Advertisement
ವಿಶ್ವ ಕ್ಯಾನ್ಸರ್ ದಿನ ಹಿನ್ನೆಲೆ ಸೋಮವಾರ ಮಣಿಪಾಲ್ ಆಸ್ಪತ್ರೆ ಹಮ್ಮಿಕೊಂಡಿದ್ದ ಜಾಗೃತಿ ಹಾಗೂ ಕ್ಯಾನ್ಸರ್ ಮುಕ್ತ ಸಮಾಜ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನೆಗಳ ಫಲವಾಗಿ ಕ್ಯಾನ್ಸರ್ ಗುಣಪಡಿಸುವಂಥ ಕಾಯಿಲೆ ಪಟ್ಟಿಗೆ ಸೇರಿದೆ. ಕ್ಯಾನ್ಸರ್ ಮೂರನೇ ಹಂತ ಹಾಗೂ ಇತ್ತೀಚೆಗೆ ನಾಲ್ಕನೇ ಹಂತ ತಲುಪಿದಾಗಲು ಉತ್ತಮ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣವಾಗಿದೆ.
Related Articles
Advertisement
ಅತ್ಯಾಧುನಿಕ ಹೈಪರ್‌ಥರ್ಮಿಕ್ ಇಂಟ್ರಾ ಪೆರಿಟೋನಿಯಲ್ ಕಿಮೋಥೆರಪಿ(ಎಚ್‌ಐಪಿಇಸಿ) ಬಳಸಿಕೊಂಡು ಸುಮಾರು 350ಕ್ಕೂ ಹೆಚ್ಚಿನ ಪ್ರಕರಣಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಎಚ್‌ಐಪಿಇಸಿ ಚಿಕಿತ್ಸೆಯಲ್ಲಿ ರೋಗ ಗುಣಮುಖ ಪ್ರಮಾಣ ಶೇ.70ರಷ್ಟಿದೆ. ಹೀಗಾಗಿಯೇ ಆಗ್ನೇಯ ಏಷ್ಯಾದಲ್ಲಿಯೇ ಅತ್ಯಂತ ಹೆಚ್ಚು ಶಿಫಾರಸ್ಸು ಮಣಿಪಾಲ್ ಆಸ್ಪತ್ರೆಗೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಟಿ ಗಾನವಿ ಲಕ್ಷ್ಮಣ್ ಮಾತನಾಡಿ, ಕ್ಯಾನ್ಸರ್ ನಿಜಕ್ಕೂ ಮಾರಕ ಮತ್ತು ಬಹಳ ನೋವುಂಟು ಮಾಡುವ ರೋಗವಾಗಿದೆ. ಆದರೆ ಸಕಾರಾತ್ಮಕ ಮನೋಭಾವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರೊಂದಿಗೆ ಕ್ಯಾನ್ಸರ್ ಜಯಿಸಬ ಹುದು. ಆರೋಗ್ಯಕರ ಜೀವನಶೈಲಿ ಉಳಿಸಿಕೊಳ್ಳುವುದು ಮತ್ತು ತಂಬಾಕು ಮತ್ತು ಮದ್ಯಪಾನಗಳನ್ನು ತಪ್ಪಿಸುವುದು ಮುಖ್ಯವಾಗಿರುತ್ತದೆ ಎಂದರು.
ಈ ವೇಳೆ ಕ್ಯಾನ್ಸರ್‌ನಿಂದ ಗುಣಮುಖರಾದವರು ತಮ್ಮ ಅನುಭವವನ್ನು ಹಂಚಿಕೊಂಡು ಮಣಿಪಾಲ್ ಆಸ್ಪತ್ರೆ ವೈದ್ಯರಿಗೆ ಧನ್ಯವಾದ ತಿಳಿಸಿದರು. ನಂತರ ಮಣಿಪಾಲ್ ಆಸ್ಪತ್ರೆ ಕ್ಯಾನ್ಸರ್ ಕೇಂದ್ರದ ವೈದ್ಯರು ಸಿಬ್ಬಂದಿಗಳು ” ವಿಶ್ವ ಕ್ಯಾನ್ಸರ್ ದಿನ’ ಅಂಗವಾಗಿ ಕ್ಯಾನ್ಸರ್ ಮುಕ್ತ ಭವಿಷ್ಯಕ್ಕಾಗಿ ಪ್ರತಿಜ್ಞೆ ಕೈಗೊಂಡರು.
ಬಡವರಿಗೂ ಸಹಾಯ ಹಸ್ತ: ಮಣಿಪಾಲ್ ಆಸ್ಪತ್ರೆಯ ಚೇರ್ಮನ್ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಗಳ ನೆರವಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಆರ್ಥಿಕವಾಗಿ ಹಿಂದುಳಿದವರಿಗೆ ಆಸ್ಪತ್ರೆಯ ವಿವಿಧ ಯೋಜನೆಗಳಲ್ಲಿ ಲಭ್ಯವಾಗುವ ಸಹಾಯಧನ ಕುರಿತು ಮಾಹಿತಿ ನೀಡಲಿದೆ.
ಜತೆಗೆ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಆಸ್ಪತ್ರೆ ಸಹಾಯ ನಿಧಿ ಇದೆ. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಹಾಗೂ ದಾನಿಗಳ ನೆರವು ಪಡೆದು ಸಹಾಯಧನ ಸಂಗ್ರಹಿಸಿ ಸಾಧ್ಯವಾದಷ್ಟು ಸಹಾಯ ಮಾಡಲಾಗುತ್ತಿದೆ. ವಾರ್ಷಿಕ ಒಂದು ಮಗುವಿಗೆ ಉಚಿತವಾಗಿ ಮೂತ್ರಪಿಂಡ ಕಸಿ ಮಾಡಲಾಗುತ್ತಿದೆ ಎಂದು ತಿಳಿಸಿದರು.