Advertisement

ಕರ್ನಾಟಕದಲಿಯೇ ಮೊದಲು ಎನ್‌ಇಪಿ ಶಿಕ್ಷಣ ಅಳವಡಿಕೆ

11:25 AM Oct 22, 2021 | Team Udayavani |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿಯೇ ಮೊದಲು ಶೈಕ್ಷಣಿಕ ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಿಕೊಂಡಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ವೇಣುಗೋಪಾಲ್‌ ತಿಳಿಸಿದರು.

Advertisement

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಆಕ್ಸ್‌ ಫ‌ರ್ಡ್‌ ಕಾಲೇಜಿನಲ್ಲಿ 2021-24ನೇ ಸಾಲಿನ ವಾಣಿಜ್ಯ ನಿರ್ವಹಣೆಯ ಪದವಿ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಗುರವಾರದಂದು ಹಮ್ಮಿಕೊಂಡಿದ್ದರು.

ಎನ್‌ಇಪಿ ನಿಯಮಗಳು ಮತ್ತು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸುತ್ತಾ, ಈ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಮಾನಸಿಕ, ದೈಹಿಕ ಹಾಗೂ ಮಾನಸಿಕವಾಗಿ ಸ್ವಯಂ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಎನ್‌.ಇ.ಪಿ ಪಠ್ಯಕ್ರಮ ಸಹಕಾರಿಯಾಗಿದೆ ಎಂದರು.

ಐಎಎಸ್‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಗೋಪಾಲನ್‌ ಮಾತನಾಡುತ್ತಾ, ಎನ್‌ಇಪಿ ಶಿಕ್ಷಣದಿಂದ ಪದವಿ ಮುಗಿಸಿದ ನಂತರ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮತ್ತು ಸಿಕ್ಕ ಅವಕಾಶಗಳನ್ನು ಹೇಗೆ ಎದುರಿಸಬೇಕು ಎಂದು ವಿದ್ಯಾರ್ಥಿಗಳೇ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಅರ್ಹತೆಯನ್ನು ಪಡೆದಿರುತ್ತಾರೆ.

ಇದನ್ನೂ ಓದಿ:- ಸರ್ಕಾರಗಳಿಗಿಲ್ಲ ರೈತರ ಕಾಳಜಿ

Advertisement

ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಬಗ್ಗೆ ಗಮನಹರಿಸುತ್ತಾರೆ ಎಂದರು. ಆಕ್ಸ್‌ಫ‌ರ್ಡ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌. ಎನ್‌.ವಿ.ಎಲ್‌. ನರಸಿಂಹ ರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ಆಕ್ಸ್‌ಫ‌ರ್ಡ್‌ ಕಾಲೇಜಿನ ವಾಣಿಜ್ಯ ನಿರ್ವಹಣೆ ಪ್ರಿನ್ಸಿಪಾಲ್‌ ಡಾ. ನಿಖೀತಾ ಆಲೂರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next