ಹುಕ್ಕೇರಿ: ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಮೂಲಕ ರೈತರಿಗೆ ವಾರ್ಷಿಕ ಬಡ್ಡಿರಹಿತ ಬೆಳೆಸಾಲ ವಿತರಿಸಲಾಗುತ್ತಿದೆ. ರೈತರು ಸರಕಾರ ಹಾಗೂ ಸಹಕಾರಿ ಸಂಘ-ಸಂಸ್ಥೆಗಳಿಂದ ಪಡೆದ ಸಾಲಸೌಲಭ್ಯದ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸಭಲರಾಗಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ತಾಲೂಕಿನ ಹೊಸೂರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತರಿಗೆ ಪತ್ತಿನ ಸಾಲ ವಿತರಣಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ರೈತರು ಹೊಸಹೊಸ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿ ಮಿಶ್ರ ಬೆಳೆ ಬೆಳಯುವ ಮೂಲಕ ತಮ್ಮ ಸಂಪಾದಣೆ ಹಚ್ಚಿಸಿಕೊಂಡು ಆರ್ಥಿಕವಾಗಿ ಬೆಳೆದರೆ ತಾವು ಸಂಘದಿಂದ ಪಡೆದು ಸಾಲಕ್ಕೆ ಪ್ರತಿ ಸಿಕ್ಕತಾಗುತ್ತದೆ ಎಂದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ರೈತರು ಸಹಕಾರಿ ಸಂಘದಲ್ಲಿ ಹಾಗೂ ರಾಷ್ಟ್ರೀಕರ ಬ್ಯಾಂಕಗಳಲ್ಲಿ ಬೆಳೆಯ ಮೇಲೆ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಸಂಘಗಳು ಪ್ರಗತಿ ಹೊಂದಲು ಸಾಧ್ಯ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಾಹುಬಲಿ ನಾಗನೂರಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಒಟ್ಟು 431ಜನ ರೈತ ಸದಸ್ಯರಿಗೆ 2.91ಕೋಟಿ ಹೊಸ ಪತ್ತಿನ ಸಾಲ ಮಂಜೂರು ಮಾಡಲಾಗಿದೆ ಎಂದರು.
ಈ ವೇಳೆ ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಚಯ್ನಾ ಹಿರೇಮಠ, ತಾಪಂ ಸದಸ್ಯ ಬಾಳಪ್ಪ ಅಕ್ಕತಂಗೇರಹಾಳ, ಬಿ.ಬಿ. ಪಾಟೀಲ, ಬಿ.ಎಸ್. ರಾಮಗೋನಟ್ಟಿ, ಯರನಾಳ ಪಿಕೆಪಿಎಸ್ ಅಧ್ಯಕ್ಷ ಶ್ರೀಕಾಂತ ಪಾಟೀಲ, ಬಿಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾಧಿಕಾರಿ ಎಸ್.ಬಿ. ಸನದಿ ಸೇರಿದಂತೆ ಇತರರು ಇದ್ದರು. ಉಮೇಶ ಪಾಟೀಲ ನಿರೂಪಿಸಿದರು. ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಬಸಯ್ನಾ ಹಿರೇಮಠ ವಂದಿಸಿದರು.