ನವದೆಹಲಿ: ಆತ್ಮಹತ್ಯೆ ಮಾಡಿಕೊಂಡು ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಕಾಗ್ನಿ ಲಿನ್ ಕಾರ್ಟರ್(36) ಆತ್ಮಹತ್ಯೆ ಮಾಡಿಕೊಂಡು ಪ್ರಾಣತೆತ್ತಿರುವುದನ್ನು ಅವರ ಸ್ನೇಹಿತರು ಸೋಶಿಯಲ್ ಮೀಡಿಯಾದಲ್ಲಿ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ. ಅವರು ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸ್ನೇಹಿತರು ಹೇಳಿದ್ದಾರೆ.
2000 ಇಸವಿಯಲ್ಲಿ ನೀಲಿ ಚಿತ್ರದ ಲೋಕಕ್ಕೆ ಕಾಲಿಟ್ಟ ಅವರು ತನ್ನ ಕೆಲಸಕ್ಕಾಗಿ ಹಲವು ಅಮೇರಿಕನ್ ಅಡಲ್ಟ್ ವಿಡಿಯೋ ಪ್ರಶಸ್ತಿ(AVN Awards) ಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಗಾಯಕಿಯಾಗಿ, ಕ್ಲಬ್ ನಲ್ಲಿ ನೃತ್ಯಗಾರ್ತಿಯಾಗಿಯೂ ಹಾಗೂ ಮಾಡೆಲ್ ಆಗಿಯೂ ಅನೇಕ ವರ್ಷ ಮನರಂಜಿಸಿದ್ದರು.
2019 ರಲ್ಲಿ ಅವರು ಲಾಸ್ ಏಂಜಲೀಸ್‌ನಿಂದ ಮರಳಿ ಪೋಲ್ ಡ್ಯಾನ್ಸ್‌ನಲ್ಲಿ ತೊಡಗಿಕೊಂಡಿದ್ದರು. ಇದಾದ ನಂತರ ಅವರು ತಮ್ಮದೇ ಆದ ಸ್ಟುಡಿಯೋ ತೆರೆದು ವಯಸ್ಕ ಚಿತ್ರಗಳ ಬದಲು ಪೋಲ್ ಡ್ಯಾನ್ಸ್‌ನತ್ತ ಹೆಚ್ಚಿನ ಗಮನ ಹರಿಸಿದ್ದರು.
ಕಳೆದ ಕೆಲ ಸಮಯದಿಂದ ಕಾಗ್ನಿಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಅವರ ಸ್ನೇಹಿತು ಹೇಳಿರುವುದಾಗಿ ವರದಿ ತಿಳಿಸಿದೆ.
ಅವರ ಸ್ನೇಹಿತರು ʼಗೋ ಫಂಡ್ ಮಿʼ ಮೂಲಕ ನಟಿಯ ನೆನಪಿಗೆ ಹಾಗೂ ಅವರ ತಾಯಿಯ ನೆರವಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.