Advertisement
ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಉಪ ಯೋಜನೆಯಡಿ ನಡೆದ ಗಿರಿಜನ ಉತ್ಸವ 2020-21 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಇಲಾಖೆಯ ಮುದ್ದೇಬಿಹಾಳ ತಾಲೂಕು ವಿಸ್ತೀರ್ಣಾಧಿಕಾರಿ ಲಿಂಗು ಜಾಧವ, ನಿವೃತ್ತಶಿಕ್ಷಕ ಎಸ್.ಸಿ. ಹುಲ್ಲೂರ, ಕಲಾವಿದ ವೀರಭದ್ರಪ್ಪ ದಳವಾಯಿ, ತುಮಕೂರಿನಕಲಾವಿದ ಲೋಕೇಶ, ಗ್ರಾಮದಹಿರಿಯರಾದ ಓಬಳೆಪ್ಪ ಪಟ್ಟಣದ, ಎಸ್.ಬಿ.ಕನ್ನೂರ, ಬಾಬು ದೇಶಮುಖ, ಎನ್.ಎಸ್.ಹುಲ್ಲೂರ, ಬಯಲಾಟ ಅಕಾಡೆಮಿ ಸದಸ್ಯಸಿದ್ದು ಬಿರಾದಾರ, ನೀನಾಸಂ ಕಲಾವಿದಗಣೇಶ ಹೆಗ್ಗೊàಡು, ಶಿವಕುಮಾರ ಮತ್ತಿತರುವೇದಿಕೆಯಲ್ಲಿದ್ದರು.
ಕಲಾ ಪ್ರದರ್ಶನ: ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾ ತಂಡಗಳಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡವು.ದಕ್ಷಿಣ ಕನ್ನಡ ಜಿಲ್ಲೆ ಶಿರಸಿಯ ರಾಷ್ಟ್ರೀಯಭಾವೈಕ್ಯತಾ ಕಲಾ ಬಳಗದ ಶಿವಲೀಲಾಮೃತಪೌರಾಣಿಕ ನೃತ್ಯ ರೂಪಕ, ಅದರಲ್ಲಿನ ಶಿವ,ಪಾರ್ವತಿ, ಗಣೇಶ ವೇಷಧಾರಿಗಳ ನೃತ್ಯ,ಉತ್ತರಕನ್ನಡದ ಹೊಂಗಿರಣ ಕಲಾ ತಂಡದಸೂತ್ರದ ಗೊಂಬೆಗಳ ಏಕಲವ್ಯ ಪ್ರಹಸನ ಪ್ರದರ್ಶನ, ಹೆಜ್ಜೆ ಕುಣಿತ, ಹೆಣ್ಣು ಮಕ್ಕಳ ಡೊಳ್ಳಿನ ನೃತ್ಯ ಪ್ರದರ್ಶನ, ವೀರಗಾಸೆ, ಏಕ್ತಾರಿ ಪದಗಳು, ಸಂಪ್ರದಾಯ ಪದಗಳು, ಜಾನಪದ ಗೀತ ಗಾಯನ, ಡೊಳ್ಳಿನಪದಗಳು, ಯಕ್ಷಗಾನ ಮುಂತಾದವುಗಳು ಹೆಚ್ಚು ಗಮನ ಸೆಳೆದವು