Advertisement

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ: ಖಾದರ್

10:33 AM Apr 08, 2020 | mahesh |

ಉಳ್ಳಾಲ: ಮನೆಯಿಂದ ಚಿಕಿತ್ಸೆಗಾಗಿ ಆಗಮಿಸಿ ರಸ್ತೆ ಬದಿಯಲ್ಲಿ ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಶಾಸಕ ಯು.ಟಿ. ಖಾದರ್ ಆಸ್ಪತ್ರೆಗೆ ದಾಖಲುಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಾಟೆಕಲ್ಲು ಬಳಿ ನಡೆದಿದೆ.

Advertisement

ಮೊಂಟೆಪದವು ನಿವಾಸಿ ಅನಾರೋಗ್ಯದಿಂದ ಚಿಕಿತ್ಸೆಗಾಗಿ ನಡೆದುಕೊಂಡು ಬಂದಿದ್ದು ನಾಟೆಕಲ್ ದೇರಳಕಟ್ಟೆ ನಡುವೆ ರಸ್ತೆ ಬದಿಯಲ್ಲಿ ಬಳಲಿ ಕುಳುತಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಶಾಸಕ ಯು.ಟಿ. ಖಾದರ್ ಅವರಿಗೆ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರು ದೇರಳಕಟ್ಟೆ ಬಳಿ ಇರುವ ಮಾಹಿತಿ ನೀಡಿದ್ದರು. ಖಾದರ್ ಅವರು 108 ಅ್ಯಂಬುಲೆನ್ಸ್ ಗೆ ಕರೆ ಮಾಡಿದ್ದು, 30 ನಿಮಿಷವಾದರೂ ಅ್ಯಂಬುಲೆನ್ಸ್ ಬಂದಿಲ್ಲ ಎಂದು ತಿಳಿದ ತಕ್ಷಣ ಕೋಟೆಕಾರು ಬಗಂಬಿಲ ಬಳಿ ಗ್ರಾಮಸ್ಥರ ಅಹವಾಲು ಸ್ವೀಕರಿಸುತ್ತಿದ್ದ ಶಾಸಕರು ಸ್ಥಳಕ್ಕೆ ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಅ್ಯಂಬುಲೆನ್ಸ್ ಆಗಮಿಸಿದ್ದು ಅನಾರೋಗ್ಯ ಪೀಡಿತ ವ್ಯಕ್ತಿಯನ್ಬು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಮಾಸ್ಕ್ ತೊಡಿಸಿದ ಖಾದರ್ : ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿತ್ತಾದರೂ ಯಾರೊಬ್ಬರೂ ಕೂಡಾ ಆತನ ಹತ್ತಿರ ಹೋಗಿ ಆಂಬ್ಯುಲೆನ್ಸ್ ಹತ್ತಿಸಲು ತಯಾರಿರಲಿಲ್ಲ.ಆದರೆ ಶಾಸಕ ಯು.ಟಿ.ಖಾದರ್ ರವರನ್ನು ಕಂಡಾಗ ಆತ ಶಾಸಕರ ಹೆಸರು ಕರೆದು ಹತ್ತಿರ ಬಂದಿದ್ದು ಸ್ವತಹ ಖಾದರ್ ಆತನಿಗೆ ಮಾಸ್ಕ್ ಹಾಕಿ ಆಂಬ್ಯುಲೆನ್ಸ್ ಹತ್ತಿಸಿ ವೆನ್ಲಾಕ್ ಗೆ ಕರೆದು ಕೊಂಡು ಹೋಗುವಂತೆ ಸೂಚಿಸಿ ಮಾನವೀಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next