ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಖಾಜಾ ಮೈನೋದ್ದೀನ್ ಜೇಮಶೇರಿ, ವಯಸ್ಕರಿಗೆ ಅಕ್ಷರ ಕಲಿಸಿ, ಸಾಕ್ಷರತೆಯನ್ನಾಗಿ ಮಾಡುವ
ಗುರಿ ಸ್ವಯಂ ಸೇವಕರ ಮೇಲಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೇರಕ ವೆಂಕಟೇಶ ಕಟ್ಟಿಮನಿ, ಗ್ರಾಮದಲ್ಲಿ ಕಲಿಕಾ ಕೇಂದ್ರ ತೆರೆಯಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. 75 ಜನ ಸ್ವಯಂ ಸೇವಕರಿಗೆ 4 ದಿನಗಳ ಕಾಲ ತರಬೇತಿ ನೀಡುವ ಮೂಲಕ ಕಲಿಸುವ ಸಾಮರ್ಥ್ಯ ತರಬೇತಿ ನೀಡಲಾಗುತ್ತದೆ. 750 ಜನ ವಯಸ್ಕರನ್ನು ಅಕ್ಷರಸ್ಥರಾಗಿ ಮಾಡುವ ಮಹತ್ತರ ಗುರಿ ಹೊಂದಲಾಗಿದೆ. ಚುನಾಯಿತ ಜನಪ್ರತಿನಿಧಿಗಳು ಮತ್ತು ಅ ಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕಿ ಚನ್ನಮಲ್ಲಮ್ಮ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಣ್ಣಗೌಡ, ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ರಂಗೋಜಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಸ್ವಯಂ ಸೇವಕಿ ಈರಮ್ಮ ಪ್ರಾರ್ಥಿಸಿದರು. ಶಿಕ್ಷಕ ಬಾಬುನಾಯ್ಕ ನಿರೂಪಿಸಿ, ಸ್ವಾಗತಿಸಿದರು. ಪ್ರೇರಕಿ ಅನ್ನಪೂರ್ಣ ಆನೆಗುಂದಿ ವಂದಿಸಿದರು.
Advertisement