Advertisement
ವಿವಿಧ ಕಂಪನಿಗಳು ತಮ್ಮ ಗ್ರಾಹಕರ ಸೇವೆಗಾಗಿ ತಮ್ಮದೇ ಆ್ಯಪ್‌ಗ್ಳನ್ನು ಸಿದ್ದಪಡಿಸಿ, ಆ್ಯಪ್‌ಗ್ಳನ್ನು ಬಳಸುವಂತೆ ಗ್ರಾಹಕರನ್ನು ಸೆಳೆಯಲು ವಿವಿಧ ಮಾರ್ಗಗಳನ್ನು ಹುಡುಕುತ್ತವೆ. ಅದರಂತೆ ತಮ್ಮ ತಂಡವೊಂದು ಅಭಿವೃದ್ಧಿಪಡಿಸಿದ ಆ್ಯಪ್ ಅನ್ನು ಪ್ರಚಾರ ಮಾಡಲು ಟೆಕ್ಕಿ “ಕನ್ನಡ ಮಾತನಾಡುವ ಗ್ರಾಹಕರು ಇರುವಾಗ ನಾವೇಕೆ ಕನ್ನಡದಲ್ಲಿ ಜಾಹೀರಾತು ಮಾಡಬಾರದು’ ಎಂಬ ನಾಮಫಲಕ ಹಿಡಿದು ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ಸಿಲ್ವರ್ ಜ್ಯುಬಿಲಿ ರಸ್ತೆ, ಬ್ರಿಗೇಡ್ ರಸ್ತೆ ಮುಂತಾದೆಡೆ ಹೋದಲೆಲ್ಲಾ ಈ ರೀತಿ ಬರಹವಿರುವ ನಾಮಫಲಕ ಹಿಡಿದು ಪ್ರಚಾರ ಮಾಡುವ ಮೂಲಕ ಕನ್ನಡ ಪ್ರೇಮ ಮೆರೆಯುತ್ತಿದ್ದಾನೆ.
Related Articles
Advertisement
ಕನ್ನಡವೇ ಮುಖ್ಯ: ಇಂದು ವಿದೇಶಿ ಮತ್ತು ಸ್ವದೇಶಿ ಕಂಪನಿಗಳು ವಿವಿಧ ಆ್ಯಪ್‌ಗ್ಳನ್ನು ಸಿದ್ದಪಡಿಸಿ ಅದರ ಪ್ರಯೋಜನ ಪಡೆಯುವಂತೆ ಇಂಟರ್‌ನೆಟ್ ಮೂಲಕ ಪ್ರಚಾರ ಮಾಡುತ್ತಾರೆ. ಆದರೆ ಯಾವುದೇ ಕಂಪನಿಯ ಆ್ಯಪ್‌ಗ್ಳನ್ನು ಹೆಚ್ಚಿನದಾಗಿ ಬಳಸುವುದು ನಮ್ಮ ಕನ್ನಡಿಗರೇ, ಈಗಿರುವಾಗ ಕನ್ನಡಿಗರಿಗೆ ಕನ್ನಡದಲ್ಲೇ ಜಾಹೀರಾತು ಪ್ರಚಾರ ಮಾಡುವ ಅವರ ಆ್ಯಪ್‌ದೋಷಗಳ ಬಗ್ಗೆ ಮೊದಲು ಗ್ರಾಹಕರ ಮೂಲಕವೇ ಫೇಸ್‌ಬುಕ್ ಮತ್ತು ವ್ಯಾಟ್ಸ್ ಆ್ಯಪ್ ಮೂಲಕ ತಿಳಿಸಲಾಗುತ್ತದೆ ಎಂದು ಆ್ಯಪ್ ಅಚ್ಚಿ ಡಾಟ್‌ಕಂ ನ ಮಾರ್ಕೆಟಿಂಗ್ ಪ್ರತಿನಿಧಿ ಜನಾರ್ದನ್ ವಿವರಿಸುತ್ತಾರೆ.
ಇಂಗ್ಲಿಷ್ ಬಿಟ್ಟು ಕನ್ನಡದಲ್ಲಿ ತಮ್ಮ ಆ್ಯಪ್ ಪ್ರಚಾರ ಮಾಡುತ್ತಿರುವ ಪಟ್ಟಣದ ಜನಾರ್ದನ್ ಮೊದಮೊದಲು ಮುಜುಗರದಿಂದಲೇ ಕನ್ನಡದಲ್ಲಿ ಪ್ರಚಾರ ಮಾಡಲು ಆರಂಭಿಸಿದರು. ಇವರ ಪ್ರಯತ್ನಕ್ಕೆ ಅವರ ಸ್ನೇಹಿತರು, ಅವರ ಸ್ನೇಹಿರು, ಕನ್ನಡಾಭಿಮಾನಿಗಳು, ಕಾಲೇಜು ಯುವಕರು ಸೇರಿದಂತೆ ವಿವಿಧ ಸಂಘಟನೆಗಳು ವಿವಿಧ ಸಂಘ-ಸಂಸ್ಥೆಗಳ ಬೆಂಬಲ ದೊರೆತಿದ್ದು, ಇಂದು ಮತ್ತಷ್ಟು ಉತ್ಸುಕತೆಯಿಂದ ಪ್ರಚಾರಕ್ಕೆ ತೊಡಗಿ, ಕನ್ನಡತನವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ.
ತಮ್ಮ ಆ್ಯಪ್‌ಅಚ್ಚಿ ಡಾಟ್ ಕಾಂನಲ್ಲಿ ಪ್ರಚಾರಕ್ಕೆ ಆರ್ಥಿಕ ಸಮಸ್ಯೆ ಎದುರಾಗ ಕನ್ನಡ ಪ್ರಚಾರದ ಬಗ್ಗೆ ಚಿಂತನೆ ನಡೆಸಿದೆವು. ಇದಕ್ಕೆ ಸಂಪೂರ್ಣ ಬೆಂಬಲ ದೊರೆತು ಹಲವು ಆ್ಯಪ್‌ಗ್ಳ ಕಂಪನಿ ಬಿಲ್ಡ್‌ಗಳು ತಮ್ಮ ಆ್ಯಪ್‌ನ ದೋಷ ಪರಿಹರಿಸಿಕೊಂಡಿದ್ದಾರೆ. -ಪ್ರದೀಪ್, ಆ್ಯಪ್‌ಅಚ್ಚಿ ಡಾಟ್ ಕಾಂ. ಇಂದು ರಾಜ್ಯದಲ್ಲಿ ಕನ್ನಡತನ ಮರೆಯಾಗಿದೆ. ಎಲ್ಲೆಲ್ಲೂ ಪರಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ. ಈ ನಡುವೆ ತಮ್ಮ ಸಂಸ್ಥೆಯ ಆ್ಯಪ್‌ನ ಪ್ರಚಾರವನ್ನು ಕನ್ನಡದಲ್ಲಿ ಪ್ರಚಾರ ಮಾಡಲು ಮುಂದಾಗಿರುವ ಪಟ್ಟಣದ ಯುವಕನ ಕನ್ನಡ ಪ್ರೇಮ ಶ್ಲಾಘನೀಯ.
-ರಮೇಶ್‌ಗೌಡ, ರಾಜಾಧ್ಯಕ್ಷರು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ. * ಸಿ.ಎನ್.ವೆಂಕಟೇಶ್