Advertisement

ISRO ಆದಿತ್ಯನ ಪ್ರಯಾಣಕ್ಕೆ ಸಮಯ ನಿಗದಿ: ಏನಿದು ಯೋಜನೆ?

10:32 PM Aug 28, 2023 | Team Udayavani |

ನವದೆಹಲಿ/ಬೆಂಗಳೂರು: ಚಂದ್ರನ ದಕ್ಷಿಣ ಭಾಗಕ್ಕೆ ಯಶಸ್ವಿಯಾಗಿ ಇಳಿದು ಇಸ್ರೋದ ರೋವರ್‌ ಅಧ್ಯಯನ ನಡೆಸುತ್ತಿದೆ. ಅದರ ನಡುವೆಯೇ ಈಗಾಗಲೇ ಘೋಷಣೆ ಆಗಿರುವ ಸೌರ ಮಂಡಲದ ಹೊರಪದರದ ಅಧ್ಯಯನ ನೌಕೆ ಆದಿತ್ಯ ಎಲ್‌1ರ ಉಡಾವಣೆ ಸಮಯ ಘೋಷಣೆಯಾಗಿದೆ. ಸೆ.2ರಂದು ಬೆಳಗ್ಗೆ 11.50ರಂದು ನಭಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಇಸ್ರೋ ಸೋಮವಾರ ಟ್ವೀಟ್‌ ಮಾಡಿದೆ.

Advertisement

ಏನಿದು ಯೋಜನೆ?
– ಸೌರ ಮಂಡಲದ ಅತ್ಯಂತ ಹೊರಪದರದಲ್ಲಿರುವ ಜ್ವಾಲೆ, ಸೂರ್ಯ ಮತ್ತು ಭೂಮಿಯ ನಡುವಿನ ಕೇಂದ್ರದ ನಡುವಿನ ಪ್ರದೇಶದ ಗಾಳಿಯ ಅಧ್ಯಯನ (ಎಲ್‌1 ಪಾಯಿಂಟ್‌)
– ಇಸ್ರೋ ವತಿಯಿಂದ ಕೈಗೊಳ್ಳಲಾಗುವ ಮೊದಲ ಸೂರ್ಯನ ಅಧ್ಯಯನ.
– ಉಡಾವಣೆಗೊಂಡ ಆದಿತ್ಯ ಎಲ್‌1 ಪಾಯಿಂಟ್‌ನಲ್ಲಿ ಸಂಚಾರ.

ಆದಿತ್ಯ ಎಲ್‌1 ಯೋಜನೆ ವಿಶೇಷತೆಗಳು
– ಒಟ್ಟು ಏಳು ಪೇಲೋಡ್‌ಗಳನ್ನು ಹೊಂದಿದೆ. ಈ ಪೈಕಿ ನಾಲ್ಕು ನೇರವಾಗಿ ಸೂರ್ಯನ, ಉಳಿದ ಮೂರು ಲ್ಯಾಗ್ರೇಜ್‌ ಪಾಯಿಂಟ್‌ನ ಅಧ್ಯಯನಕ್ಕೆ
– ಸೂರ್ಯನ ಕೊರೊನಾ ವ್ಯಾಪ್ತಿಯಲ್ಲಿ ಭಾರಿ ತಾಪದ ಕಾರಣಗಳ ಅಧ್ಯಯನ
– ಭಾರೀ ಪ್ರಮಾಣದಲ್ಲಿ ಹೊರ ಸೂಸುತ್ತಿರುವ ಕಾಂತೀಯ ಅಂಶ (ಸಿಎಂಇ)ಗಳ ಪರಾಮರ್ಶೆ
– ಯಾವುದೇ ತಡೆ ಇಲ್ಲದೆ ಸೂರ್ಯನತ್ತ ನೋಡಿ, ಅಲ್ಲಿನ ಚಟುವಟಿಕೆಗಳ ಮೇಲೆ ಗಮನ ಸಾಧ್ಯ.

ಲ್ಯಾಗ್ರೇಜ್‌ ಪಾಯಿಂಟ್‌ ಎಂದರೇನು?
ಭೂಮಿ ಮತ್ತು ಸೂರ್ಯನ ನಡುವಿನ ಪ್ರದೇಶ. ಅಲ್ಲಿ ವಸ್ತುಗಳ ಆಕರ್ಷಣೆ ಮತ್ತು ವಿಕರ್ಷಣೆಯ ಪ್ರಮಾಣ ಸಮಾನವಾಗಿರುತ್ತದೆ. ಗಗನನೌಕೆಗಳಿಗೆ ಅಲ್ಲಿ ಕಡಿಮೆ ಪ್ರಮಾಣದ ಇಂಧನವನ್ನು ಉಪಯೋಗಿಸಿ ಸ್ಥಿರವಾಗಿರಲು ಸಾಧ್ಯವಿದೆ ಎಂದು ನಾಸಾ ತಿಳಿಸಿದೆ. ಇಟೆಲಿ-ಫ್ರಾನ್ಸ್‌ ಗಣಿತಶಾಸ್ತ್ರಜ್ಞ ಜೋಸೆಫಿ -ಲೂಯಿಸ್‌ ಲ್ಯಾಗ್ರೇಜ್‌ ಗೌರವಾರ್ಥ ಅಲ್ಲಿಗೆ ಲ್ಯಾಗ್ರೇಜ್‌ ಪಾಯಿಂಟ್‌ ಎಂಬ ಹೆಸರು ಇರಿಸಲಾಗಿದೆ.

ಯಾವಾಗ? ಸೆ.2, ಶನಿವಾರ ಬೆ.11.50
ಎಲ್ಲಿಂದ? ಶ್ರೀಹರಿಕೋಟದ, ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ
ತಲುಪಬೇಕಾಗಿರುವ ದಿನಗಳು? 127
ಎಷ್ಟು ಕಿಮೀ? 15 ಲಕ್ಷ ಕಿಮೀ ಚಂದ್ರನಿಂದ 4 ಪಟ್ಟು ಹೆಚ್ಚು ದೂರ
ಉಡಾವಣಾ ವಾಹಕ- ಪಿಎಸ್‌ಎಲ್‌ವಿ-ಸಿ57 ರಾಕೆಟ್‌
6,000 ಡಿಗ್ರಿ ಸೆಂಟಿಗ್ರೇಡ್‌- ಸೌರಮಂಡಲದ ತಾಪಮಾನ

Advertisement

ನೋಂದಣಿಗೆ ಅವಕಾಶ
ಉಡಾವಣೆಯನ್ನು ಶ್ರೀಹರಿಕೋಟಕ್ಕೆ ತೆರಳಿ ವೀಕ್ಷಿಸುವವರಿಗೆ ಇಸ್ರೋ ಅವಕಾಶ ಮಾಡಿಕೊಡಲಿದೆ. ಅದಕ್ಕಾಗಿ lvg@shar.gov.in ಗೆ ಇ-ಮೇಲ್‌ ಕಳುಹಿಸುವ ಮೂಲಕ ನೋಂದಣಿ.

ಕುಳಿಯಿಂದ ಪ್ರಜ್ಞಾನ್‌ ಪಾರು
ಚಂದ್ರನ ದಕ್ಷಿಣ ಭಾಗದಲ್ಲಿ ಸಂಚರಿಸುತ್ತಿರುವ ಪ್ರಜ್ಞಾನ್‌ ರೋವರ್‌ ಎರಡು ಅಪಾಯಗಳಿಂದ ಪಾರಾಗಿದೆ. ಇಸ್ರೋ ಟ್ವೀಟ್‌ ಮಾಡಿರುವ ಪ್ರಕಾರ ಆ.27ರಂದು 4 ಮೀಟರ್‌ ಆಳದ ಕುಳಿಯಿಂದ ಪಾರಾಗಿದೆ. 3 ಮೀಟರ್‌ ದೂರದಲ್ಲಿ ಇರುವಾಗಲೇ ಅದನ್ನು ಪತ್ತೆ ಹಚ್ಚಿಕೊಂಡ ಪ್ರಜ್ಞಾನ್‌ ಸುಸೂತ್ರವಾಗಿ ಪಥ ಬದಲಿಸಿ ಮುಂದೆ ಸಾಗಿತು. ಜತೆಗೆ ಅದರ ಎರಡು ಫೋಟೋಗಳನ್ನೂ ರವಾನಿಸಿದೆ. ಇದಕ್ಕಿಂತ ಮೊದಲು 100 ಮಿಲಿಮೀಟರ್‌ ಆಳದ ಕುಳಿಯನ್ನು ಯಶಸ್ವಿಯಾಗಿ ದಾಟಿಕೊಂಡು ಮುನ್ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿರಿಯ ವಿಜ್ಞಾನಿ “ಮೊದಲು ಎದುರಾದದ್ದು ಸಣ್ಣ ಪ್ರಮಾಣದ ಕುಳಿ. ಎರಡನೇಯದ್ದು ಕೊಂಚ ದೊಡ್ಡದಾಗಿತ್ತು. ಅದನ್ನು ತಪ್ಪಿಸಿಕೊಂಡು ತೆರಳಲು ಸೂಚಿಸಲಾಯಿತು. ರೋವರ್‌ಗೆ 5 ಮೀಟರ್‌ ಮುಂದೆ ಇರುವ ದಾರಿ ಮಾತ್ರ ಕಾಣಲು ಸಾಮರ್ಥ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next