Advertisement
ಅದಮಾರು, ಮಲ್ಪೆ, ಮಟ್ಟು ಭಾಗ ದಿಂದ ಸಾಲುಗಟ್ಟಿದ ವಾಹನಗಳಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಮಟ್ಟುಗುಳ್ಳ, ಸೀಯಾಳ,ಎಣ್ಣೆ ಸಮರ್ಪಿಸಲ್ಪಟ್ಟಿತು. ಜೋಡುಕಟ್ಟೆ ಯಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿ ತಲುಪಿತು. ಪಾರ್ಕಿಂಗ್ ಪಕ್ಕದ ಉಗ್ರಾಣದಲ್ಲಿ ಸಾಮಗ್ರಿಗಳನ್ನು ಜಮಾವಣೆ ಮಾಡಲಾಯಿತು.
ಮಠದ ಬಿರುದಾವಳಿ, ನಾಸಿಕ್ ಬ್ಯಾಂಡ್ ನಿನಾದಗಳೊಂದಿಗೆ ಕೀಲುಕುದುರೆ ಸಹಿತ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು.ಇಸ್ಕಾನ್ ವೃಂದದವರ ಭಜನೆ, ಮಹಿಳೆ ಯರ ಚೆಂಡೆ ನಿನಾದದೊಂದಿಗೆ ಸಮವಸ್ತ್ರ ಧಾರಿ ಮಹಿಳೆಯರ ಸಹಿತ 2,000 ಮಂದಿ ಭಾಗವಹಿಸಿದ್ದರು. ಬುಟ್ಟಿ, ಬೋಟ್‌ನಲ್ಲಿ ಬಂತು ಮಟ್ಟು ಗುಳ್ಳ
ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಟ್ಟು ಲಕ್ಷ್ಮೀನಾರಾಯಣ ಮತ್ತು ಸಹೋದರರು ಮಿನಿ ಬೋಟ್‌ನಲ್ಲಿ ಮಟ್ಟುಗುಳ್ಳಗಳನ್ನು ತುಂಬಿ ತಂದಿದ್ದರು. ಬೆಳೆಗಾರ ಮಹಿಳೆಯರು ಮತ್ತು ಪುರುಷರು 50ಕ್ಕೂ ಅಧಿಕ ಅಲಂಕೃತ ಬುಟ್ಟಿಗಳಲ್ಲಿ ಗುಳ್ಳದ ಹೊರೆ ಹೊತ್ತು ತಂದರ್ಪಿಸಿದರು.