Advertisement
ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ರತ್ನವ್ವ ಹಾಗೂ ಬಸಪ್ಪ ಬ್ಯಾಡಗಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳಿರಲಿಲ್ಲ. ಆದರೆ ಈ ದಂಪತಿ ಗಂಡು ಮಗುವೊಂದು ತಮ್ಮ ಭವಿಷ್ಯದ ಲಾಲನೆ ಪಾಲನೆಗೆ ಬೇಕೆಂದು ತಮ್ಮ ಮಗಳ ಮಗ(ಮೊಮ್ಮಗ)ನನ್ನು ದತ್ತು ಪಡೆದಿದ್ದರು. ಅಲ್ಲದೆ ತಮ್ಮ ವಾರಸುದಾರನಾಗಿ ಮೊಮ್ಮಗನಿಗೆ ತಮ್ಮ ಆಸ್ತಿ ನೋಂದಣಿ ಮಾಡಿಕೊಟ್ಟಿದ್ದರು.ಆದರೆ ಅವರ ನಿರೀಕ್ಷೆಯಂತೆ ದತ್ತು ಪುತ್ರ ಅವರನ್ನು ಲಾಲನೆ ಪಾಲನೆ ಮಾಡದೆ ನಿರ್ಲಕ್ಷಿಸುತ್ತಿರುವುದನ್ನು ಗಮನಿಸಿ ಹಲವು ಬಾರಿ ತಮ್ಮ ಅಳಲನ್ನು ದತ್ತು ಪುತ್ರನಲ್ಲಿ ತೋಡಿಕೊಂಡಿದ್ದರು. ಇದಾವುದು ಫಲಿಸದೆ ಯಥಾಸ್ಥಿತಿ ಮುಂದುವರೆದಿದ್ದರಿಂದ ಅನಿವಾರ್ಯವಾಗಿ ರತ್ನವ್ವ ಹಾಗೂ ಬಸಪ್ಪ ದಂಪತಿ ತಾವು ವಾರಸುದಾರ ಮೊಮ್ಮಗನಿಗೆ ನೀಡಿದ ಆಸ್ತಿ ಮರಳಿ ಪಡೆಯಲು ಮುಂದಾದರು.
Related Articles
Advertisement
ಫಕ್ಕೀರವ್ವ ಇರುವ ಮನೆಯನ್ನು ಆಕೆಯ ಐದನೇ ಪುತ್ರ ತಾಯಿಯಿಂದ ಭಕ್ಷೀಸ ಪತ್ರ ಮಾಡಿಕೊಂಡಿದ್ದನು. ಆದರೆ ತದನಂತರ 5ನೇ ಮಗನಿಂದ ನ್ಯಾಯ ಸಿಗದ ಕಾರಣ ಫಕ್ಕೀರವ್ವ ಆ ಮನೆಯನ್ನು ಮರಳಿ ಪಡೆಯಲು ಸವಣೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ನಡೆಸಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಫಕ್ಕೀರವ್ವನಿಗೆ ಮನೆ ಮರಳಿ ಕೊಡಿಸಿ ನ್ಯಾಯ ಒದಗಿಸಿದ್ದಾರೆ.