Advertisement
ಸ್ವೋದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಸ್ವಾವಲಂಬಿ ಸಾರಥಿ, ಗಂಗಾಕಲ್ಯಾಣ, ಕಾಯಕ ಕಿರಣ ಯೋಜನೆ ಹೀಗೆ ವಿವಿಧ ನಿಗಮಗಳಿಂದ ಬ್ಯಾಂಕ್ ಮೂಲಕ ಸಾಲಸೌಲಭ್ಯ ಒದಗಿಸುವುದು ಅಥವಾ ನಿಗಮದಿಂದಲೇ ನೇರವಾಗಿ ನೀಡುವ ಸೌಲಭ್ಯಕ್ಕೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಉಭಯ ಜಿಲ್ಲೆಯ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಉಭಯ ಜಿಲ್ಲೆಯ ಜಿ.ಪಂ. ಸಿಇಒಗಳು ಪ್ರತ್ಯೇಕವಾಗಿ ಸಭೆ ನಡೆಸಿ, ಸೌಲಭ್ಯ ಅಂಗೀಕಾರಕ್ಕಾಗಿ ಪ್ರಸ್ತಾವನೆಯನ್ನು ನಿಗಮದ ಕೇಂದ್ರ ಕಚೇರಿಗೆ ಸಲ್ಲಿಸಲು ತೀರ್ಮಾನಿಸಿ, ಎಲ್ಲ ನಿಗಮದ ಸೌಲಭ್ಯಗಳ ಪ್ರಸ್ತಾವನೆಯನ್ನು 2023ರ ಡಿಸೆಂಬರ್‌ನಲ್ಲಿ ಕೇಂದ್ರ ಕಚೇರಿಗೆ ಅನುಮೋದನೆಗಾಗಿ ಕಳುಹಿಸಿಕೊಡಲಾಗಿತ್ತು.ಆದರೆ ಈವರೆಗೂ ನಿಗಮದ ಕೇಂದ್ರ ಕಚೇರಿಯಿಂದ ಅನುಮೋದನೆ ದೊರೆತಿಲ್ಲ.
ಉಡುಪಿ ಜಿಲ್ಲೆಯಿಂದ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಸ್ವೋದ್ಯೋಗ ಸಾಲಸೌಲಭ್ಯಕ್ಕೆ 540 ಅರ್ಜಿ ಸಲ್ಲಿಕೆಯಾಗಿದ್ದು, ಅಂಗೀಕಾರಗೊಂಡಿರುವುದು 5 ಮಾತ್ರ. ದ.ಕ.ದ 57ರಲ್ಲಿ 6 ಅಂಗೀಕೃತವಾಗಿವೆ. ವಿಶ್ವಕರ್ಮ ನಿಗಮದ ಸ್ವೋದ್ಯೋಗ ಸಾಲ ಸೌಲಭ್ಯಕ್ಕೆ ಉಡುಪಿಯ 149 ಅರ್ಜಿಯಲ್ಲಿ 3 ಅಂಗೀಕೃತಗೊಂಡರೆ, ದ.ಕ.ದ 71 ಅರ್ಜಿಯಲ್ಲಿ 3 ಅಂಗೀಕೃತವಾಗಿವೆ.
Related Articles
ಈವರೆಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರೇ ನಿಗಮ ಮಂಡಳಿಗಳ ಅಧ್ಯಕ್ಷರಾಗಿದರು. ಇದೀಗ ರಾಜ್ಯ ಸರಕಾರ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿರುವುದರಿಂದ ಈ ಎಲ್ಲ ಅರ್ಜಿಗಳಿಗೆ ಆದಷ್ಟು ಬೇಗ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆಯಿದೆ. ಆಡಳಿತಾತ್ಮಕ ಅನುಮೋದನೆ ಸಿಗದೇ ಸೌಲಭ್ಯಗಳನ್ನು ವಿತರಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement