Advertisement

ವೃತ್ತಿಪರ ಕೋರ್ಸ್‌: ಪ್ರವೇಶ ದಿನಾಂಕ ವಿಸ್ತರಣೆ

03:50 AM Jul 05, 2017 | Team Udayavani |

ಬೆಂಗಳೂರು: ವೈದ್ಯಕೀಯ, ದಂತವೈದ್ಯಕೀಯ ಸೀಟು ಹೊರತುಪಡಿಸಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ-2017ರ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಛಾಯ್ಸ್ಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಕೊನೆಯ ದಿನಾಂಕವನ್ನು ಜು. 7ರವರೆಗೆ ವಿಸ್ತರಿಸಲಾಗಿದೆ. ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅನಂತರ ಇಲ್ಲಿಯವರೆಗೆ ಛಾಯ್ಸ್ಗಳ ಆಯ್ಕೆ ಮಾಡದಿರುವ ಅಭ್ಯರ್ಥಿಗಳು ಸೂಕ್ತವಾದ ಛಾಯ್ಸ್ಗಳನ್ನು ಆಯ್ಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

Advertisement

ಪರಿಷ್ಕೃತ ವೇಳಾಪಟ್ಟಿ: ಸಿಇಟಿ-2017ರ ಕೈಪಿಡಿಯಲ್ಲಿ ನೀಡಿರುವ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜು. 11ರ ಬೆಳಗ್ಗೆ 11 ಗಂಟೆಯಿಂದ ಜು. 14ರ ಬೆಳಗ್ಗೆ 11 ಗಂಟೆ ತನಕ ಆಯ್ಕೆಯ ಬದಲಾವಣೆ, ಉನ್ನತೀಕರಿಸಲು ಅವಕಾಶ ನೀಡಲಾಗಿದೆ.

ಜು. 17ರಂದು ಸೀಟು ಹಂಚಿಕೆ ವಿವರ ಪ್ರಕಟಿಸಲಾಗುತ್ತದೆ. ಜು. 20ರೊಳಗೆ ಹಂಚಿಕೆಯಾದ ಸೀಟುಗೆ ಶುಲ್ಕಪಾವತಿಸಿ, ಕಾಲೇಜು ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಜು. 21ರ ಸಂಜೆ 5.30ರೊಳಗೆ ಸಂಬಂಧಪಟ್ಟ ಕಾಲೇಜಿಗೆ ಹಾಜರಾಗಬೇಕು. ಮೊದಲನೇ ಸುತ್ತಿನ  ಸೀಟು ಹಂಚಿಕೆ  ಅನಂತರ ಉಳಿದಿರುವ, ರದ್ದುಪಡಿಸಿ ಕೊಂಡಿರುವ / ಹೊಸದಾಗಿ ಸೇರಿಸಲ್ಪಟ್ಟ ಸೀಟುಗಳು 2ನೇ ಸುತ್ತಿನಲ್ಲಿ ಲಭ್ಯವಿರುತ್ತವೆ. ಛಾಯ್ಸ್-2, ಛಾಯ್ಸ್-3ರನ್ನು ಆಯ್ಕೆ ಮಾಡಿರುವ ಹಾಗೂ ಯಾವುದೇ ಸೀಟುಗಳನ್ನು ಇಲ್ಲಿಯವರೆಗೆ ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ಮಾಹಿತಿಗಾಗಿ  //kea.kar.nic.in  ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next