Advertisement

ಹೊಂದಾಣಿಕೆ-ಸಮನ್ವಯ ಜೀವನ ಸಾಗಿಸಿ: ಬಸವಪ್ರಭು ಶ್ರೀ

11:11 AM Jun 13, 2018 | |

ದಾವಣಗೆರೆ: ಮಾನವರೆಲ್ಲಾ ಒಂದೇ ಎಂಬ ಭಾವನೆ, ಪರಸ್ಪರ ಹೊಂದಾಣಿಕೆ, ಸಮನ್ವಯತೆ ಜೀವನ ಸಾಗಿಸಬೇಕು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

Advertisement

ರಂಜಾನ್‌ ಹಬ್ಬದ ಪ್ರಯುಕ್ತ ಅಲ್‌ ಮೋಮಿನಿನ್‌ ಬೈತುಲ್‌ ಮಾಲ್‌ ಕಮಿಟಿಯವರು ಮಂಗಳವಾರ   ಎಸ್‌.ಎಸ್‌.
ಮಲ್ಲಿಕಾರ್ಜುನ್‌ ನಗರದ ಬೀಡಿ ಲೇಔಟ್‌ನಲ್ಲಿ ಹಮ್ಮಿಕೊಂಡಿದ್ದ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಾನವರೆಲ್ಲರೂ ಒಂದೇ. ಜಾತಿ-ಧರ್ಮಗಳು ಅವರವರ ಆಚರಣೆಗಳ ಮೇಲೆ ಅವಲಂಬಿತವಾಗಿವೆ ಎಂದರು.

ಯಾರು ಕಷ್ಟದಲ್ಲಿ ಇರುತ್ತಾರೋ ಅಂತವರಿಗೆ ಸಹಾಯ ಮಾಡುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು. ದೇವರ ಧ್ಯಾನ ನಂತರ ದಾನ, ಧರ್ಮ ಮಾಡುವ ರಂಜಾನ್‌ ತಿಂಗಳು ಪವಿತ್ರವಾದದು. ತಿಂಗಳು ಉಪವಾಸ ಮಾಡುವುದರಿಂದ ಆರೋಗ್ಯವು ಸುಧಾರಿಸುವುದರ ಜೊತೆಗೆ ಹಸಿವಿನ ಅರಿವು ಮೂಡುತ್ತದೆ. ಹಾಗಾಗಿ ರಂಜಾನ್‌ ಮಾಸ ಇಸ್ಲಾಂ ಧರ್ಮದಲ್ಲಿ ಶ್ರೇಷ್ಠವಾದ ಆಚರಣೆ ತಿಂಗಳು ಎಂದು ತಿಳಿಸಿದರು.

ಚಿತ್ರದುರ್ಗ ಬಂಜಾರ ಪೀಠದ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ಪವಿತ್ರ ರಂಜಾನ್‌ ತಿಂಗಳಲ್ಲಿ ರೋಜಾ ಮಾಡುವುದರಿಂದ ಮುಖದಲ್ಲಿ ಹೊಸ ಚೈತನ್ಯ ಮೂಡುತ್ತದೆ. ಅಸಹಾಯಕರಿಗೆ ಸಹಾಯ ಮಾಡುವುದರಿಂದ ಬದುಕು ಸಾರ್ಥಕವಾಗುತ್ತದೆ. ಎಷ್ಟೋ ಬಡವರಿಗೆ ಹಬ್ಬದಲ್ಲಿ ಬಟ್ಟೆಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. 
ಸಂಘ-ಸಂಸ್ಥೆಗಳು ಈ ರೀತಿ ಬಟ್ಟೆಗಳನ್ನು ಹಂಚಿದರೆ ಬಡವರು ಸಹ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ.
ಯಾರು ಬೇರೆಯವರ ಕಷ್ಟಗಳಲ್ಲಿ ಭಾಗಿಯಾಗುತ್ತಾರೆ. ಅಂಥವರು  ಸತ್ಪ್ರಜೆಗಳಾಗಿ ಬದುಕನ್ನು ಸಾಗಿಸುತ್ತಾರೆ ಎಂದು ತಿಳಿಸಿದರು.

ಬೈತುಲ್‌ ಮಾಲ್‌ ಕಮಿಟಿ ಅಧ್ಯಕ್ಷ ಕೆ.ಸಿ. ಮಹ್ಮದ್‌ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸುಖ-ಸಂತೋಷದಿಂದ ರಂಜಾನ್‌ ಹಬ್ಬವನ್ನು ಆಚರಿಸಲು ಜಕಾತನ್ನು ಪ್ರತಿಯೊಬ್ಬರೂ ನೀಡುವಂತಾಗಲಿ ಎಂದು ಆಶಿಸಿದರು. ಕಮಿಟಿ ಪ್ರಧಾನ ಕಾರ್ಯದರ್ಶಿ ನಜೀರ್‌ ಅಹ್ಮದ್‌ ಮಾತನಾಡಿ, ಬೈತ್‌ ಎಂದರೆ ಮನೆ ಎಂದರ್ಥ. ಮಾಲ್‌ ಎಂದರೆ ಹಣ-ಒಡವೆ-ಐಶ್ವರ್ಯ ಎಂಬುದಾಗಿದೆ. ಪ್ರಪಂಚದಲ್ಲಿ ಮೊಟ್ಟ ಮೊದಲಿಗೆ ಮಹ್ಮದ್‌ ಪೈಗಂಬರ್‌ರವರು ಈ ಆಚರಣೆ ಜಾರಿಗೆ
ತಂದರು.  ಇಸ್ಲಾಂ ಧರ್ಮದಲ್ಲಿ ಅಳವಡಿಸಿ ಪ್ರತಿಯೊಬ್ಬ ಶ್ರೀಮಂತರು ಜಕಾತನ್ನು ತೆಗೆದು ಬಡವರಿಗೆ ನೀಡುವುದು ಕಡ್ಡಾಯಗೊಳಿಸಿದ್ದಾರೆ.

Advertisement

ಇಸ್ಲಾಂ ಧರ್ಮದ 5 ತತ್ವಗಳಲ್ಲಿ ಇದನ್ನು ಮುಖ್ಯವಾಗಿ ಪಾಲಿಸಲು ತಿಳಿಸಿದ್ದಾರೆ. ಜಕಾತನ್ನು ನೀಡಿದರೆ ಸಮಾಜದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದರು.

ಕಾಂಗ್ರೆಸ್‌ ಮುಖಂಡ ಸೈಯದ್‌ ಸೈಪುಲ್ಲಾ, ನಗರಪಾಲಿಕೆ ಸದಸ್ಯ ಫಾರೂಕ್‌ ಅಬ್ದುಲ್‌, ನಗರಸಭಾ ಮಾಜಿ ಸದಸ್ಯ ಎ. ಅಲ್ಲಾಭಕ್ಷಿ, ಯುವಮುಖಂಡ ಕೆ. ಹಸನ್‌, ಹಾಜಿ ಮೂಸಾಸಾಬ್‌, ಶಫಿವುಲ್ಲಾ, ಶರೀಫ್‌, ಮಜ್ಜೀದ್‌, ಆಸಿಫ್‌, ಸಾಧಿಕ್‌, ಹಜರತ್‌ಅಲಿ, ಮುಕ್ತಾರ್‌ ಉಜ್ಜಿನಿ, ರಫಿಕ್‌, ಅಫೂಜ್‌, ಪತ್ರಕರ್ತ ಕೆ.ಎಂ. ಸಿದ್ಧಲಿಂಗಸ್ವಾಮಿ ಇತರರು ಇದ್ದರು. ಪತ್ರಕರ್ತ ಎ. ಫಕ್ರುದ್ದೀನ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next