Advertisement
ಮಾ. 16ರಂದು ಬೆಳಗ್ಗೆ 6.30ರಿಂದ ಗಣಪತಿ ಹೋಮ, 7.50ರ ಮೀನ ಲಗ್ನದ ಶುಭ ಮೂಹೂರ್ತದಲ್ಲಿ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಲ್ಲಿ ಶ್ರೀ ಭಗವತೀ ಮಾತೆಯ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
Related Articles
Advertisement
ರಾತ್ರಿ ಗಂಟೆ 8 ರಿಂದ ಶ್ರೀ ವಯನಾಡು ಕುಲವನ್ ಯುವಕ ಸಂಘ,ಮಾವಿನ ಕೊಪ್ಪಳ, ತರುಣ ಕಲಾವೃಂದ,ವೀರನಗರ, ಅಡ್ಕ ಶಿರಿಯ, ಶ್ರೀ ಭಗವತೀ ಯುವಜನ ಸೇವಾ ಸಂಘ ಅಡ್ಕ, ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ, ಅಡ್ಕ ತಾಲೀಮು ಪ್ರದರ್ಶನದೊಂದಿಗೆ,ಶಕ್ತಿ ನ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಬಂದ್ಯೋಡು ಇವರಿಂದ ಉಲ್ಪೆ ಸಮರ್ಪಣೆ ನಡೆಯಲಿದೆ.
ಮಾ. 22ರಂದು ಬೆಳಗ್ಗೆ ಗಂಟೆ 5ಕ್ಕೆ ಪುಳ್ಳಿಕರಿಂಗಾಳಿ ದೈವ, ಆಯಿರತ್ತಿರಿ ದೈವೋತ್ಸವ, ಪ್ರಸಾದ ವಿತರಣೆ,ಬೆಳಗ್ಗೆ ಗಂಟೆ 10.30ಕ್ಕೆ ಕಾಳಪುಲಿಯನ್ ದೈವ, 11.30ಕ್ಕೆ ಕರಿಂದಿರ ನಾಯರ್ ದೈವ, 12.30ಕ್ಕೆ ವೇಟಕ್ಕುರು ಮಗನ್ ದೈವದ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಲಿದೆ.
ಸಂಜೆ ಗಂಟೆ 6ಕ್ಕೆ ಪುಲಿಕಂಡನ್ ದೈವ, ವಿಷ್ಣುಮೂರ್ತಿ ದೈವ ಶಿರಿಯ ಶ್ರೀ ಶಂಕರನಾರಾಯಣ ದೇವರ ಭೇಟಿಗೆ ಹೊರಡುವುದು.ರಾತ್ರಿ ಅನ್ನದಾನ 10ಕ್ಕೆ ಪುಲ್ಲೂರಾಳಿ ದೈವ, ರಾತ್ರಿ ಗಂಟೆ 9ರಿಂದ ಶ್ರೀ ಗೋಪಾಕೃಷ್ಣ ಯುವಕ ಕಲಾವೃಂದ ಬಂದ್ಯೋಡು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು.
ಮಾ. 23ರಂದು ಮಧ್ಯಾಹ್ನ ಅನ್ನದಾನ,ಸಂಜೆ 4ರಿಂದ ಪುಲಿಕಂಡನ್, ಕರಿಂದಿರ ನಾಯರ್, ವೇಟಕ್ಕುರು ಮಗನ್, ಕಾಳಪುಲಿಯನ್ ದೈವಗಳ ವೆಳ್ಳಾಟಂ, ಸಂಜೆ ಗಂಟೆ 6ಕ್ಕೆ ಕಡೇ ಕಳಿಯಾಟ ಆರಂಭ, ರಾತ್ರಿ 8.30ರಿಂದ ಅನ್ನದಾನ, 9.30ಕ್ಕೆ ಹೂವಿನ ಪೂಜೆ,ರಾತ್ರಿ ಗಂಟೆ 10ರಿಂದ ಕೆಂಡ ಸೇವೆ, ಬಲಿ, ಬಿಂಬ ದರ್ಶನ ಅನಂತರ ಪುಲ್ಲೂರ್ ಕಣ್ಣನ್ ದೈವದ ವೆಳ್ಳಾಟಂ ಪುಲ್ಲೂರಾಳಿ ದೈವದ ತೋಟ್ಟಂ,ರಾತ್ರಿ ಗಂಟೆ 1ಕ್ಕೆ ಪುಲಿಕಂಡನ್ ದೈವ,2.30ಕ್ಕೆ ಕರಿಂದಿರ, ರಾತ್ರಿ 8ರಿಂದ ಹೇರೂರು ಯುವಕರಿಂದ, ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಅಡ್ಕ ಇವರಿಂದ ಉಲ್ಪೆ ಸಮರ್ಪಣೆ ನಡೆಯಲಿದೆ.
ಮಾ 24ರಂದು ಮುಂಜಾನೆ ಗಂಟೆ 4ಕ್ಕೆ ಗುಳಿಗ ಕೋಲ, 6ಕ್ಕೆ ಕಾಳಪುಲಿಯನ್ ದೈವ, 9ಕ್ಕೆ ಪುಲ್ಲೂರಾಳಿ ದೈವ, ಮಧ್ಯಾಹ್ನ 1ಕ್ಕೆ ಶ್ರೀ ವಿಷ್ಣುಮೂರ್ತಿ ಮತ್ತು ಹೂಮುಡಿ ಉತ್ಸವ, ಅನ್ನದಾನ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಭಂಡಾರ ಅವರೋಹಣದ ಬಳಿಕ ರಾತ್ರಿ ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.