Advertisement
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈಗಾಗಲೇ ಸುರಕ್ಷೆ, ವಾಹನ ನಿಲುಗಡೆ, ವಾಹನಗಳ ಓಡಾಟ ಇತ್ಯಾದಿಗಳ ಬಗ್ಗೆ ಪೂರ್ವಯೋಜಿತವಾಗಿ ಸಭೆ ನಡೆಸಿರುವ ಬಗ್ಗೆ ಸಂಪೂರ್ಣ ಸಿದ್ಧತೆ ವರದಿಯನ್ನು ಜಿಲ್ಲಾಡಳಿತದ ಮೂಲಕ ಶ್ರೀಕೃಷ್ಣ ಸೇವಾ ಬಳಗಕ್ಕೆ ನೀಡಿದ್ದಾರೆ. ಮೆರವಣಿಗೆ ಸಾಗುವ ಜೋಡುಕಟ್ಟೆಯಿಂದ ಕಲ್ಪನಾ ಟಾಕೀಸ್‌ವರೆಗಿನ ರಸ್ತೆಗೆ ಸಂಪೂರ್ಣವಾಗಿ ಡಾಮರು ಹಾಕಲಾಗಿದ್ದು, ಹೊಂಡ ಮುಕ್ತಗೊಳಿಸಲಾಗಿದೆ ಎಂದರು.
ಜ.18ರಂದು ಅಪರಾಹ್ನ 2.30ಕ್ಕೆ ನಡೆಯುವ ಪರ್ಯಾಯ ದರ್ಬಾರಿನಲ್ಲಿ ಅಷ್ಟಮಠಗಳ ಯತಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ, ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದೆ ಶೋಭಾ ಕರಂದ್ಲಾಜೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ವೀರಪ್ಪ ಮೊಲಿ, ಉದ್ಯಮಿ ಡಾ| ಜಿ.ಶಂಕರ್, ಭೀಮಾ ಜುವೆಲರ್ನ ವ್ಯವಸ್ಥಾಪಕ ಪಾಲುದಾರ ವಿಷ್ಣುಶರಣ್ ಕೆ.ಭಟ್, ಬರೋಡ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮುರಳೀ ರಾಮಸ್ವಾಮಿ, ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಶಂಕರ್ ನಾರಾಯಣ ಆರ್.ಎ., ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಸಿಂಡಿಕೇಟ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೀಫ್ ಜನರಲ್ ಮ್ಯಾನೇಜರ್ ಅಭಿಜಿತ್ ಮುಜುಂದಾರ್, ಎಲ್‌ಐಸಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ಅನಂತಪದ್ಮನಾಭ ಕೆ., ಐಸಿಐಸಿಐ ಬ್ಯಾಂಕ್‌ನ ಪ್ರಾಂತೀಯ ಮುಖ್ಯಸ್ಥ ಚಲಮ್ ಮೂರ್ತಿ ಸಹಿತ ಹಲವಾರು ಮಂದಿ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದರು. ಸುಬ್ರಹ್ಮಣ್ಯ ಮಾರ್ಪಳ್ಳಿ, ಪ್ರಶಾಂತ್ ರಾವ್, ವೈ.ಎನ್. ರಾಮಚಂದ್ರ, ಜಗದೀಶ್ ಶೆಟ್ಟಿ, ದಿನೇಶ್ ಪುತ್ರನ್, ಸುವರ್ಧನ್ ನಾಯಕ್, ಮಂಜುನಾಥ ಮಣಿಪಾಲ ಉಪಸ್ಥಿತರಿದ್ದರು.
Related Articles
ಜ.17ರಂದು ಸಾಯಂಕಾಲ 6 ಗಂಟೆಗೆ ಪರ್ಯಾಯ ಪೀಠಾಧೀಶ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರನ್ನು ಶ್ರೀಕೃಷ್ಣ ಸೇವಾಬಳಗದ ವತಿಯಿಂದ ಗೌರವಿಸಲಾಗುತ್ತದೆ. ಪರ್ಯಾಯಕ್ಕೆ ಸಂಬಂಧಿಸಿದ ಎಲ್ಲ ವ್ಯವಸ್ಥೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಶ್ರೀಕೃಷ್ಣ ಸೇವಾ ಬಳಗದ ಅನೇಕ ಸಮಿತಿಗಳನ್ನು ರಚನೆ ಮಾಡಿ ಅದಕ್ಕೆ ಪ್ರತ್ಯೇಕ ಸಂಚಾಲಕರನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
Advertisement