Advertisement
ಭಾರತೀಯ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳಿಗೆ ಅಧಿಕಾರಿಗಳೇ ಅಧಿಕೃತ ಬ್ರೋಕರ್‌ಗಳಂತಿದ್ದಾರೆ. ಯಾವಾಗ ಜನರು ಅಧಿಕಾರಿಗಳನ್ನು ಕೇಂದ್ರೀಕರಿಸಲು ಪ್ರಾರಂಭಿಸುತ್ತಾರೋ ಆಗ ಪ್ರಜಾಪ್ರಭುತ್ವ ಸರಿ ದಾರಿಗೆ ಬರಲಾರಂಭಿಸುತ್ತದೆ ಎನ್ನುತ್ತಾರೆ ಈ ತಂಡದ ಸದಸ್ಯರು.
ಭ್ರಷ್ಟಾಚಾರ ತಡೆಯುವುದು, ಹೋರಾಟಗಳ ಉದ್ದೇಶ ಈಡೇರಿಕೆ, ಸೂಕ್ತ ನ್ಯಾಯ ಒದಗಿಸುವುದರ ಸಹಿತ ಕಾನೂನುಗಳು ಎಲ್ಲ ಜನರಿಗೂ ಸೂಕ್ತ ರೀತಿಯಲ್ಲಿ ಪಾಲನೆಯಾಗಬೇಕು, ರಾಜಕಾರಣಿಗಳು ಮಾಡಬೇಕಿರುವ ಕೆಲಸವನ್ನು ಯಾವ ರೀತಿ ಮಾಡಬಹುದು ಎಂದು ತೋರ್ಪಡಿಸುವ ಉದ್ದೇಶ ಈ ತಂಡದ್ದು. ಅನುದಾನಗಳ ಬಗ್ಗೆಯೂ ಮಾಹಿತಿ ಈ ತಂಡದ ಮೂಲಕ ಮಾಹಿತಿ ನೀಡುವ ಕೆಲಸವೂ ನಡೆಯಲಿದೆ. ರಾಜಕಾರಣಿಗಳು ಮಾಡಬೇಕಿರುವ ಮತ್ತು ಮಾಡದ ಕೆಲಸಗಳನ್ನು ತಿಳಿಸಲಾಗುತ್ತದೆ. ಅನುದಾನಗಳನ್ನು ಯಾವ ರೀತಿ ರಾಜಕಾರಣಿಗಳು ವಿನಿಯೋಗಿಸುತ್ತಾರೆ ಎಂಬ ಇಂಚಿಂಚು ಮಾಹಿತಿಯೂ ಲಭ್ಯವಾಗಲಿದೆ. ಲೋಕಾಯುಕ್ತಕ್ಕೆ ದೂರು
ಭ್ರಷ್ಟ ಅಧಿಕಾರಿಗಳು ಕಂಡುಬಂದಲ್ಲಿ ದಾಖಲೆ ಸಮೇತ ಈ ತಂಡದ ಸದಸ್ಯರು ಲೋಕಾಯುಕ್ತಕ್ಕೆ ದೂರು ನೀಡಲಿದ್ದಾರೆ. ಲೋಕಾಯುಕ್ತ ಪರಿಶೀಲನೆ ಬಳಿಕ ವಿಚಾರಣೆ ನಡೆಯಲಿದೆ.
Related Articles
ಎಲ್ಲ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ತಂಡವು ಒಳ್ಳೆಯ ಅಧಿಕಾರಿ, ಮಧ್ಯಮ, ಲೂಟಿಕೋರ ಎಂಬ 3 ವಿಭಾಗಗಳಲ್ಲಿ ಗಮನ ಹರಿಸುತ್ತದೆ. ಬಳಿಕ ಒಳ್ಳೆಯ ಅಧಿಕಾರಿ ಗಳನ್ನು ಬೆಂಬಲಿಸಲಾಗುವುದು. ಲೂಟಿ ಕೋರ ಅಧಿಕಾರಿಗಳ ವಿರುದ್ಧ ಮಾಹಿತಿ ಕಲೆ ಹಾಕಲಾಗುತ್ತದೆ. ಈ ಬಗ್ಗೆ ತಂಡ ರಾಷ್ಟ್ರೀಯ ಸಮಿತಿಯಲ್ಲಿ ಈಗಾಗಲೇ ಸಭೆ ನಡೆಸಿದೆ.
Advertisement
ಕಾರ್ಯವೈಖರಿ ಹೇಗೆ?ಪ್ರತೀ ತಾಲೂಕು, ಗ್ರಾಮದಿಂದ ಹಿಡಿದು ರಾಷ್ಟ್ರಾದ್ಯಂತ ಕಾರ್ಯಾಚರಿಸುವ ತಂಡವು ಕೆಳ ದರ್ಜೆಯ ನೌಕರರಿಂದ ಹಿಡಿದು ಉನ್ನತ ಅಧಿಕಾರಿಗಳ ಚಲನವಲನ, ಆಸ್ತಿ ವಿವರ ಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ.
ಪ್ರತೀ ರಾಜ್ಯದಿಂದಲೂ ಕನಿಷ್ಠ 25 ವಕೀಲರು, ನಿವೃತ್ತ ಐಎಸ್, ಐಪಿಎಸ್ ಅಧಿಕಾರಿಗಳು, ವೈದ್ಯರು, ಎಂಜಿನಿಯರ್ ಗಳು, ಮಾಧ್ಯಮ ಪ್ರತಿನಿಧಿಗಳು, ದೇಶಾಭಿಮಾನಿಗಳು, ಗ್ರಾಮೀಣ ಮಟ್ಟದಲ್ಲಿ ದೇಶಾಭಿವೃದ್ಧಿ ಚಿಂತನೆಯುಳ್ಳವರು ಸಹಿತ ಈ ತಂಡದಲ್ಲಿದ್ದಾರೆ. ಪ್ರತಿ ಅಧಿಕಾರಿ ಮೇಲೆ ಶೇ. 10ರಷ್ಟು ಸಿಬಂದಿ ನಿಗ ಇಡಲಿದ್ದಾರೆ. ಪುನೀತ್ ಸಾಲ್ಯಾನ್