ಮಂಗಳೂರು: ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್‌ನಲ್ಲಿ ಅಡ್ವಾನ್ಸ್‌ಡ್ 128 ಸ್ಲೆಸ್ ಸಿ.ಟಿ. ಸ್ಕ್ಯಾನ್ ಯಂತ್ರ, ನವೀಕರಣ ಗೊಂಡ ಫಾತಿಮಾ ವಾರ್ಡ್ ಹಾಗೂ 110 ಅಡಿ ಎತ್ತರದ ಸಂಪ್ ಮತ್ತು ಓವರ್‌ಹೆಡ್ ಟ್ಯಾಂಕ್‌ನ್ನು ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಬುಧವಾರ ಲೋಕಾರ್ಪಣೆಗೊಳಿಸಿದರು.
ಫಾತಿಮಾ ವಾರ್ಡ್ ಹಾಗೂ ಟ್ಯಾಂಕ್
ನಿರ್ಮಾಣದಲ್ಲಿ ತೊಡಗಿಸಿಕೊಂಡ ಕಾಂಟ್ರಾಕ್ಟರ್‌ಗಳು, ಎಂಜಿನಿಯರ್‌ಗಳು, ವಿನ್ಯಾಸಗಾರರನ್ನು ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬಿಷಪ್ ಸಲ್ಡಾನ್ಹಾ, ದೇವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದರೆ ಕಾರ್ಯ ಸಿದ್ಧಿಯಾಗುತ್ತದೆ. ಆತನ ಅನುಗ್ರಹ ನಮಗೆ ಹೊಸ ಶಕ್ತಿ ನೀಡುವ ಮೂಲಕ ಗುಣಮಟ್ಟದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಫಾ| ಮುಲ್ಲರ್ ಆಸ್ಪತ್ರೆ ಆಡಳಿತಾ ಧಿಕಾರಿ ವಂ| ರುಡಾಲ್ಫ್ ರವಿ ಡೆ’ಸಾ, ತುಂಬೆ ಫಾ| ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ರೋಶನ್ ಕ್ರಾಸ್ತಾ, ದೇರಳಕಟ್ಟೆ ಫಾ| ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ಆಡಳಿತಾಧಿಕಾರಿ ವಂ| ವಿನ್ಸೆಂಟ್ ಸಲ್ಡಾನ, ಆಸ್ಪತ್ರೆಯ ಮಾಜಿ ಆಡಳಿತಾಧಿಕಾರಿ ವಂ| ಡೆನ್ನಿಸ್ ಡೆ’ಸಾ ಮಾಜಿ ನಿರ್ದೇಶಕ ವಂ| ಪೀಟರ್ ನೊರೋನ್ಹಾ, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್ ಪಾಯಸ್, ಹೋಮಿಯೋಪಥಿ ಆಸ್ಪತ್ರೆ ಸಹಾಯಕ ಆಡಳಿತಾಧಿ ಕಾರಿ ವಂ| ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.
ಫಾ| ಮುಲ್ಲರ್ ಚಾರಿಟೆಬಲ್ ಆಸ್ಪತ್ರೆ ನಿರ್ದೇಶಕ ವಂ| ರಿಚರ್ಡ್ ಕುವೆಲ್ಲೊ ಸ್ವಾಗತಿಸಿದರು. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ವಂ| ಅಜಿತ್ ಮಿನೇಜಸ್ ಸಮ್ಮಾನಿತರ ಪಟ್ಟಿ ವಾಚಿಸಿದರು. ಡಾ| ಸಿಮೋನಾ ಡಿ’ಸೋಜಾ ನಿರೂಪಿಸಿದರು.
ಸಂಸ್ಥೆಯ 178ನೇ ಸಂಸ್ಥಾಪಕರ ದಿನಾಚರಣೆ ಹಾಗೂ ಇನ್‌ಸ್ಟಿಟ್ಯೂಶನ್ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಸಹಿತ ವೈವಿಧ್ಯ ಕಾರ್ಯಕ್ರಮ ಜರಗಿತು.