ಸುರಪುರ: ಯುವಕರು ಉತ್ತಮ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಮಾಜಮುಖೀಯಾಗಿ ಬೆಳೆಯಬೇಕು ಎಂದು ಕಲಬುರಗಿ, ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ| ಸುರೇಶ ಆರ್. ಸಜ್ಜನ್ ಹೇಳಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕಲಾವಿದರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಭಾಗದ ಕಲೆ ನಶಿಸಿ ಹೋಗುತ್ತಿವೆ ಎಂದರು. ಕಲ್ಯಾಣ ಕರ್ನಾಟಕ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿದ್ದರು.
ಸುಗೂರೇಶ ವಾರದ ದಿನದರ್ಶಿಕೆ ಬಿಡುಗಡೆ ಮಾಡಿದರು. ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ ಜಾಲಹಳ್ಳಿ, ಕೋಶಾಧ್ಯಕ್ಷ ಬಸವರಾಜ ಬೂದಿಹಾಳ, ಉಪಾಧ್ಯಕ್ಷ ಸಿದ್ದನಗೌಡ ಹೆಬ್ಟಾಳ, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಶಾಂತು ನಾಯಕ,ಪ್ರಕಾಶ ಅಂಗಡಿ ವೇದಿಕೆ ಮೇಲಿದ್ದರು. ವಿಶಾಲ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.
34 ಜನ ಕಲಾವಿದರನ್ನು ಸನ್ಮಾನಿಸಲಾಯಿತು. ಶರಣು ಕುಮಾರ ಯಾಳಗಿ ಪ್ರಾರ್ಥಿಸಿದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು. ಮಲ್ಲು ಬಾದ್ಯಾಪುರ ಸ್ವಾಗತಿಸಿದರು. ದೇವರಾಜ ನಂದಗಿರಿ ವಂದಿಸಿದರು.