Advertisement
ಇದು ಪುನರ್ವಸತಿ ಕೇಂದ್ರದ ಆದಿವಾಸಿಗಳ ಅಳಲು. ಕಳೆದ ಸುಮಾರು 4ವರ್ಷಗಳ ಹಿಂದೆ ಎಚ್.ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣತಾಲೂಕುಗಳ ಅರಣ್ಯದಲ್ಲಿದ್ದ ಆದಿವಾಸಿಗರಿಗೆಪುನರ್ವಸತಿ ಕಲ್ಪಿಸುವ ಭರವಸೆ ನೀಡಿ, ಪ್ರತಿ ಕುಟುಂಬಕ್ಕೆ ತಲಾ 15ಲಕ್ಷ ರೂ. ಅಂದಾಜು ವೆಚ್ಚದಫ್ಯಾಕೇಜ್ ಘೋಷಣೆ ಮಾಡಿ 200ಕ್ಕೂ ಅಧಿಕಆದಿವಾಸಿ ಕುಟುಂಬಗಳನ್ನು ಎಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆಸ್ಥಳಾಂತರಿಸಲಾಗಿದೆ.
Related Articles
Advertisement
ಪಾಳು ಬಿದ್ದಿರುವ ಮನೆಗಳು:
ಪುನರ್ವಸತಿ ಕೇಂದ್ರದಲ್ಲಿನ ಬಹುತೇಕ ಮನೆಗಳು ಪಾಳುಬಿದ್ದಿವೆ. ಪಾಳುಬಿದ್ದ ಮನೆಗಳು ಆದಿವಾಸಿ ಮಕ್ಕಳ ಆಟದ ತಾಣದ ಜತೆಗೆ ಅನೈತಿಕ ತಾಣವಾಗುತ್ತಿದೆ. ಹಲವು ಮನೆಗಳಲ್ಲಂತೂ ಹೇಸಿಗೆ ಮಾಡಿ ಮನೆಯೊಳಗೆ ಪ್ರವೇಶಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಈ ಮನೆಗಳು ತೀರಾ ಕಿರಿದಾಗಿದ್ದು ಒಂದೊಂದುಮನೆಯಲ್ಲಿ ಕಿರಿದಾದ 1 ಬೆಡ್‌ರೂಂ, 1 ಹಾಲ್, ಅಡುಗೆ ಮನೆ,ಸ್ನಾನದ ಮನೆ ಮತ್ತು ಶೌಚಾಲಯ ಒಳಗೊಂಡಿದೆ. ಆದರೆ,ಅವೈಜ್ಞಾನಿಕವಾಗಿ ತೀರ ಕಿರಿದಾದ ಮನೆಗಳಲ್ಲಿ ಸುಮಾರು 5-6ಮಂದಿವಾಸಮಾಡಲು ಯೋಗ್ಯವಾಗಿದೆ. ಹೆಚ್ಚಿನ ಜನರಿದ್ದರೆ ಮನೆ ಹೊರ ಮಲಗಿ ದಿನ ಕಳೆಯಬೇಕಾದ ಸ್ಥಿತಿ ಇದೆ.
ಜಮೀನು ಸಮತಟ್ಟು ಮಾಡಿ ಉಳುಮೆಮಾಡಿಲ್ಲ. ಮನೆ ಮತ್ತು ಜಮೀನಿಗೆ ಹಕ್ಕುಪತ್ರ ನೀಡಿಲ್ಲ.ನಮ್ಮ ಪಾಡು ನಾಯಿಗಿಂತ ಕೀಳಾಗಿದೆ. ಗುಳೆ ಹೋಗಿ ಕೂಲಿ ಮಾಡಿ ತಿನ್ನುವ ನಾವು ಮೊದಲಿದ್ದ ಜಾಗದಲ್ಲೇ ಇರಬಹುದಿತ್ತು.-ನಿಂಗಮ್ಮ, ಪುನರ್ವಸತಿ ಮಹಿಳೆ
ಇಲ್ಲಿ ನಿರ್ಮಿಸಿರುವ ಮನೆಗಳು ಆದಿವಾಸಿಗರ ಸಂಪ್ರದಾಯ ದಂತೆ ನಿರ್ಮಾಣವಾಗಿಲ್ಲ. 2006ರ ಅರಣ್ಯ ಹಕ್ಕು ಕಾಯ್ದೆಯಂತೆ ಆದಿವಾಸಿಗರನ್ನು ಅರಣ್ಯದಲ್ಲೇ ಅಭಿವೃದ್ಧಿಮಾಡಬೇಕೆಂಬ ನಿಯಮವಿದ್ದರೂಬಲವಂತವಾಗಿ ಸ್ಥಳಾಂತರಿಸಿ ಸೌಲಭ್ಯಕಲ್ಪಿಸದೇ ಇರುವುದು ವಿಪರ್ಯಾಸ.-ನಂಜುಂಡಯ್ಯ, ನಿಸರ್ಗ ಸಂಸ್ಥೆ ನಿರ್ದೇಶಕ
-ಎಚ್.ಬಿ.ಬಸವರಾಜು