Advertisement

ಕಚೇರಿ ಸ್ಥಳಾಂತರದ ಬೋರ್ಡ್‌ ಅಳವಡಿಕೆ 

01:19 PM Dec 08, 2018 | |

ನಗರ: ಉಪನೋಂದಣಿ ಕಚೇರಿಯು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡ 4 ದಿನಗಳ ಅನಂತರ ಕಡೆಗೂ ಕಚೇರಿ ಸ್ಥಳಾಂತರಗೊಂಡಿರುವ ಕುರಿತ ಮಾಹಿತಿಯ ಫಲಕವನ್ನು ಹಳೆಯ ಕಚೇರಿಯ ಗೇಟಿಗೆ ಅಳವಡಿಸಲಾಗಿದೆ.

Advertisement

ಕಳೆದ ಸೋಮವಾರ ಉಪನೋಂದಣಿ ಕಚೇರಿಯು ಮಿನಿ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಕಚೇರಿ ಸ್ಥಳಾಂತರಗೊಂಡಿರುವ ಕುರಿತ ಮಾಹಿತಿಯನ್ನು ತಿಳಿಸುವ ಕನಿಷ್ಠ ಸಣ್ಣ ಫಲಕವನ್ನೂ ಅಳವಡಿಸದೇ ಇರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವ ಕುರಿತು ಉದಯವಾಣಿಯ ಸುದಿನದಲ್ಲಿ ಸಚಿತ್ರ ವರದಿಯನ್ನು ಪ್ರಕಟಿಸಲಾಗಿತ್ತು.

ದಿನಂಪ್ರತಿ ನೂರಾರು ಮಂದಿ ಸಂದರ್ಶಿಸುವ ಉಪನೋಂದಣಿ ಕಚೇರಿಯ ಎಲ್ಲ ವ್ಯವಸ್ಥೆಗಳ ಸ್ಥಳಾಂತರವಾಗಿರುವ ಮಾಹಿತಿ ಸಾಮಾನ್ಯ ನಾಗರಿಕರಿಗೆ ತಿಳಿಯದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಮಾಹಿತಿ ಲಭ್ಯವಾಗದೆ ಮನೆಗೆ ಹಿಂದಿರುಗುತ್ತಿದ್ದರು. ಈ ಸಾರ್ವ ಜನಿಕ ತೊಂದರೆಯ ಕುರಿತು ಪತ್ರಿಕೆಯಲ್ಲಿ ಪ್ರಕಟಿಸಲಾದ ವರದಿಯಿಂದ ಸಂಬಂಧ ಪಟ್ಟ ಇಲಾಖೆಯವರು ಎಚ್ಚೆತ್ತು ಕೊಂಡಿದ್ದು, ರಟ್ಟಿಗೆ ಅಳವಡಿಸಲಾದ ಪೇಪರ್‌ ಶೀಟೊಂದರಲ್ಲಿ ಸ್ಥಳಾಂತರದ ಮಾಹಿತಿ ಬರೆದು ಗೇಟಿಗೆ ಅಂಟಿಸಿದ್ದಾರೆ. 

ಕಳೆದ ಕೆಲವು ವರ್ಷಗಳಿಂದ ಉಪ ನೋಂದಣಿ ಕಚೇರಿಯನ್ನು ಎಲ್ಲಾ ಸರಕಾರಿ ಕಚೇರಿಗಳು ಇರುವ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಕುರಿತು ಹೊಯ್ದಾಟಗಳು ನಡೆದಿದ್ದವು. ಶಾಸಕ ಸಂಜೀವ ಮಠಂದೂರು ಅವರು ವಿಧಾನಸಭೆಯಲ್ಲೂ ವಿಚಾರ ಪ್ರಸ್ತಾಪ ಮಾಡಿ ಆದೇಶ ಹೊರಡಿಸಲು ಯಶಸ್ವಿಯಾಗಿದ್ದರು. ಸೋಮವಾರದಿಂದ ಕಚೇರಿಯು ಮಿನಿ ವಿಧಾನಸೌಧದಲ್ಲಿ ಕಾರ್ಯಾರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next