ಬೆಂಗಳೂರು: ದೇಶದ ಒಳಿತಿಗಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಶ್ರಮಿಸಿ, ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಿ ಎಂದು ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ)ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಗೋಪಾಲ್ ಗೌಡ ಅವರು ಕರೆ ನೀಡಿದರು.
ಇತೀ¤ಚೆಗೆ ನಗರದ ಇನ್‌ಸೈಟ್ ಐಎಎಸ್ ಸಂಸ್ಥೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ, ಗೋಪಾಲ್ ಗೌಡ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ದೇಶ ಕಟ್ಟುವಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯವಾಗುತ್ತದೆ. ಅದರತ್ತ ನಿಮ್ಮ ಧ್ಯೇಯವಿರಲಿ ಎಂದು ಹರಸಿದರು.
ನಗರ ಪೋಲಿಸ್ ಆಯುಕ್ತ ಸುನೀಲ್ ಕುಮಾರ್ ಅವರು ಮಾತನಾಡಿ, ದೇಶದ ಅತ್ಯುನ್ನತವಾದ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೀರಿ. ನಾಗರಿಕ ಸೇವೆ ಮಾಡಲು ಇದು ಉತ್ತಮ ಅವಕಾಶ. ಜನಸ್ನೇಹಿಯಾಗಿ ಒಳ್ಳೆಯ ಕೆಲಸಗಳನ್ನು ಮಾಡಲು ಸಲಹೆ ನೀಡಿದರು.
ಈ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿ ಇನ್‌ಸೈಟ್ ಸಂಸ್ಥೆ ಕಳೆದ ಏಳು ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ನೀಡುತ್ತಿದ್ದು, ಈ ವರ್ಷ 70 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿರುತ್ತಾರೆ.
2016ನೇ ಸಾಲಿನಲ್ಲಿ ದೇಶಕ್ಕೆ ಮೊದಲ ರ್‍ಯಾಂಕ್ ತಂದುಕೊಟ್ಟ ನಂದಿನಿಯವರು ಇನ್‌ಸೈಟ್ಸ್ ವಿದ್ಯಾರ್ಥಿಯಾಗಿದ್ದು, ಅವರ ಸಾಧನೆಗೆ ಸಂಸ್ಥಾಪಕ ಮತ್ತು ನಿರ್ದೇಶಕರೂ ಆದ ವಿನಯ್ ಕುಮಾರ್ ಜಿ.ಬಿ. ಅವರು ಶ್ರಮಿಸಿದ್ದಾರೆ.
2019ನೇ ಸಾಲಿನಲ್ಲಿ 4, 5, 8, 17ನೇ ರ್‍ಯಾಂಕ್‌ಗಳನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಬೆಂಗಳೂರು ಶಾಖೆ ಮುಖ್ಯಸ್ಥ ತಿಳಿಸಿದರು. ಬೆಂ.ಪೂರ್ವ ಹೆಚ್ಚುವರಿ ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಇನ್ಸ್‌ಸೈಟ್ಸ್ ಐಎಎಸ್ ಸಂಸ್ಥಾಪಕ ನಿರ್ದೇಶಕ ವಿನಯ್ ಕುಮಾರ್ ಇತರರಿದ್ದರು.