆಳೆಯಲಾಗುತ್ತಿದೆ. ಇದಕ್ಕೆ ಕಾಂಡ ಕೊಳೆ ರೋಗ ಬಂದಾಗ ಗಿಡದ ಎಲೆಗಳು ಜೋತು ಬೀಳುತ್ತವೆ. ಕಾಂಡದ ಭಾಗದಲ್ಲಿ ಕೊಳೆಯುತ್ತದೆ. ಕಾಂಡದ ಸುತ್ತಲೂ ಬಿಳಿ ಬಣ್ಣದಿಂದ ಕೂಡಿದ ಶೀಲೀಂದ್ರವು ಬೆಳೆಯುತ್ತಿರುವುದು ಕಂಡುಬರುತ್ತದೆ. ಈ ರೋಗದ ರೋಗಾಣು ಮಣ್ಣಿನಲ್ಲಿ ಇದ್ದು, ಮಣ್ಣಿನ ಮುಖಾಂತರ ಮತ್ತು ನೀರಿನ ಮುಖಾಂತರ ಹರಡುತ್ತದೆ. ಈ ರೋಗಾಣು ಸಿಕ್ಲಿರೋಷಯಂ ರೊಟ್ಟಸಿ ಎಂಬ ಶೀಲೀಂದ್ರದಿಂದ ಬರುತ್ತದೆ.

ಈ ರೋಗಾಣುವಿಗೆ ಹೆಚ್ಚಿನ ಒಣ ಹವೆ ಮತ್ತು ಕಡಿಮೆ ತೇವಾಂಶ ಇದ್ದರೆ ಈ ರೋಗವು ತೀವ್ರಕ್ಕೆ ಹೆಚ್ಚಾಗುತ್ತದೆ. ಈ ರೋಗದ ಹತೋಟಿಗಾಗಿ ರೋಗವಿರುವ ಭೂಮಿಯಿಂದ ಬೇರೆ ಕಡೆ ನೀರನ್ನು ಹಾಯಿಸಬಾರದು. ಪ್ರತಿವರ್ಷ ಒಂದೇ ಭೂಮಿಯಲ್ಲಿ ಒಂದೆ ತರಹದ ಬೆಳೆಗಳನ್ನು ಬೆಳೆಯಬಾರದು. ಭೂಮಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಜೈವಿಕ ಜೀವಿಗಳನ್ನು ಬೆರೆಸಿ ಹಾಕಬೇಕು. ರೋಗ ಕಂಡ ತಕ್ಷಣ ಗಿಡದ ಬುಡಕ್ಕೆ ವೀಟಾವ್ಯಾಕ್ಸ್‌ ದ್ರಾವಣ (2.5 ಗ್ರಾಂ ಪ್ರತಿ ಲೀಟರ್‌ ನೀರಿಗೆ)ವನ್ನು ಗಿಡದ ಬುಡಕ್ಕೆ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next