ಗ್ರೂಪ್‌ನ ಹೆಸರು: ಗೋ ಗೋವಾ ಗಾನ್ 2019
ಅಡ್ಮಿನ್: ಮಹೇಶ್, ಬಾಬು, ಯೇರ್ರಿ, ಶಾಂತು, ಶಿವು, ವಿನೋದ್, ಬಸವ.
ಒಂದು ದಿನ ಸಂಜೆ ಟೀ ಕುಡಿಯುತ್ತಾ, ನಾನು ಮತ್ತು ನನ್ನ ಗೆಳೆಯ ಮಹೇಶ್, ಹೀಗೆ ಮಾತಾಡುತ್ತಿದ್ದೆವು. ಯಾಕೋ ಇದ್ದಕ್ಕಿದ್ದಂತೆ, ಗೋವಾದ ಪ್ರಸ್ತಾಪ ಬಂತು. ನನ್ನ ಗೆಳೆಯರಲ್ಲಿ ಅನೇಕರು ಗೋವಾ ನೋಡಿರದ ಕಾರಣ, “ಎಲ್ಲರೂ ಜತೆಗೂಡಿ ಗೋವಾಕ್ಕೆ ಹೋದರೆ ಚೆಂದ’ ಎಂಬ ಮನದಾಸೆ ಬಿಚ್ಚಿಟ್ಟೆ. ಅದನ್ನು ಗೆಳೆಯರ ಬಳಿ ಹೇಳಿದಾಗ, ಅವರೂ ಒಪ್ಪಿಕೊಂಡಿದ್ದು, ಉತ್ಸಾಹಕ್ಕೆ ರೆಕ್ಕೆ ಬಂದಂತಾಗಿತ್ತು. ಆಗ ಹುಟ್ಟಿದ ಗ್ರೂಪೇ, “ಗೋ ಗೋವಾ ಗಾನ್- 2019′.
ಅಲ್ಲಿಂದ ಶುರುವಾಯ್ತು ನೋಡಿ, ಗೋವಾ ಜಪ. ಟೂರ್‌ಗೂ ಮೊದಲೇ, ನಾವು ಮಾತಿನಲ್ಲಿಯೇ ಕನಸಿನ ಗೋವಾವನ್ನು ನೋಡಿಬಿಟ್ಟಿದ್ದೆವು. ಗೋವಾದ ಟೂರಿಸ್ಟ್ ತಾಣಗಳ ಬಗ್ಗೆ ಸಕಲ ಮಾಹಿತಿಗಳನ್ನೂ ಹಂಚಿಕೊಂಡೆವು. ಗೋವಾ ಬಗ್ಗೆ, ಅವರು ಇವರು ಹೇಳಿದ ಕತೆ, ಫಾರಿನ್ನೋರು ಅರೆಬರೆ ಬಟ್ಟೆ ಹಾಕ್ಕೊಂಡ್ ಓಡಾಡ್ತಾರೆ ಅನ್ನೋ ಕುರಿತ ಗಾಸಿಪ್‌ಗ್ಳು, ನಮಗೇನೋ ಕಿಕ್ ಕೊಟ್ಟಿದ್ದವು.
ಗೋವಾಕ್ಕೆ ಹೋದ ಮೇಲಂತೂ, ಗ್ರೂಪ್‌ನಲ್ಲಿ ಪೋಸ್ಟ್‌ಗಳ ದೀಪಾವಳಿಯೇ ಆಗಿಹೋಯಿತು. ಸೆಲ್ಫಿಗಳು, ಫೋಟೋಗಳು ನಿರಂತರವಾಗಿ ಪೋಸ್ಟ್ ಆಗುತ್ತಲೇ ಇದ್ದವು. ನಮ್ಮ ಈ ರಸಮಯ ಕ್ಷಣ ನೋಡಿ, ಬರಲಾಗದವರು ಹೊಟ್ಟೆಕಿಚ್ಚು ಪಟ್ಟಿದ್ದೂ ಇದೆ. ಟ್ರಿಪ್ ಹೋಗಿ ಬಂದ ಮೇಲೂ, ಅದರ ಮೆಲುಕು ನಿಂತಿರಲಿಲ್ಲ. ಅಲ್ಲಿ ಕಳೆದ ಕ್ಷಣಗಳನ್ನು ನೆನೆದು, ಕಾಲೆಳೆಯುವ ಪ್ರಸಂಗಗಳು ಈಗಲೂ ನಡೆಯುತ್ತಲೇ ಇವೆ.
ಬಾಬು ಪ್ರಸಾದ್ ಎ. ಬಳ್ಳಾರಿ