Advertisement
ಬ್ರಹ್ಮಕಲಶೋತ್ಸವ ಸಂದರ್ಭ ಸುಮಾರು 6 ತಿಂಗಳುಗಳಿಂದ ಸೇವಾ ದೀಕ್ಷೆಯನ್ನು ತೊಟ್ಟ ಗ್ರಾಮದ ಸಮಸ್ತ ಭಕ್ತ ಬಂಧುಗಳು ಯಜ್ಞ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಪ್ರತಿನಿತ್ಯವೂ ತಮ್ಮ ತಮ್ಮ ಮನೆಗಳಲ್ಲಿ ಸುಬ್ರಹ್ಮಣ್ಯ ಅಷ್ಟೋತ್ತರದ ಪಠಣ ಮಾಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು , ಅದರ ಸಮಾಪನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಬೆಳಗ್ಗೆ ಗಂಟೆ 8ಕ್ಕೆ ಸಾಮೂಹಿಕ ಪ್ರಾರ್ಥನೆ ಬಳಿಕ ಸ್ವಸ್ತಿ ಪುಣ್ಯಾಹ, ಅಗ್ನಿ ಪ್ರತಿಷ್ಠೆ ನಡೆದು ಮಧ್ಯಾಹ್ನ 12 ಘಂಟೆಗೆ ವಸೂರ್ಧಾರಾ ಪೂರ್ಣಾಹುತಿ ಬಳಿಕ ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ದ.ಕ. ಜಿಲ್ಲೆಯಲ್ಲೇ ಅಪೂರ್ವವಾದ ಸುಳ್ಯ ತಾಲೂಕಿ ನಲ್ಲೇ ವಿಶೇಷವಾದ ಶ್ರೀ ಮಹಾಗಣಪತಿ ಸ್ಕಂದಹವನ ಸಹಿತ ಸುಬ್ರಹ್ಮಣ್ಯ ಅಷ್ಟೋತ್ತರ ಮಹಾಯಾಗವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ವಿಶೇಷವಾಗಿತ್ತು. ಎಲ್ಲರಿಗೂ ಅವರವರ ಸಂಕಲ್ಪಾನುಸಾರ ಪ್ರಾರ್ಥಿಸಿ ಅಕ್ಷತೆಯನ್ನು ಹವನಕ್ಕೆ ಅರ್ಪಣೆ ಮಾಡಲು ಅವಕಾಶ ಮಾಡಲಾಗಿತ್ತು. ಸಮಿತಿಯ ವತಿಯಿಂದ ಶರತ್ ಅಡ್ಕಾರು ದಂಪತಿ ಕತೃìಗಳಾಗಿ ಸಹಕರಿಸಿದರು. ಅನಂತರ ಮೂರು ಸಾವಿ ರಕ್ಕೂ ಮಿಕ್ಕಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ವ್ಯವಸ್ಥಾಪನ ಸಮಿತಿ, ಜೀಣೊìàದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು ಹಾಗೂ ಊರ ಬೈಲುವಾರು ಸಮಿತಿಯ ಸಮಸ್ತ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.