Advertisement

Sophia Leone; 26ರ ಹರೆಯಕ್ಕೆ ಕೊನೆಯುಸಿರೆಳೆದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್

08:39 AM Mar 10, 2024 | Team Udayavani |

ನ್ಯೂಯಾರ್ಕ್: 26 ವರ್ಷದ ವಯಸ್ಕ ಚಿತ್ರ ತಾರೆ ಸೋಫಿಯಾ ಲಿಯೋನ್ ಅವರು ಮೃತಪಟ್ಟಿದ್ದಾರೆ. ಅವರು ಈ ತಿಂಗಳ ಆರಂಭದಲ್ಲಿ ತನ್ನ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಆಕೆಯ ಮಲತಂದೆ ಮೈಕ್ ರೊಮೆರೊ ಶನಿವಾರ ತಿಳಿಸಿದ್ದಾರೆ.

Advertisement

ಮಾರ್ಚ್ 1 ರಂದು ಯುಎಸ್ ನಲ್ಲಿನ ತನ್ನ ಅಪಾರ್ಟ್ ಮೆಂಟ್ ನಲ್ಲಿ ಸೋಫಿಯಾಳನ್ನು ಆಕೆಯ ಕುಟುಂಬವು ಪ್ರತಿಕ್ರಿಯಿಸದ ರೀತಿಯಲ್ಲಿ ಪತ್ತೆ ಮಾಡಿದೆ.

“ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇನೆ” ಎಂದು ರೊಮೆರೊ ಹೇಳಿದರು.

ಆಕೆಯ ಸಾವಿನ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಕೆಯ ಮಾಡೆಲ್ ಏಜೆನ್ಸಿಯಾದ 101 ಮಾಡೆಲಿಂಗ್ ಕೂಡಾ ಆಕೆಯ ಸಾವಿನ ವಿಚಾರವನ್ನು ಖಚಿತಪಡಿಸಿದೆ.

ಸೋಫಿಯಾ ಲಿಯೋನ್ ಜೂನ್ 10, 1997 ರಂದು ಅಮೇರಿಕಾದ ಮಿಯಾಮಿಯಲ್ಲಿ ಜನಿಸಿದರು.

Advertisement

ಅವರು 18 ನೇ ವಯಸ್ಸಿನಲ್ಲಿ ವಯಸ್ಕ ಮನರಂಜನಾ ಉದ್ಯಮವನ್ನು ಪ್ರವೇಶಿಸಿದ್ದಾರೆ. ಆಕೆ ಸುಮಾರು 1 ಮಿಲಿಯನ್ ಯುಸ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆಂದು ವರದಿಯಾಗಿದೆ.

ಕಾಗ್ನಿ ಲಿನ್ ಕಾರ್ಟರ್, ಜೆಸ್ಸಿ ಜೇನ್ ಮತ್ತು ಥೈನಾ ಫೀಲ್ಡ್ಸ್ ನಂತರ ವಯಸ್ಕ ಉದ್ಯಮದಲ್ಲಿ ಈ ವರ್ಷ ಸೋಫಿಯಾ ಮರಣವು ನಾಲ್ಕನೇ ಅಕಾಲಿಕ ಸಾವು ಪ್ರಕರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next