Advertisement

Ban: ಆಕ್ರಮಣಕಾರಿ ಶ್ವಾನಗಳ ದತ್ತು ನಿಷೇಧ?

08:34 PM Sep 29, 2023 | Team Udayavani |

ಪಣಜಿ: ಆಕ್ರಮಣಕಾರಿ ಪ್ರವೃತ್ತಿಹೊಂದಿರುವ ತಳಿಯ ಶ್ವಾನಗಳನ್ನು ಶ್ವಾನಪ್ರಿಯರು ದತ್ತು ಪಡೆಯದಂತೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಶುಕ್ರವಾರ ಹೇಳಿದ್ದಾರೆ. ಶ್ವಾನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಈ ವಿಚಾರ ಪ್ರಸ್ತಾಪಿಸಿದ್ದಾರೆ.

Advertisement

ಶ್ವಾನ ಪೋಷಕರು ಸಾಕು ಪ್ರಾಣಿಗಳಾಗಿ ಆಕ್ರಮಣಕಾರಿ ಶ್ವಾನಗಳನ್ನು ದತ್ತು ಪಡೆಯುತ್ತಿದ್ದಾರೆ. ಆದರೆ, ಕನಿಷ್ಠಪಕ್ಷ ಅವುಗಳಿಗೆ ಅಗತ್ಯ ಲಸಿಕೆಯನ್ನೂ ಹಾಕಿಸಿರುವುದಿಲ್ಲ. ಹೀಗಾಗಿ ಅಂಥ ತಳಿಗಳ ಶ್ವಾನಗಳನ್ನು ದತ್ತು ಪಡೆಯದಂತೆ ನಿರ್ಬಂಧಿಸಲು ಯೋಚಿಸುತ್ತಿದ್ದೇವೆ. ಇದರೊಂದಿಗೆ ಬೀದಿನಾಯಿಗಳ ಹಾವಳಿ ಬಗ್ಗೆಯೂ ಸಾವಂತ್‌ ಆತಂಕ ವ್ಯಕ್ತಪಡಿಸಿ, ರಾಜ್ಯದಲ್ಲಿ ಪ್ರತಿದಿನ 1 ಅಥವಾ ಎರಡು ರಸ್ತೆ ಅಪಘಾತಗಳು ಬೀದಿ ಶ್ವಾನಗಳ ಹಾವಳಿಯಿಂದಲೇ ದಾಖಲಾಗುತ್ತಿದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next