Advertisement
ಅವರು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ವತಿಯಿಂದ ಮಲ್ಪೆ ಮೀನುಗಾರಿಕಾ ಬಂದರು ಸಮೀಪದ ಬ್ರೇಕ್ ವಾಟರ್ ಬಳಿ 53.5 ಲಕ್ಷ ರೂಪಾಯಿ ವೆಚ್ಚದ ಸೀ ವಾಕ್ ವೇ ಸೇರಿದಂತೆ ಒಟ್ಟು 1.12 ಕೋ.ರೂ. ವೆಚ್ಚದ ಕಾಮಗಾರಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸ್ವಚ್ಛ, ಸುಂದರ ಬೀಚ್ ಮಲ್ಪೆ ಬೀಚನ್ನು ಪಡುಕರೆ ಭಾಗದ ವರೆಗೆ ವಿಸ್ತರಿಸಿ ಕೊಡವೂರು ಗ್ರಾಮ ಬೀಚ್‌ಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಹೊಂದಲಾಗಿದೆ. ಪಡುಕರೆ ಶಾಂತಿನಗರ ಬೀಚನ್ನು ಸುಂದರವಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಪಡುಕರೆ ಸೇತುವೆಯಿಂದ ಶಾಂತಿನಗರ ಬೀಚ್‌ಗೆ ರಸ್ತೆ, ಶೌಚಾಲಯ, ಹಟ್‌ಗಳ ನಿರ್ಮಾಣಕ್ಕೆ ಸುಮಾರು 75 ಲಕ್ಷ ರೂ. ಬಿಡುಗಡೆಯಾಗಿದ್ದು ಆ ಕೆಲಸ ಶೀಘ್ರದಲ್ಲಿ ನಡೆಯಲಿದೆ ಎಂದರು.
ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ 53.5 ಲ. ರೂ. ಸೀ ವಾಕ್‌ವೆà ಸೇರಿದಂತೆ ಸೈಂಟ್‌ಮೇರಿಸ್ ದ್ವೀಪದಲ್ಲಿ ಲಸೌಕರ್ಯಗಳ ಅಭಿವೃದ್ಧಿಗೆ 13 ಲ.ರೂ., ಪ್ರವಾಸಿ ಜೆಟ್ಟಿ ಆವರಣಗೋಡೆ ನಿರ್ಮಾಣಕ್ಕೆ 12.5 ಲ.ರೂ., ಮಲ್ಪೆ ಬೀಚ್‌ನ ಪ್ರವೇಶ ದ್ವಾರದಿಂದ ಗಾಂಧಿ ಪ್ರತಿಮೆ ವರೆಗೆ ಲೋಹದ ದಾರಿದೀಪ ಕಂಬ ಆಳವಡಿಕೆಗೆ 17 ಲ.ರೂ., ಬೀಚ್‌ನಲ್ಲಿ ಹಟ್‌ಗಳ ದುರಸ್ತಿ ಕಾಮಗಾರಿಗೆ 5 ಲ.ರೂ., ಬೀಚ್ ಸ್ವತ್ಛತೆ ಯಂತ್ರ ಇಡುವ ಶೆಡ್ ನಿರ್ಮಾಣಕ್ಕೆ 7 ಲಕ್ಷ ರೂ., ಗ್ರಾನೈಟ್ ಆಸನಗಳ ನಿರ್ಮಾಣ 2.7 ಲ.ರೂ., ಅಭಿವೃದ್ಧಿ ಸಮಿತಿಯ ಕ್ಯೂಬಿಕಲ್ ಮಾದರಿಯ ಕಚೇರಿ ನಿರ್ಮಾಣ 2 ಲ.ರೂ. ಒದಗಿಸಲಾಗುವುದು. ಈ ಎಲ್ಲ ಕಾಮಗಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.