ದಿನ ಬೆಳಗಾದರೆ, ಈ ಗ್ರೂಪ್‌ನಲ್ಲಿ ನಾಯಿ- ಬೆಕ್ಕಿನ ಮರಿಗಳದ್ದೇ ಸುಪ್ರಭಾತ. ಇವತ್ತು ಯಾರ ಮನೆಯ ನಾಯಿ ಬೇಗ ಏಳು¤, ಯಾರ ಮನೆ ಬೆಕ್ಕು ರಾತ್ರಿ ಏನು ಕಿತಾಪತಿ ಮಾಡಿತು… ಇಂಥದ್ದೇ ಸಂಗತಿಗಳ ಬಗ್ಗೆ ಇಲ್ಲಿ ಚರ್ಚೆಗಳಾಗುತ್ತವೆ. ನಮ್ಮ ಅಪಾರ್ಟ್‌ಮೆಂಟ್‌ನ 50ಕ್ಕೂ ಅಧಿಕ ಪೆಟ್‌ಗಳಿಗಾಗಿಯೇ ಇರುವಂಥ ಗ್ರೂಪ್, ಪಪ್ಪೀಸ್ ಡೈರಿ.
Advertisement
ಒಮ್ಮೆ ಒಂದನೇ ಮಹಡಿಯ ಫ್ಲಾಟ್‌ನ ಆಂಟಿಯವರ “ಇಂಡಿಯನ್ ಪಗ್’ ತಳಿಯ ನಾಯಿ, ಸಂಜೆ ವೇಳೆ ದಿಢೀರನೆ ನಾಪತ್ತೆ ಆಗಿತ್ತು. ಆ ನಾಯಿ ನಿಜಕ್ಕೂ ಮುದ್ದುಮುದ್ದಾಗಿತ್ತು. ಗ್ರೂಪ್‌ನಲ್ಲಿ ಆಂಟಿಯ ಸಂಕಟ ನೋಡುವ ಹಾಗಿರಲಿಲ್ಲ. ನನ್ನ ಮಗ ಅವರ ಸಂಕಟದ ಸೂಕ್ಷ್ಮತೆ ಅರಿಯದೇ ಒಂದು ಕಿತಾಪತಿ ಮಾಡಿದ. ಎಂದೋ ಪಾರ್ಕ್‌ನಲ್ಲಿ ತೆಗೆದಿದ್ದ ಅದರ ಹಳೇ ಫೋಟೋವೊಂದನ್ನು ಅಪ್‌ಲೋಡ್ ಮಾಡಿ, “ಆಂಟಿ, ಬೇಗ ಬನ್ನಿ… ನಿಮ್ಮ ನಾಯಿ ಪಾರ್ಕ್‌ಗೆ ಬಂದಿದೆ…’ ಅಂತ ಮೆಸೇಜು ಮಾಡಿಬಿಟ್ಟ. ಅವರು ಎದ್ದರೋ, ಬಿದ್ದರೋ ಅಂತ ಪಾರ್ಕ್‌ನಲ್ಲಿ ಸುತ್ತಾಡಿದ್ದೇ ಸುತ್ತಾಡಿದ್ದು. ಆದರೆ, ನಾಯಿ ಮಾತ್ರ ಸಿಗಲಿಲ್ಲ. ಅಸಲಿಗೆ ಆ ನಾಯಿಮರಿ, ನನ್ನ ಮಗನ ಬಳಿಯೇ ಇತ್ತು. ಅವನು ಅಪಾರ್ಟ್‌ಮೆಂಟ್‌ನಲ್ಲೇ ಇದ್ದ. ಆ ಮರಿಯನ್ನು ಸೀದಾ ತೆಗೆದ್ಕೊಂಡು ಹೋಗಿ, ಅವರ ಫ್ಲ್ಯಾಟ್ ಎದುರು ಬಿಟ್ಟು, “ಆಂಟಿ… ನೀವೆಲ್ಲಿದ್ದೀರಿ? ನಿಮ್ಮ ಮ್ಯಾಗಿ ಬಾಗಿಲು ತಟ್ಟುತ್ತಿದೆ… ಬೇಗ ಬಂದು ಬಾಗಿಲು ತೆರೆಯಿರಿ…’ ಎಂದು ಮೆಸೇಜು ಬಿಟ್ಟ. ಅದನ್ನು ನೋಡಿ, ಅವರು ಮತ್ತೆ ಓಡೋಡಿ ಬಂದಾಗ, ನಾಯಿಮರಿ ಮನೆಯ ಬಾಗಿಲಿನಲ್ಲೇ ಇತ್ತು. ಕೊನೆಗೆ ನನ್ನ ಮಗನದ್ದೇ ಕಿತಾಪತಿ ಎಂದು ಗೊತ್ತಾಗಿ, ಸಣ್ಣಗೆ ಮಾತಿನ ಯುದ್ಧವೂ ಮುಗಿದಿತ್ತು.