ಫಿಟ್‌ಬಿಟ್ ವರ್ಸಾಲೈಟ್, ಫಿಟ್‌ಬಿಟ್ ಇನ್ ಸ್ಪೈರ್, ಇನ್‌ಸ್ಪೈರ್ ಎಚ್ ಆರ್ ವೇರ್‌ಬ್ಲೆಸ್ ನೂತನವಾಗಿ ಭಾರತದಲ್ಲಿ ಬಿಡುಗಡೆಗೊಂಡಿದೆ.
ಫಿಟ್‌ಬಿಟ್ ವರ್ಸಾಲೈಟ್, ಫಿಟ್‌ಬಿಟ್ ಇನ್ ಸ್ಪೈರ್, ಇನ್‌ಸ್ಪೈರ್ ಎಚ್‌ಆರ್ ವೇರ್‌ಬ್ಲೆಸ್ ವಾಚ್‌ಗಳು ಇವು ಕಂಪೆನಿಯ ಅತ್ಯುನ್ನತ ಶ್ರೇಣಿಯ ವಾಚ್‌ಗಳಾಗಿದ್ದು, ಈ ಕಂಪೆನಿಯೂ ಬುಧವಾರ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದೊಂದು ಫಿಟ್ನೆಸ್ ಟ್ರ್ಯಾಕರ್ ಆಗಿದ್ದು ಇದರ ಮೊದಲ ಶ್ರೇಣಿಯ ವಾಚ್‌ಗಳು ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದೆ. ಇದರಲ್ಲಿ ಎರಡು ವಿಧಗಳಿವೆ. ಅವುಗಳು ಫಟ್‌ಬಿಟ್ ಇನ್‌ಸ್ಪೈರ್ ಮತ್ತು ಇನ್‌ಸ್ಪೈರ್ ಎಚ್ ಆರ್.
ಕೈಗಟುಕುವ ಬೆಲೆ
ಫಿಟ್‌ಬಿಟ್ ವರ್ಸಾಲೈಟ್, ಫಿಟ್‌ಬಿಟ್ ಇನ್ ಸ್ಪೈರ್, ಇನ್‌ಸ್ಪೈರ್, ಎಚ್‌ಆರ್ ಗಳು ಈಗಾಗಲೇ ಪ್ರಸಿದ್ಧಿ ಪಡೆದಿದ್ದು, ಇದರ ಬೆಲೆ ಕ್ರಮವಾಗಿ 15,999 ರೂ., 6,999 ರೂ. ಹಾಗೂ 8,999 ರೂ. ಕೈಗಟುಕುವ ಬೆಲೆಯಲ್ಲಿ ಗ್ರಾಹಕರ ಕೈಗೆ ಸಿಗಲಿದೆ. ಫಿಟ್‌ಬಿಟ್ ವರ್ಸಾಲೈಟ್ ಬಿಳಿ, ಮೆಲ್ಬರಿ, ಮರೀನಾ ಬ್ಲೂ ಮತ್ತು ಚಾರ್ಕೋಲ್ ಬಣ್ಣಗಳಲ್ಲಿ ಲಭ್ಯವಿದೆ.ಫಿಟ್‌ಬಿಟ್ ಇನ್‌ಸ್ಪೈರ್, ಇನ್‌ಸ್ಪೈರ್, ಎಚ್ ಆರ್ ಫಿಟ್ನೆಸ್ ಟ್ರ್ಯಾಕರ್‌ಗಳು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಈ ಮೂರು ವಾಚ್‌ಗಳು ಭಾರತದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ.
ಫಿಟ್‌ಬಿಟ್ ವರ್ಸಾಲೈಟ್‌ನ ವಿಶೇಷತೆಗಳು
ಇದೊಂದು ಸ್ಮಾರ್ಟ್ ವಾಚ್ ಆಗಿದ್ದು, ಇದರಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸ್ವಯಂಚಾಲಿತ ಹೃದಯ ಬಡಿತ ಪರಿಶೋಧಕ ಹಾಗೂ ಅಲಾ ರಾಂ ಪರಿಶೋಧಕಗಳಿವೆ. ಇದರಲ್ಲಿ 15 ಇತರ ಅಪ್ಲಿಕೇಷನ್‌ಗಳಿದ್ದು ಹಲವು ಅವಕಾಶಗಳಿವೆ. ಇದರ ಭಾರ ತೀರಾ ಕಡಿಮೆ. ಒಂದು ಸ್ವಿಚ್‌ನ ಮೂಲಕ ಕಾರ್ಯವೆಸಗುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 4 ದಿನ ಬಳಸಬಹುದು. 1.34 ಇಂಚಿನ ಸ್ಕ್ರೀನ್ ಹಾಗೂ ಗೊರಿಲ್ಲಾ ಗ್ಲಾಸ್ ವೈಶಿಷ್ಟ್ಯವನ್ನು ಹೊಂದಿದೆ.
ಫಿಟ್‌ಬಿಟ್ ಇನ್ಸ್‌ಪೆçರ್ ಮತ್ತು ಇನ್ಸ್‌ಫೈರ್ ಎಚ್ ಆರ್. ನ ವಿಶೇಷತೆಗಳು
ಫಿಟ್‌ಬಿಟ್ ಇನ್‌ಸ್ಪೈರ್, ಮತ್ತು ಇನ್‌ಸ್ಪೈರ್ ಎಚ್ ಆರ್‌ಗಳು ಟಚ್ ಸ್ಕ್ರೀನ್ ಫಿಟ್ನೆಸ್ ವಾಚ್ ಗಳಾಗಿದ್ದು, ದಿನದ ಚಟುವಟಿಕೆ ಟ್ರ್ಯಾಕಿಂಗ್, ನಿದ್ರೆ ಟ್ರ್ಯಾಕಿಂಗ್, ಹೃದಯ ಬಡಿತ ಲೆಕ್ಕಾಚಾರ ಮೊದಲಾದವನ್ನು ಕಂಡು ಹಿಡಿಯುತ್ತವೆ.
ಫಿಟ್‌ಬಿಟ್ ಇನ್‌ಸ್ಪೈರ್, ಮತ್ತು ಇನ್‌ಸ್ಪೈರ್ ಎಚ್ ಆರ್‌ಗಳು ಟಚ್ ಸ್ಕ್ರೀನ್ ಫಿಟ್ನೆಸ್ ವಾಚ್ ಗಳಾಗಿದ್ದು, ದಿನದ ಚಟುವಟಿಕೆ ಟ್ರ್ಯಾಕಿಂಗ್, ನಿದ್ರೆ ಟ್ರ್ಯಾಕಿಂಗ್, ಹೃದಯ ಬಡಿತ ಲೆಕ್ಕಾಚಾರ ಮೊದಲಾದವನ್ನು ಕಂಡು ಹಿಡಿಯುತ್ತವೆ.