Advertisement

100ಕ್ಕೂ ಅಧಿಕ ಬಾಣಸಿಗರಿಂದ ಸಹಸ್ರಾರು ಭಕ್ತರಿಗೆ ಭೋಜನ ತಯಾರಿ

11:14 PM Jan 16, 2020 | Sriram |

ಉಡುಪಿ: ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪ್ರಥಮ ಪರ್ಯಾಯ ಅಂಗವಾಗಿ ಆಗಮಿಸುವ ಭಕ್ತರಿಗೆ ಅಗತ್ಯವಿರುವ ಭೋಜನ ಸಿದ್ಧತೆ ಶ್ರೀಕೃಷ್ಣ ಮಠದಲ್ಲಿ ಭರದಿಂದ ಸಾಗುತ್ತಿದೆ.

Advertisement

100 ಬಾಣಸಿಗರಿಂದ
ಭೋಜನ ಸಿದ್ಧತೆ
ಕೃಷ್ಣ ಮಠ ಪಾರ್ಕಿಂಗ್‌ ಏರಿಯಾ ಬಳಿಯ ಬೈಲಕೆರೆ ಸೇರಿಗಾರ ಕುಟುಂಬಸ್ಥರ ಸುಮಾರು ಒಂದೂವರೆ ಎಕರೆ ಸ್ಥಳದಲ್ಲಿ ಪ್ರಸಾದ ತಯಾರಿ ಮತ್ತು ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ಯಾಯೋತ್ಸವದಲ್ಲಿ ಅನ್ನಸಂತರ್ಪಣೆ ಕೆಲಸ 100ಕ್ಕೂ ಅಧಿಕ ಬಾಣಸಿಗರಿಂದ ಭೋಜನದ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಬೆಲ್ಲದ ಪಾಕದಿಂದ ತಲಾ 60,000 ಕಾಳು ಲಾಡು, ಗೋಧಿ ಹಿಟ್ಟಿನ ಬರ್ಫಿ, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗಿದೆ.

ಹೊರೆಕಾಣಿಕೆ ರೂಪದಲ್ಲಿ ಬಂದ ಅಕ್ಕಿ, ಸೌತೆಕಾಯಿ, ತೆಂಗಿನ ಕಾಯಿ, ಎಣ್ಣೆ, ಬೆಲ್ಲ ಸೇರಿದಂತೆ ವಿವಿಧ ವಸ್ತುಗಳನ್ನು ಸಂತರ್ಪಣೆಗೆ ಬಳಸಿಕೊಳ್ಳಲಾಗುತ್ತದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಊಟದ ವೇಳೆ ಪ್ಲಾಸ್ಟಿಕ್‌ ಲೋಟದ ಜತೆಗೆ ಕಾಗದದ ಲೋಟಗಳನ್ನೂ ನಿಷೇಧಿಸಲಾಗಿದೆ. ಅದರ ಬದಲಿಗೆ ಸುಮಾರು 3,000 ಸ್ಟೀಲ್‌ ಲೋಟಗಳನ್ನು ಖರೀದಿಸಿದ್ದು, ಮುಂದಿನ ಎರಡು ವರ್ಷಗಳ ಕಾಲವೂ ಇವುಗಳನ್ನು ಬಳಸಲಾಗುತ್ತದೆ.

ಉಡುಪಿ-ಶಾಲೆಗಳಿಗೆ ರಜೆ
ಪರ್ಯಾಯದ ಅಂಗವಾಗಿ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಉಡುಪಿ ತಾಲೂಕು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಡುಪಿ ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

ಜ.17ರಂದು ಮಧ್ಯಾಹ್ನದ ಭೋಜನದ ವ್ಯವಸ್ಥೆ ನಿರ್ಗಮನ ಪರ್ಯಾಯ ಪಲಿಮಾರು ಮಠದಿಂದ ನಡೆಯಲಿದೆ. ರಾತ್ರಿ 7ಗಂಟೆಗೆ ನಿರ್ಗಮನ ಪರ್ಯಾಯ ಶ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ ರಥಬೀದಿಯಲ್ಲಿ ನಡೆಯಲಿದ್ದು, ಬಳಿಕ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಇರಲಿದೆ. ಪೇಜಾವರ ಶ್ರೀಗಳ ಪಂಚಮ ಪರ್ಯಾಯದಿಂದ ಪ್ರಾರಂಭಿಸಲಾಗಿದೆ. ಅದರಂತೆ ಸುಮಾರು 40 ಸಾವಿರ ಮಂದಿಗೆ ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ ವ್ಯವಸ್ಥೆ ಇದೆ.

Advertisement

ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯನಿರ್ವಹಣೆ
ಪರ್ಯಾಯದ ಅಡುಗೆ ವ್ಯವಸ್ಥೆ ಈಗಾಗಲೇ ಪ್ರಾರಂಭವಾಗಿದ್ದು, 100ಕ್ಕೂ ಅಧಿಕ ಬಾಣಸಿಗರು ಬೆಳಗ್ಗೆ 7 ರಿಂದ 5.30ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅನುಭವಿ ಬಾಣಸಿಗರು ಇದ್ದಾರೆ.
-ವಿಷ್ಣು ಮೂರ್ತಿ ಭಟ್‌ ಉದ್ಯಾವರ, ಪಾಕಶಾಲೆ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next