ಬೀದರ: ಭ್ರೂಣ ಹತ್ಯೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆಎಂಬುದನ್ನು ಮನದಟ್ಟು ಮಾಡುವ ಮೂಲಕ ಪ್ರತಿಯೊಂದು ಹೆಣ್ಣು ಮಗುವಿನ ಜೀವ ಉಳಿಸುವ ಕಾರ್ಯ ಮಾಡೋಣ ಎಂದು ಡಿಸಿ ರಾಮಚಂದ್ರನ್ ಆರ್. ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿನಡೆದ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವರು ಅನುಮತಿ ಇಲ್ಲದೇ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಡೆಸುವ ಸಾಧ್ಯತೆಗಳು ಕೂಡ ಇರುತ್ತವೆ. ಇದನ್ನು ಗಮನಿಸಬೇಕು. ಇಂತಹಕಡೆಗಳಲ್ಲಿಯೇ ಭ್ರೂಣ ಪತ್ತೆ ನಡೆಯುತ್ತವೆ.ಇದಕ್ಕೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಈಗಿರುವ ಎಲ್ಲ ಸ್ಕ್ಯಾನಿಂಗ್‌ಸೆಂಟರ್ ಗಳು ಮಾನ್ಯತೆ ಹೊಂದಿರುವ ಬಗ್ಗೆಪರಿಶೀಲಿಸಬೇಕು. ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಅನುಸಾರ ಅವುಗಳು ಕಾರ್ಯನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನುಪರಿಶೀಲಿಸಬೇಕು. ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಡ್ಡಾಯ ನೋಂದಣಿ ಪ್ರಮಾಣಪತ್ರ ಮತ್ತು ಅವುಗಳು ಪಡೆದುಕೊಂಡಿರುವ ಲೈಸೆನ್ಸ್ ಪತ್ರ ಎರಡನ್ನೂ ಎಲ್ಲರೂ ನೋಡುವ ಜಾಗದಲ್ಲಿ ಕಾಣುವಂತೆ ಅಳವಡಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಗಳಲ್ಲಿ ಮಕ್ಕಳನ್ನುಮಾರಾಟ ಮಾಡುವುದಾಗಲಿ ಮತ್ತುತೆಗೆದುಕೊಳ್ಳುವುದಾಗಲಿ ಮಾಡಿದರೆ ಜೈಲುಶಿಕ್ಷೆ ಮತ್ತು ದಂಡ ವಿಧಿ ಸಲಾಗುವುದು ಎಂಬಎಚ್ಚರಿಕೆ ನೀಡಬೇಕು. ಮಕ್ಕಳ ಮಾರಾಟ ಮಾಡುವವರಿಗೆ ಕೊಳ್ಳುವವರಿಗೆಬಾಲನ್ಯಾಯ ಕಾಯ್ದೆ ಪ್ರಕಾರ ಐದು ವರ್ಷಗಳ ಜೈಲು ಮತ್ತು ಲಕ್ಷ ರೂ.ದಂಡ ವಿಧಿಸಲಾಗುವುದು ಎನ್ನುವ ಟಿನ್ ಪ್ಲೇಟ್‌ನ್ನು ಪ್ರತಿಯೊಂದುಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಲುಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಲಿದೆ. ತಾವು ಮತ್ತು ಸಿಇಒ ಅವರು ಸೇರಿ ಪ್ರತಿ ತಿಂಗಳು ಒಂದು ದಿನ ಅನಿರೀಕ್ಷಿತವಾಗಿ ಸ್ಕ್ಯಾನಿಂಗ್‌ಸೆಂಟರ್‌ಗಳ ಭೇಟಿ ಮಾಡುವುದಾಗಿ ಹೇಳಿದರು.
ಹೆಣ್ಣು ಮಕ್ಕಳ ಸಂಖ್ಯೆ ಅತೀ ಕಡಿಮೆ ಇರುವ ಬೀದರ ತಾಲೂಕಿನಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ, ಹೆಚ್ಚಿನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಹೆಣ್ಣು ಭ್ರೂಣಹತ್ಯೆ ತಡೆಗೆ ಕ್ರಮ ವಹಿಸಬೇಕು ಎಂದು ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅವರು ಅಧಿಕಾರಿಗಳಿಗಿದೆ ಎಂದು ಸೂಚನೆ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ ಮಾತನಾಡಿ, ಔರಾದನಲ್ಲಿ 2,ಬಸವ ಕಲ್ಯಾಣ 13, ಭಾಲ್ಕಿ 8, ಬೀದರನಲ್ಲಿ 40, ಚಿಟಗುಪ್ಪಾ 1 ಮತ್ತು ಹುಮನಾಬಾದ 6 ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಸೇರಿ ಒಟ್ಟು 70 ಸ್ಕಾ ಸ್ಕ್ಯಾನಿಂಗ್‌ಸೆಂಟರ್‌ಗಳಿವೆ. 54 ಖಾಸಗಿ ಮತ್ತು 7 ಸರ್ಕಾರಿ ಸ್ಕ್ಯಾನಿಂಗ್‌ಸೆಂಟರ್‌ಗಳಿವೆ ಎಂದು ಮಾಹಿತಿ ನೀಡಿದರು.
ಪೌರಾಯುಕ್ತ ಅಂಗಡಿ, ಡಿಎಚ್‌ಒ ಡಾ.ವಿ.ಜಿ.ರೆಡ್ಡಿ, ಡಿವೈಎಸ್‌ಪಿ ಬಸವರಾಜ ಹೀರಾ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್. ಹಾಗೂ ಇತರರು ಇದ್ದರು.