ಚಂಡೀಗಡ: ಕಾನೂನಾತ್ಮಕ ವಿವಾಹ ವಯಸ್ಸು 21 ತುಂಬದ ವಯಸ್ಕ ಪುರುಷನು, 18 ವರ್ಷ ದಾಟಿದ ಮಹಿಳೆಯೊಂದಿಗೆ ಮದುವೆಯಾಗದೇ ಸಮ್ಮತಿಯ ಜೀವನ ನಡೆಸಬಹುದು ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೇಳಿದೆ.
ವಯಸ್ಕ ದಂಪತಿಯು ಮದುವೆ ಮಾಡಿಕೊಳ್ಳದೇ ಸಹ ಜೀವನ ನಡೆಸಬಹುದು ಎಂದು 2018ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರ ಮಾದರಿಯಲ್ಲೇ ಈಗ ಹೈಕೋರ್ಟ್ ತೀರ್ಪು ಹೊರಬಿದ್ದಿದೆ.
ಪಂಜಾಬ್‌ನ ಗುರುದಾಸ್ಪುರ ಜಿಲ್ಲೆಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಜೋಡಿಯೊಂದು ತಮಗೆ ರಕ್ಷಣೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿ
ಇಬ್ಬರೂ 18 ವರ್ಷ ಮೇಲ್ಪಟ್ಟ ವಯಸ್ಕರಾಗಿದ್ದರೂ, ಯುವತಿಗೆ ವಿವಾಹದ ವಯಸ್ಸು ದಾಟಿದೆ. ಆದರೆ, ಯುವಕನಿಗೆ ಇನ್ನೂ 21 ತುಂಬಿರದ ಕಾರಣ, ಕಾನೂನಾತ್ಮಕವಾಗಿ ಮದುವೆ ಆಗುವಂತಿಲ್ಲ. ಹೀಗಾಗಿ, ಎರಡೂ ಕುಟುಂಬಗಳಿಂದ ರಕ್ಷಣೆ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.