Advertisement
– ವಿ.ಸೂ.: ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇನ್ನೂ ಹೆಚ್ಚಿನ ಸಾಲ ಪಡೆಯಲು ಹೆಚ್ಚಿನ ಭದ್ರತೆ ಕೊಟ್ಟಲ್ಲಿ, ಭದ್ರತೆಗೆ ಅನುಗುಣವಾಗಿ ಬ್ಯಾಂಕುಗಳು ಹೆಚ್ಚಿನ ಸಾಲ ಒದಗಿಸುತ್ತವೆ.– ಉನ್ನತ ವಿದ್ಯಾಭ್ಯಾಸದ ವಯೋಮಿತಿ 16- 40 ವರ್ಷಗಳು. ವಿದ್ಯಾರ್ಥಿ ಅಪ್ರಾಪ್ತ ವಯಸ್ಕನಾಗಿದ್ದಲ್ಲಿ ಸಾಲವನ್ನು ಹೆತ್ತವರ ಹೆಸರಿನಲ್ಲಿ ಪಡೆಯಲು ಅವಕಾಶವಿದೆ.
– ಸಾಲದ ಮೇಲಿನ ಬಡ್ಡಿದರವನ್ನು ಆಯಾಯ ಬ್ಯಾಂಕುಗಳು ನಿರ್ಧರಿಸುತ್ತವೆ. ಪ್ರತಿಯೊಂದು ಬ್ಯಾಂಕೂ ಸಹಾ ಎಜುಕೇಷನ್ ಲೋನ್‌ಗೆ ಕಡಿಮೆ ಬಡ್ಡಿದರ ವಿಧಿಸುವ ಸಂಪ್ರದಾಯವನ್ನು ಹೊಂದಿದೆ. ಈ ಕ್ರಮವನ್ನು ಪಿ.ಎಲ್.ಆರ್(ಪ್ರೈಮ್ ಲೆಂಡಿಂಗ್ ರೇಟ್) ಎಂದು ಕರೆಯುತ್ತಾರೆ.
– ಹೀಗೆ ಪಡೆದ ಸಾಲವನ್ನು ವ್ಯಾಸಂಗ ಮುಗಿದ ಒಂದು ವರ್ಷದೊಳಗೆ ಅಥವಾ ಕೆಲಸ ದೊರೆತ ಆರು ತಿಂಗಳೊಳಗೆ ಮರುಪಾವತಿಸಲು ಆರಂಭಿಸಬೇಕು. ಅದಕ್ಕಿಂತ ಮುಂಚಿತವಾಗಿಯೂ ಹಣವನ್ನು ತುಂಬಿ ಸಾಲ ತೀರಿಸಬಹುದು.
– ವಿದ್ಯಾಭ್ಯಾಸಕ್ಕೆ ನೀಡುವ ಸಾಲದ ಮೊತ್ತವನ್ನು ಬ್ಯಾಂಕುಗಳು ನಿರ್ಧರಿಸಿ, ಅವಶ್ಯಕತೆಗೆ ಅನುಗುಣವಾಗಿ ಹಣವನ್ನು ಬಿಡುಗಡೆ ಮಾಡುತ್ತವೆ. ಕಾಲೇಜು ಫೀಸು, ಪುಸ್ತಕ ಖರೀದಿ, ಉಪಕರಣ ಖರೀದಿ ಹಾಗೂ ಹಾಸ್ಟೆಲ್ ಬಿಲ್ಲು ಮುಂತಾದವುಗಳನ್ನು ಭರಿಸಲು ಆಯಾಯ ಸಮಯದಲ್ಲಿಯೇ ಹಣವನ್ನು ಬಿಡುಗಡೆ ಮಾಡುತ್ತಾರೆ. ಇದರಿಂದ ಪಡೆದಷ್ಟು ಹಣಕ್ಕೆ, ಪಡೆದ ತಾರೀಖೀನಿಂದ ಬಡ್ಡಿ ಹಾಕುವುದರಿಂದ, ಬಡ್ಡಿಯ ಹೊರೆ ಕಡಿಮೆಯಾಗುತ್ತದೆ ಹಾಗೂ ಸಾಲದ ದುರುಪಯೋಗವೂ ಆಗುವುದಿಲ್ಲ.
– ಶಿಕ್ಷಣ ಸಾಲವನ್ನು ಆದಿಯಲ್ಲಿ, ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಪಡೆಯಬಹುದು.
– ಪ್ರತೀ ವರ್ಷ ವಿದ್ಯಾರ್ಥಿಯ ಓದುವಿಕೆಯ ಪ್ರಗತಿ ಸರ್ಟಿಫಿಕೇಟ್‌ಅನ್ನು ಬ್ಯಾಂಕಿಗೆ ಸಲ್ಲಿಸಬೇಕು.
– ಶಿಕ್ಷಣ ಸಾಲದ ಮೇಲಿನ ಬಡ್ಡಿ ಆದಾಯ ತೆರಿಗೆ ಸೆಕ್ಷನ್ 80ಉ ಪ್ರಕಾರ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ.