Advertisement

ಐಪಿಎಲ್‌ನಲ್ಲಿ ಜಾಹೀರಾತು ಕಾವು

09:19 AM Apr 16, 2019 | keerthan |

ಐಪಿಎಲ್‌ ಕಾವು ಏರುತ್ತಿದೆ. ಇದರಲ್ಲಿ ಅತಿ ಹೆಚ್ಚು ಲಾಭ ಮಾಡಿ ಕೊಳ್ಳುತ್ತಿರುವವರು ಜಾಹೀರಾತುದಾರರು. ಕಳೆದ ವರ್ಷಕ್ಕಿಂತ ಈ ವರ್ಷ ಜಾಹೀರಾತುದಾರರು ಶೇ. 25ರಷ್ಟು ಹೆಚ್ಚಿದ್ದಾರಂತೆ. ಈ ಬಾರಿ ಸುಮಾರು 12 ಕಂಪೆನಿಗಳು ಇಡೀ ಐಪಿಎಲ್‌ ಹಬ್ಬವನ್ನು ಹಂಚಿಕೊಂಡಿವೆ. ವಿವೋ, ಕೋಕ್‌, ಮಾರುತಿಯಂಥ ಕಂಪನಿಗಳು ಅತಿ ಹೆಚ್ಚು ಎನ್ನುವಷ್ಟು ಈ ಐಪಿಎಲ್‌ ಜಾಹೀರಾತಿಗಾಗಿಗೆ ಹೂಡಿಕೆ ಮಾಡಿರುವುದರಿಂದಲೇ ಹಬ್ಬದ ರಂಗು ಬದಲಾಗಿರುವುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

Advertisement

ಐಪಿಎಲ್‌ ರೇಟ್‌ ಕಾರ್ಡ್‌ ನೋಡಿದರೆ ಭಯವಾಗುತ್ತದೆ. ಸಹಪ್ರಾಯೋಜಕತ್ವ ಬೇಕು ಅಂತಾದರೆ ಟೆಲಿವಿಷನ್‌, ಹಾಟ್‌ಸ್ಟಾರ್‌ ಡಿಜಿಟಿಲ್‌ ಎಲ್ಲದರಲ್ಲೂ ಪ್ರಸಾರವಾಗಲು ಸುಮಾರು 100 ಕೋಟಿ ಮೊತ್ತವಾಗುತ್ತದೆ. ಸಹಾಯಕ ಪ್ರಾಯಜಕತ್ವಕ್ಕೆ 5ರಿಂದ 70 ಕೋಟಿಯಂತೆ. ಕೇವಲ ಟೆಲಿವಿಷನ್‌ ಮಾತ್ರ ಸಾಕು, ಡಿಜಿಟಲ್‌ ಬೇಡ ಅನ್ನೋದೇ ಆದರೆ 40ರಿಂದ 60 ಕೋಟಿ. ಹೀಗೆ ಮೂರು ಸ್ಲಾಬ್ ನಲ್ಲಿ ಜಾಹೀರಾತು ನೀಡಬಹುದು. ಒಟ್ಟಾರೆ ಐಪಿಎಲ್‌ ಮುಗಿಯುವ ಹೊತ್ತಿಗೆ ಹೆಚ್ಚುಕಮ್ಮಿ 2,100 ಕೋಟಿ ವ್ಯವಹಾರವಾಗುವ ಗುರಿಯನ್ನು ಹೊಂದಿದೆ.

ಈ ಮಧ್ಯೆ ಐಪಿಎಲ್‌ನ ಮೊದಲು ಮೂರು ಪಂದ್ಯಗಳನ್ನು 219 ಮಿಲಿಯನ್‌ ಜನಕ್ಕೆ ತಲುಪಿರುವುದನ್ನು ನೋಡಿದರೆ ಭವಿಷ್ಯದಲ್ಲಿ ಮತ್ತಷ್ಟು ಜಾಹೀರಾತು ಬೆಲೆ ಏರುವ ಸಾಧ್ಯತೆ ಇದೆ. ಲೆಕ್ಕಾಚಾರದ ಪ್ರಕಾರ ಇದು ಕಳೆದ ಋತುಮಾನಕ್ಕಿಂತ ಶೇ. 31ರಷ್ಟು ಹೆಚ್ಚಂತೆ. ಎಲ್ಲಕ್ಕಿಂತ ಮುಖ್ಯವಾಗಿ 135 ಮಿಲಿಯನ್‌ ಜನ ಹಾಟ್‌ ಸ್ಟಾರ್‌ನಲ್ಲಿ ಐಪಿಎಲ್‌ ಕ್ರಿಕೆಟ್‌ ವೀಕ್ಷಿಸಿದ್ದಾರಂತೆ. ದಕ್ಷಿಣಭಾರತದಲ್ಲಿ ಕಳೆದು ಸಾಲಿಗಿಂತ ಶೇ.20ರಷ್ಟು ನೋಡುಗರು ಹೆಚ್ಚಿದ್ದಾರೆ. ಅಂದರೆ, ನಮ್ಮ ನೋಟಕ್ಕೆ ಬೆಲೆ ಇದೆ ಅಂತಾಯ್ತು.

Advertisement

Udayavani is now on Telegram. Click here to join our channel and stay updated with the latest news.

Next