Advertisement

ಇಂದಿರಾನಗರದಲ್ಲಿ ನೀರಿನ ಬವಣೆಗೆ ಗ್ರಾಮಸ್ಥರಲ್ಲೇ ಹೊಂದಾಣಿಕೆ

11:23 PM May 04, 2019 | Team Udayavani |

ಹಳೆಯಂಗಡಿ: ಮಂಗಳೂರು ತಾಲೂಕಿನ ವಿಶೇಷ ಹೆಗ್ಗ ಳಿಕೆ ಪಾತ್ರ ವಾದ ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿ ಯಲ್ಲಿ ಕುಡಿಯುವ ನೀರಿನ ನಿರ್ವಹಣೆ ಸವಾಲಾಗಿ ಪರಿಣ ಮಿಸಿದೆ. ಪಂಚಾಯತ್‌ ವ್ಯಾಪ್ತಿಯ ಇಂದಿರಾನಗರವೂ ಜನವಸತಿ ಪ್ರದೇಶವಾಗಿರುವ ಅತಿ ಹೆಚ್ಚು ಸಂಪರ್ಕವನ್ನು ಹೊಂದಿರುವ ಪ್ರದೇಶ ವಾಗಿದ್ದು ವಿಶಾಲವಾದ ನಿರ್ವಹಣೆಯಿಂದ ಮೇಲ್ನೋಟಕ್ಕೆ ಗ್ರಾಮಸ್ಥರೇ ಹೊಂದಾಣಿಕೆ
ಮಾಡಿಕೊಂಡಿದ್ದಾರೆ.

Advertisement

400ಕ್ಕೂ ಹೆಚ್ಚು ಸಂಪರ್ಕ
ಇಂದಿರಾನಗರದಲ್ಲಿ 400ಕ್ಕೂ ಹೆಚ್ಚು ನೀರಿನ ಸಂಪರ್ಕ ಹೊಂದಿದೆ. ಈ ಎಲ್ಲ ಸಂಪರ್ಕದ ನೀರಿನ ಮೂಲಕ್ಕೆ ಕೊಳವೆ ಬಾವಿಯೇ ಆಧಾರ. ನಾಲ್ಕು ಕೊಳವೆ ಬಾವಿಗಳಿದ್ದು, ಇದರಲ್ಲಿ ಅತ್ಯಂತ ಹೆಚ್ಚು ನೀರಿನ ಮೂಲವಿದ್ದ ಕೊಳವೆಬಾವಿಯೊಂದು ಕೆಟ್ಟು ನಿಂತು ತಿಂಗಳಾದರೂ ದುರಸ್ತಿ ಕಂಡಿಲ್ಲ. ಉಳಿದಂತೆ ಮೂರು ಕೊಳವೆ ಬಾವಿಗಳಿಂದ ಸಂಪೂರ್ಣ ಇಂದಿರಾ ನಗರ ಹಾಗೂ ಬೊಳ್ಳೂರಿನ ಕೆಲವು ಪ್ರದೇಶಗಳ ಜನರು ಇದೇ ನೀರನ್ನು ಆಶ್ರಯಿಸಿರುತ್ತಾರೆ. ಎರಡು ದಿನಕ್ಕೊಮ್ಮೆ ಯಾದರೂ ನೀರು ಬರುತ್ತಿರುವುದರಿಂದ ಯಾವುದೇ ರೀತಿಯಲ್ಲಿ ಪ್ರತಿರೋಧವ್ಯಕ್ತವಾಗಿಲ್ಲ.

ಕಿನ್ನಿಗೋಳಿಯ ಬಹುಗ್ರಾಮ ಯೋಜನೆಯ ನೀರು ಸರಬರಾಜಿನಿಂದ ಒಂದಷ್ಟು ಆಸರೆಯಾಗಿದೆ. ಆದರೆ ದೂರದ ಕೊಲ್ಲೂರಿನಿಂದ ಹಳೆಯಂಗಡಿಗೆ ಬರುವಾಗ ನೀರಿನ ಪ್ರಮಾಣ ಅಷ್ಟಕಷ್ಟೇ. ತಕ್ಕಷ್ಟು ಮಟ್ಟಿಗೆ ನೀರಿನ ಪೂರೈಕೆ ಮಾಡುತ್ತಿರುವುದರಿಂದ ಗಂಭೀರ ಸಮಸ್ಯೆ ಈವರೆಗೂ ಕಾಡಿಲ್ಲ.

ನೀರಿನ ಮಟ್ಟ ಕುಸಿದಿರುವುದು ಇಲ್ಲಿನ ಕೊಳವೆ ಬಾವಿಗಳು ಮೊದಲೆಲ್ಲಾ 150 ರಿಂದ 200 ಅಡಿಯಲ್ಲಿಯೇ ನೀರು ಸಿಗುತ್ತಿದ್ದರಿಂದ ವೇಗವಾಗಿ ಟ್ಯಾಂಕ್‌ಗಳನ್ನು ತುಂಬಿಸುತ್ತಿತ್ತು ಆದರೆ ಈಗ ನೀರಿನ ಮಟ್ಟ ಕುಸಿದಿರುವುದರಿಂದ 350ರಿಂದ400 ಅಡಿ ಆಳದಿಂದ ನೀರು ಟ್ಯಾಂಕ್‌ಗೆ ರವಾನೆಯಾಗುತ್ತಿದೆ.

ಇಂದಿರಾನಗರದ ಎತ್ತರದ ಪ್ರದೇಶದಲ್ಲಿ ಎರಡು ಒವರ್‌ಹೆಡ್‌ ಟ್ಯಾಂಕ್‌, ನೀರಿನ ಟ್ಯಾಂಕ್‌ಗಳಿದ್ದರೇ, ಎಂಸಿಎಫ್‌ ಕಾಲನಿಯಲ್ಲಿ ನೀರಿನ ಟ್ಯಾಂಕ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

ಗ್ರಾಮಸ್ಥರ ಮಾತುಗಳು
ಇಂದಿರಾನಗರದಲ್ಲಿ ಕೆಲವು ಎತ್ತರದ ಪ್ರದೇಶಕ್ಕೆ ಇಂದಿಗೂ ಸರಿಯಾಗಿ ನೀರು ಬರುತ್ತಿಲ್ಲ. ಕೆಲವು ಕಡೆ ಹಳೇ ಕಾಲದ ಪೈಪ್‌ ಲೈನ್‌ ಬದಲಿಸದೆ ಹಾಗೇ ಇಟ್ಟಿರುವುದರಿಂದ ಸಮಸ್ಯೆಯಾಗಿದೆ. ಇರುವ ನೀರನ್ನು ನೀಡುವಲ್ಲಿ ಯೋಜನೆಯ ನಿರ್ವಹಣೆಯಲ್ಲಿ ಯಾವುದೇ ನೇರ ಆರೋಪ ಮಾಡುವುದಿಲ್ಲ, ಗ್ರಾಹಕರಾದ ನೆಲೆಯಲ್ಲಿ ನಾವು ಸಹ ಸಮಿತಿಯೊಂದಿಗೆ ಹೊಂದಾಣಿಕೆಯಲ್ಲಿಯೇ ಇದ್ದೇವೆ.

 ಶಾಶ್ವತ ಯೋಜನೆಗೆ ಪ್ರಯತ್ನ
ಇಂದಿರಾನಗರದಲ್ಲಿ 4 ಬೋರ್‌ಗಳಲ್ಲಿ ಒಂದು ಕೆಟ್ಟಿದ್ದು, ಅದಕ್ಕೆ ಹೊಸ ಪಂಪ್‌ ಅಳವಡಿಸಿಬೇಕಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಪಂಚಾಯತ್‌ಗೆ ವರದಿ ನೀಡಲಾಗಿದೆ. ದಿನ ಕಳೆ ದಂತೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು ಶಾಶ್ವತ ಪರಿಹಾರ ಕ್ಕಾಗಿ ಬಸ್‌ನಿಲ್ದಾಣದ ಬಳಿ ನೀರು ಶೇಖರಣೆಯ ಬೃಹತ್‌ ಸಂಪ್‌ ನಿರ್ಮಾಣದ ಯೋಚನೆಯಿದೆ.
- ಎಚ್‌. ವಸಂತ್‌ ಬೆರ್ನಾರ್ಡ್‌
ಅಧ್ಯಕ್ಷರು, ನೀರು ಸರಬರಾಜು ಸಮಿತಿ, ಹಳೆಯಂಗಡಿ ಗ್ರಾ.ಪಂ.

ಟಾಸ್ಕ್ಫೋರ್ಸ್‌ನ ಸಹಕಾರ ಸಿಗಲಿ
ಇಂದಿರಾನಗರದಲ್ಲಿ ಬೇಸಗೆ ಯಾದರೂ ನೀರು ಸರಬರಾಜಿನಲ್ಲಿ ಇದುವರೆಗೂ ತೀವ್ರ ಸಮಸ್ಯೆ ಕಂಡುಬಂದಿಲ್ಲ. ಟಾಸ್ಕ್ಫೋರ್ಸ್‌ ಸಂಸ್ಥೆಯಿಂದ ನೀರಿನ ಕೊರತೆ, ಕೆಟ್ಟುನಿಂತ ಬೋರ್‌ ಹಾಗೂ ಇತರ ನೀರಿನ ಸಮಸ್ಯೆಗಳಿಗೆ ಯೋಜನೆಯಲ್ಲಿ ಶಾಸಕರ ಮುಖಾಂತರ ಅನುದಾನ ನೀಡುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಅದಾವುದೂ ಲಭಿಸುತ್ತಿಲ್ಲ.
- ಎಂ.ಎ. ಖಾದರ್‌ ಸದಸ್ಯರು, ಹಳೆಯಂಗಡಿ ಗ್ರಾ.ಪಂ.

 ಬಹುಗ್ರಾಮದಿಂದ ನಿತ್ಯವು ಸಿಗಲಿ
ಬಹುಗ್ರಾಮ ಕುಡಿಯುವ ನೀರಿನಯೋಜನೆಯಲ್ಲಿ ಈ ಪ್ರದೇಶಕ್ಕೆ ನೀರು ಬರಬೇಕಿದ್ದರೆ ಕಿನ್ನಿಗೋಳಿ, ಎಸ್‌. ಕೋಡಿ, ಕಿಲ್ಪಾಡಿ, ಕೆಮ್ರಾಲ್‌ ಈ ಗ್ರಾಮಗಳನ್ನು ದಾಟಿ ಹಳೆಯಂಗಡಿಗೆ ಬರುವ ಷ್ಟರಲ್ಲಿ ನೀರಿನ ಮಟ್ಟ ಕಡಿಮೆಯಾಗಿರುತ್ತದೆ. ಯಾವುದೇ ಭಾಗಕ್ಕೆ ತೊಂದರೆ ಆಗದ ಹಾಗೆ ಬಹಳ ಎಚ್ಚರಿಕೆಯಿಂದ ನೀರು ಸರಬರಾಜು ಮಾಡಬೇಕಿದೆ.
 - ದಿನೇಶ್‌ ನಾನಿಲ್‌,ಪಂಪ್‌ ಆಪರೇಟರ್‌,ಇಂದಿರಾನಗರ

Advertisement

Udayavani is now on Telegram. Click here to join our channel and stay updated with the latest news.

Next