ನರಿಮೊಗರು: ವನಮಹೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ನಿತ್ಯ ನಿರಂತರವಾಗಿ ನಡೆಯಬೇಕು. ಗ್ರಾಮದಲ್ಲಿ ವರ್ಷಕ್ಕೆ ಕನಿಷ್ಠ 12 ಮನೆಗಳನ್ನು ದತ್ತು ಪಡೆದು ಅಲ್ಲಿ ವನಮಹೋತ್ಸವ ಕೈಗೆತ್ತಿಕೊಳ್ಳಬೇಕು. ಈ ಯೋಜನೆಗೆ ಎಲ್ಲರ ಸಹಕಾರ ಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕತಾರ್‌ನ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಹೇಳಿದರು.
ಅವರು ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ವತಿಯಿಂದ ನಡೆದ ವನಮಹೋತ್ಸವದಲ್ಲಿ ಸಸಿ ವಿತರಿಸಿ ಮಾತನಾಡಿದರು.
ಮುಂಡೂರು ಗ್ರಾ.ಪಂ. ಅಧ್ಯಕ್ಷ ವಸಂತ್ ಎಸ್.ಡಿ., ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ, ಗ್ರಾ.ಪಂ. ಸದಸ್ಯ ಶಿವನಾಥ ರೈ ಮೇಗಿನಗುತ್ತು ಉಪಸ್ಥಿತರಿದ್ದರು.
ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಮುಂಡೂರು ಗ್ರಾ.ಪಂ. ಸದಸ್ಯರಾದ ಅಶೋಕ್ ಕುಮಾರ್ ಪುತ್ತಿಲ, ಪ್ರೇಮಾ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬೋಳ್ಳೋಡಿ ಹಾಗೂ ಸದಸ್ಯರು, ತಾ.ಪಂ. ಸದಸ್ಯ ಶಿವರಂಜನ್ ಎಂ., ಮುಂಡೂರು ಗ್ರಾ.ಪಂ. ಮಾಜಿ ಸದಸ್ಯ ಇಬ್ರಾಹಿಂ ಮುಲಾರ್, ಮುಂಡೂರು ಪಿಡಿಒ ಲಿಂಗಪ್ಪಯ್ಯ ಪಾಲ್ಗೊಂಡಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ತಿಮ್ಮಪ್ಪ ನಾಯ್ಕ ಬಂಡಿಕಾನ, ಸದಾಶಿವ ಗೌಡ ಕೊಡಂಕಿರಿ, ಗುಲಾಬಿ ಎನ್. ಶೆಟ್ಟಿ ಕಂಪ, ಜಯಂತಿ ರೈ ಮರ್ತಡ್ಕ, ಅರ್ಚಕ ನಾಗೇಶ್ ಕುದ್ರೆತ್ತಾಯ, ಧನಂಜಯ ಸಹಕರಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಕೃಷ್ಣ ಕಣ್ಣಾರಾಯ ಸ್ವಾಗತಿಸಿ, ಶ್ರೀರಂಗ ಶಾಸ್ತ್ರಿ ಮಣಿಲ ವಂದಿಸಿದರು. ಉದಯ ಪಜಿಮಣ್ಣು ನಿರೂಪಿಸಿದರು.