Advertisement

ಅಡ್ವಾನ್ಸ್‌ ಟ್ರೇನಿಂಗ್‌ ಇನ್‌ಸ್ಟಿಟ್ಯೂಟ್‌ ಆರಂಭಿಸಲು ಪ್ರಸ್ತಾವನೆ

05:13 PM Jul 19, 2018 | Team Udayavani |

ಬೀದರ: ಜಿಲ್ಲೆಯ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ನೆರವಾಗುವ ನಿಟ್ಟಿನಲ್ಲಿ ಬೀದರ್‌ನಲ್ಲಿ ಅಡ್ವಾನ್ಸ್‌ ಟ್ರೇನಿಂಗ್‌
ಇನ್‌ಸ್ಟಿಟ್ಯೂಟ್‌ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.

Advertisement

ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶ್ವ ಕೌಶಲ್ಯ ದಿನಾಚರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್‌ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂಲ
ಸೌಕರ್ಯ ಕಲ್ಪಿಸಲು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2 ಕೋಟಿ ರೂ. ಅನುದಾನ ಪಡೆಯಲು ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. 

ಓದು ಮುಗಿಸಿದ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಹುದ್ದೆಗಾಗಿ ಜೋತು ಬೀಳದೇ ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು. ಐಟಿಐ ಮುಗಿದ ವಿದ್ಯಾರ್ಥಿಗಳು ಸ್ವ-ಸಹಾಯ ಗುಂಪು ರಚಿಸಿಕೊಂಡು ವರ್ಕ್‌ಶಾಪ್‌ ಆರಂಭಿಸಿದಲ್ಲಿ ಕಾಯಕ ಯೋಜನೆಯಡಿ ಬಡ್ಡಿ ರಹಿತ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಸರ್ಕಾರದಿಂದ ಪ್ರತ್ಯೇಕ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಅಲ್ಲದೇ ಮುಖ್ಯಮಂತ್ರಿಯವರು ಲ್ಯಾಪ್‌ಟಾಪ್‌ಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ಕೊಡಬೇಕು ಎಂಬ ನಿಲುವು ಹೊಂದಿದ್ದಾರೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಮಾತನಾಡಿ, ಬೀದರ ಐಟಿಐ ಕೇಂದ್ರ ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಅಗತ್ಯವಿರುವ ಕೌಶಲ್ಯ ಬೆಳೆಸುತ್ತಿದೆ. ಟಾಟಾ ಅಡಾನ್ಸ್‌ ಸಿಸ್ಟಮ್‌ನವರು ಆಯೋಜಿಸಿದ್ದ ಕ್ಯಾಂಪಸ್‌ ನಲ್ಲಿ ಫಿಟ್ಟರ್‌ ವಿಭಾಗದ 21 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಇಲಾಖೆ ಜಂಟಿ ನಿರ್ದೇಶಕ ವೈಜಗೊಂಡ, ಉದ್ಯೋಗ ಕೋಶ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಆಡಳಿತಾಧಿಕಾರಿ ಪ್ರಕಾಶ ಜನವಾಡಕರ್‌, ತರಬೇತಿ ಅಧಿಕಾರಿ ಬಾಬು ರಾಜೋಳಕರ್‌, ಸಂಸ್ಥೆ ಪ್ರಾಚಾರ್ಯ ಪಂಡಿತಾರಾಧ್ಯ ಹಿರೇಮಠ, ಬಾಬು ಪ್ರಭಾಜಿ, ಯೂಸುಫ್‌ ಮಿಯ್ನಾ ಜೋಜನಾ, ಕಮಲಬಾಯಿ ದಿಕ್ಷೀತ್‌, ರಮೇಶ ಪೂಜಾರಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next