Advertisement

ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರಿಂದ ಸಲಹೆ

12:13 PM Jan 06, 2020 | Suhan S |

ಗುಳೇದಗುಡ್ಡ: ಪಟ್ಟಣದ ಪುರಸಭೆ ಸಭಾಭವನದಲ್ಲಿ ರವಿವಾರ ನಡೆದ ಪುರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಕಳೆದ ವರ್ಷ ನೀಡಿದ ಸಲಹೆಗಳನ್ನು ಕಾರ್ಯರೂಪಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡುವಂತೆ ನಿವಾಸಿಗಳು ಆಗ್ರಹಿಸಿದರು.

Advertisement

ಪೂರ್ವಭಾವಿ ಸಭೆ ಆರಂಭವಾಗುತ್ತಿದ್ದಂತೆ ಗದ್ದಲದ ವಾತಾವರಣ ಕಂಡುಬಂದಿತು. ಪಟ್ಟಣದಲ್ಲಿ ನೀರು ಬಂದಾಗ ರಸ್ತೆ ಮೇಲೆ ನೀರು ಹರಿಯುತ್ತದೆ. ಕೆಲವು ಮನೆಗಳಿಗೆ ನೀರಿನ ಕರ ವಸೂಲಿಗೆ ನಲ್ಲಿಗಳಿಗೆ ಮೀಟರ್‌ ಅಳವಡಿಸಿದರೆ, ಇನ್ನೂ ಸಾಕಷ್ಟು ಮನೆಗಳಿಗೆ ನಲ್ಲಿಗೆ ಮೀಟರ್‌ ಅಳವಡಿಸಿಲ್ಲ, ಪಟ್ಟಣದಲ್ಲಿ ಕಳೆದ 20 ವರ್ಷಗಳ ಹಿಂದೆ ಪುರಸಭೆ ಮಳಿಗೆಗಳಿಗೆ ಲೀಜ್‌ ನೀಡಿದ್ದು, ಅವುಗಳ ದರ ಹೆಚ್ಚಿಸಿಲ್ಲ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಮಹಿಳಾ ಶೌಚಾಲಯಗಳು ನಿರ್ವಹಣೆ ಇಲ್ಲದೇ ನಿರುಪಯುಕ್ತವಾಗಿದ್ದರೂ ಅವುಗಳಿಗೆ ಅನುದಾನ ಖರ್ಚು ಮಾಡುವುದಂತೂ ತಪ್ಪಿಲ್ಲ. ಒಳಚರಂಡಿ ಲೈನ್‌ ಗಳು ಕೆಲ ವಾರ್ಡ್‌ಗಳಲ್ಲಿ ಸಮರ್ಪಕವಾಗಿರದ ಕಾರಣ ಚರಂಡಿ ನೀರು ಮನೆಗಳಲ್ಲಿ ಬರುತ್ತಿದೆ. ಹೀಗೆ ಹತ್ತಾರು ಸಮಸ್ಯೆಗಳನ್ನು ನಿವಾಸಿಗಳು ಮುಂದಿಟ್ಟರು.

ಅಭಿಯಂತರ ಕೊಡಕೇರಿ ಪ್ರಸಕ್ತ ಸಾಲಿನಲ್ಲಿ ನೀರಿನ ಕರ, ಮನೆ ಕರ, ವಾಣಿಜ್ಯ ಮಳಿಗೆ ಕರ ಇತ್ಯಾದಿ ಸೇರಿ ಒಟ್ಟು ರೂ. 1.23 ಕೋಟಿ ಅಂದಾಜು ಆದಾಯ ಬರುವ ನಿರೀಕ್ಷೆ ವ್ಯಕ್ತಪಡಿಸಿದರೆ, 1.58 ಕೋಟಿ ನಿರೀಕ್ಷಿತ ಖರ್ಚು ಇರುವುದಾಗಿ ಸಭೆಗೆ ತಿಳಿಸಿದರು.

ಸಲಹೆಗಳು: ತ್ಯಾಜ್ಯದಿಂದ ಮರುಬಳಕೆ ಮಾಡುವುದು, ವಾಣಿಜ್ಯ ಮಳಿಗೆಗಳ ಲೀಜ್‌ ಮರುಪರಿಶೀಲಿಸಿ ದರ ಹೆಚ್ಚಿಸುವುದು, ಕುಡಿಯುವ ನೀರಿನ ನಲ್ಲಿಗಳಿಗೆ ಮೀಟರ್‌ ಅಳವಡಿಕೆ, ಪರವಾನಗಿಯಿಲ್ಲದ ಕಟ್ಟಡಗಳಿಗೆ ಪರವಾನಗಿ ನೀಡುವುದು, ನಿರುಪಯುಕ್ತ ಕೆಲ ಪುರಸಭೆ ಆಸ್ತಿಗಳನ್ನು ಬಾಡಿಗೆಗೆ ನೀಡುವುದು ಸೇರಿದಂತೆ ಇನ್ನೂ ಅನೇಕ ಉಪಯುಕ್ತ ಸಲಹೆಗಳನ್ನು ಪುರಸಭೆ ಸದಸ್ಯರು ಹಾಗೂ ಸಭಿಕರು ಅಧಿಕಾರಿಗಳಿಗೆ ನೀಡಿದರು.

Advertisement

ಆಲಮಟ್ಟಿಯಿಂದ ಗುಳೇದಗುಡ್ಡಕ್ಕೆ ಪೂರೈಕೆಯಾಗುವ ಕುಡಿಯುವ ನೀರಿಗೆ ವಿದ್ಯುತ್‌ ಬಿಲ್‌, ಕಾರ್ಮಿಕರ ವೇತನ, ದುರಸ್ತಿ ಸೇರಿ ವರ್ಷಕ್ಕೆ ಲಕ್ಷಾಂತರ ರೂ. ಖರ್ಚು ಬರುತ್ತದೆ ಎಂದು ಅ ಧಿಕಾರಿಗಳು ಹೇಳುತ್ತಿದ್ದಂತೆ, ಪುರಸಭೆ ಸದಸ್ಯರು ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ಉಮೇಶ ಹುನಗುಂದ, ಯಲ್ಲಪ್ಪ ಮನ್ನಿಕಟ್ಟಿ, ಅಮರೇಶ ಕವಡಿಮಟ್ಟಿ, ವಿಠuಲಸಾ ಕಾವಡೆ, ರಫೀಕ್‌ ಅಹಮ್ಮದ ಕಲಬುರ್ಗಿ, ಪ್ರಶಾಂತ ಜವಳಿ, ರಾಜಶೇಖರ ಹೆಬ್ಬಳ್ಳಿ, ಶಾಂ ಸುಂದರ್‌ ಮೇಡಿ, ಮಾಜಿ ಅಧ್ಯಕ್ಷರಾದ ನಾಗಪ್ಪ ಗೌಡ್ರ, ವೈ.ಆರ್‌.ಹೆಬ್ಬಳ್ಳಿ, ಮಾಜಿ ಉಪಾದ್ಯಕ್ಷ ಪ್ರಕಾಶ ಮುರಗೋಡ, ಸ್ಥಾಯಿ ಸಮೀತಿ ಮಾಜಿ ಅಧ್ಯಕ್ಷ ಅಶೋಕ ಹೆಗಡಿ, ಮುಬಾರಕ ಮಂಗಳೂರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next