Advertisement
ನಗರದ ಕೊಟ್ಟಾರ- ಮಹಾ ಕಾಳಿಪಡು³ವರೆಗೆ ಮತ್ತು ನಂತೂರು- ಮಹಾಕಾಳಿಪಡು³ವರೆಗೆ ಎರಡು ಮಾರ್ಗಗಳನ್ನು ಕಾರಿಡಾರ್ ಆಗಿ ಗುರುತಿಸಿ ಆ ಮಾರ್ಗಗಳ 15 ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗುತ್ತದೆ. ಕೊಟ್ಟಾರದಿಂದ ಲಾಲ್‌ಬಾಗ್ – ಪಿವಿಎಸ್ – ಹಂಪನಕಟ್ಟೆ – ಮಹಾಕಾಳಿಪಡು³ವರೆಗೆ ಒಂದು ರೂಟ್, ನಂತೂರು – ಜ್ಯೋತಿ – ಹಂಪನಕಟ್ಟೆ- ಮಂಗಳಾದೇವಿ – ಮಹಾಕಾಳಿಪಡು³ ಇನ್ನೊಂದು ರೂಟ್ ಆಗಿ ಗುರುತಿಸಲಾಗಿದೆ.
ಕೊಟ್ಟಾರದಿಂದ ಮಹಾಕಾಳಿಪಡು³ ವರೆಗಿನ ಪ್ರದೇಶವನ್ನು ಸಿಬಿಡಿ (ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್) ಏರಿಯಾ ಎಂದು ಪರಿಗಣಿಸಲಾಗುತ್ತದೆ. ಇದು ವ್ಯವಹಾರ ಮತ್ತು ವಾಹನ, ಜನ ಸಂಚಾರ ಹೆಚ್ಚು ಇರುವ ಜಾಗ. ಹಾಗಾಗಿ ಈ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆಗೆ ಪರಿಹಾರ ಕ್ರಮವಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ “ಅಡಾಪ್ಟಿವ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ’ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯೋಜನವೇನು ?
ಈ ಯೋಜನೆಯಿಂದ ವಾಹನಗಳಿಗೆ ಒಂದು ಕಾರಿಡಾರ್‌ನ ಯಾವುದಾದರೂ ಒಂದು ಸಿಗ್ನಲ್‌ನಲ್ಲಿ ಮಾತ್ರ ನಿಲುಗಡೆ ಸಿಗುತ್ತದೆ. ಸ್ವಯಂಚಾಲಿತವಾಗಿ ಸಿಗ್ನಲ್ ಸಮಯ ನಿಗದಿಯಾಗುತ್ತದೆ. ಇತರ ಸಂಪರ್ಕ ರಸ್ತೆಗಳಿಂದ ಬರುವ ವಾಹನಗಳ ಸಂಚಾರಕ್ಕೂ ಅಡ್ಡಿಯಾಗುವುದಿಲ್ಲ. ತುರ್ತು ಸೇವೆಯ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ. ಮುಂಬಯಿ, ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಈಗಾಗಲೇ ಇಂತಹ “ಸಿಂಕ್ರೊನೈಸ್ ಸಿಗ್ನಲ್’ ಮಾದರಿಯನ್ನು ಅನುಸರಿಸಲಾಗಿದ್ದು, ಅದು ಯಶಸ್ವಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
Related Articles
ಅಡಾಪ್ಟಿವ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಜಾರಿಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕಾಗಿ 5 ಕಂಪೆನಿಗಳು ಪಾಲ್ಗೊಂಡಿವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಲು ಪಿಒಸಿ (ಪ್ರೂಫ್ ಆಫ್ ಕಾನ್ಸೆಪ್ಟ್) ಪ್ರಕ್ರಿಯೆ ನಡೆದಿದೆ. ಟೆಂಡರ್ ಪಡೆದುಕೊಂಡ ಕಂಪೆನಿ 6 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ.
Advertisement
6 ತಿಂಗಳುಗಳೊಳಗೆ ಅನುಷ್ಠಾನ ನಿರೀಕ್ಷೆ ಪ್ರಾಯೋಗಿಕ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಟೆಂಡರ್ ಪ್ರಕ್ರಿಯೆ 10 ದಿನಗಳಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಅನಂತರದ ಸುಮಾರು 6 ತಿಂಗಳುಗಳೊಳಗೆ ಹೊಸ ಸಿಗ್ನಲ್ ಲೈಟ್‌ಗಳು ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.
– ಅರುಣಪ್ರಭಾ ಕೆ.ಎಸ್., ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್‌ಸಿಟಿ ಸ್ಪೀಡ್ ಡಿಟೆಕ್ಷನ್
ಟ್ರಾಫಿಕ್ ಸಿಗ್ನಲ್ ಲೈಟ್‌ಗಳ ಜತೆಗೆ ವೀಡಿಯೋ ಅನಾಲಿಟಿಕ್ಸ್ ಕೆಮರಾಗಳನ್ನು ಕೂಡ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಪ್ರತಿಯೊಂದು ವಾಹನದ ವೇಗದ ಮೇಲೆಯೂ ನಿಗಾ ಇಡಲು (ಸ್ಪೀಡ್ ಡಿಟೆಕ್ಷನ್) ಸಾಧ್ಯವಾಗಲಿದೆ. ಅಲ್ಲದೆ ಸೀಟ್‌ಬೆಲ್ಟ್ ಹಾಕದಿರು ವುದು, ಹೆಲ್ಮೆಟ್ ಧರಿಸದಿರುವುದು ಮೊದಲಾದ ಸಂಚಾರ ನಿಯಮ ಉಲ್ಲಂಘನೆಯನ್ನು ಸ್ಪಷ್ಟವಾಗಿ ಗುರುತಿಸಿ ಅಂತಹ ವಾಹನಗಳ ವಿರುದ್ಧ ಪೊಲೀಸರು ಕೂಡಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ವಾಹನದ ನಂಬರ್ ಪ್ಲೇಟ್ ಮಾಹಿತಿ ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. – ಸಂತೋಷ್ ಬೊಳ್ಳೆಟ್ಟು