Advertisement

ಕಾಸ್‌ಗಂಜ್‌ ಹಿಂಸೆ ಕಾರಣಕರ್ತರಿಗೆ ಶಿಕ್ಷೆ: ಆದಿತ್ಯನಾಥ್‌ ಭರವಸೆ

06:19 PM Jan 30, 2018 | udayavani editorial |

ಲಕ್ನೋ : ಕಾಸ್‌ಗಂಜ್‌ ಹಿಂಸೆಯ ಬಗ್ಗೆ ಕೊನೆಗೂ ಮೌನ ಮುರಿದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಹಿಂಸೆಗೆ ಕಾರಣರಾದವರನ್ನು ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

Advertisement

ಇದೇ ವೇಳೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು, “ಹಿಂಸೆಯಲ್ಲಿ ಮಡಿದ ವ್ಯಕ್ತಿ ಒಂದೊಮ್ಮೆ ಅಲ್ಪ ಸಂಖ್ಯಾಕ ಸಮುದಾಯಕ್ಕೆ ಸೇರಿದವನಾಗಿದ್ದಿದ್ದರೆ ಮಾಧ್ಯಮಗಳು ಬೇರೆಯೇ ರೀತಿ ವರ್ತಿಸುತ್ತಿದ್ದವು’ ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ವಿವಾದ ಸೃಷ್ಟಿಸಿದೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಇನ್ನೋರ್ವ ಬಿಜೆಪಿ ನಾಯಕ ವಿನಯ್‌ ಕಟಿಯಾರ್‌ ಅವರು “ಹಿಂಸೆಯಲ್ಲಿ ಶಾಮೀಲಾಗಿರುವವರಲ್ಲಿ ಕೆಲವರು ಪಾಕಿಸ್ಥಾನವನ್ನು ಬೆಂಬಲಿಸುವವರಾಗಿದ್ದು  ತ್ರಿವರ್ಣ ಧ್ವಜಕ್ಕೆ ಸೆಡ್ಡು ಹೊಡೆಯಲು ಅವರ ಯಾವ ಮಟ್ಟಕ್ಕೂ ಇಳಿಯುವವರಾಗಿದ್ದಾರೆ’ ಎಂದು ಹೇಳಿರುವುದು ಕೂಡ ವಿವಾದಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next