Advertisement

ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿಯಿಂದ ಸಾಹಸಿ ಡ್ರೈವ್‌

12:21 PM Apr 10, 2018 | Team Udayavani |

ಬೆಂಗಳೂರು: ಪ್ರವಾಸಿ ಕಾರು ತಯಾರಕ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆ ಏ.8 ರಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಡರ್ಟ್‌ ಮೇನಿಯಾದಲ್ಲಿ ಸಾಹಸಿ ಡ್ರೈವ್‌ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಸಂಸ್ಥೆಯ ಪ್ರಮುಖ ಉತ್ಪನ್ನವಾದ ಕೆಯುವಿ100 ಎನ್‌ಎಕ್ಸ್‌ಟಿ ವಾಹನದ ಕಾರ್ಯಕ್ಷಮತೆ ಅನಾವರಣ ಯಶಸ್ವಿಯಾಗಿ ನಡೆಯಿತು.

Advertisement

ವಿಶೇಷವಾದ ಕಸ್ಟಮ್‌ ನಿರ್ಮಿತ ಸಕ್ಯೂಟ್‌ ವ್ಯವಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಯುವಿ100 ಎನ್‌ಎಕ್ಸ್‌ಟಿ ಕಾರು ಉತ್ತಮ ಪ್ರದರ್ಶನ ನೀಡಿತು. ಸಣ್ಣ  ಕಾರುಗಳನ್ನು ಕೊಳ್ಳಲಿಚ್ಛಿಸುವ ಗ್ರಾಹಕರಿಗೆ ಇದೊಂದು ಉತ್ತಮ ಅನುಭವವಾಗಿದ್ದು, ಕೆಯುವಿ100 ಹಾಗೂ ಇತರೆ ಸಣ್ಣ ಕಾರುಗಳನ್ನು ಹೊಂದಿರುವ ಗ್ರಾಹಕರಿಗೆ ಮಹೀಂದ್ರಾ ಎಸ್‌ಯುವಿ ಬಗ್ಗೆ ಅರಿವು ಮೂಡಿಸಲಾಯಿತು. ಸಣ್ಣ ಕಾರುಗಳನ್ನು ಬದಲಾಯಿಸಿ ದೊಡ್ಡ ಕಾರುಗಳಿಗೆ ಹೋಗುವ ಗ್ರಾಹಕರಿಗೆ ಇದು ಉತ್ತಮ ಕಾರ್ಯಕ್ರಮ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ವಿವರಗಳು www.mahindrarise.com ನಲ್ಲಿ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next