ಮಣಿಪಾಲ: ಸೂರ್ಯನ ಅಧ್ಯಯನಕ್ಕೆ ದೇಶದಲ್ಲಿ ಪ್ರಥಮವಾಗಿ ರೂಪಿಸಿದ ಆದಿತ್ಯ- ಎಲ್1ನಲ್ಲಿ ಸೌರ ನೇರಳಾತೀತ ಚಿತ್ರಣ ದೂರದರ್ಶಕ ಸೋಲಾರ್ ಆಲ್ಟ್ರಾವಾಯಿಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಎಸುÂಐಟಿ) ಸ್ಯೂಟ್‌ನಲ್ಲಿ ಪ್ರಥಮ ಚಿತ್ರವನ್ನು ತೆಗೆದ ಸಂಭ್ರಮದಲ್ಲಿ ಮಾಹೆ ಮಣಿಪಾಲ್ ಸಹ ಭಾಗಿಯಾಗಿದೆ ಎಂದು ಮಾಹೆ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ ನಿರ್ದೇಶಕ, ಇಸ್ರೋದ ಅಂತರಿಕ್ಷ ವಿಜ್ಞಾನ ಕಾರ್ಯಕ್ರಮ ಕೇಂದ್ರದ ಮಾಜಿ ನಿರ್ದೇಶಕ ಡಾ| ಶ್ರೀಕುಮಾರ್ ತಿಳಿಸಿದ್ದಾರೆ.
ಸೂರ್ಯನ ಅಧ್ಯಯನಕ್ಕೆ ಇಸ್ರೊ ಸೆ. 2ರಂದು ಆದಿತ್ಯ-ಎಲ್1 ಉಡಾವಣೆ ಮಾಡಿತ್ತು. ಪ್ರಸ್ತುತ ಆದಿತ್ಯ ಎಲ್1 ವಿಶಿಷ್ಟ ಸ್ಥಾನ ಲ್ಯಾಂಗ್ರೇಜ್ ಪಾಯಿಂಟ್ -1ರಲ್ಲಿ ನೆಲೆ ಕಂಡಿದ್ದು ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಬಹುತೇಕ ಸಮತಲ ಸ್ಥಿತಿಯಲ್ಲಿದೆ. ಇದು ಕಕ್ಷೆಯಲ್ಲಿ ಕಡಿಮೆ ನಿಭಾವಣ ಹೊಣೆ ಸ್ಥಾನವಾಗಿದ್ದು ಇದು ಸೂರ್ಯನ ಬಹುತೇಕ ನಿರಂತರ ಗೋಚರತೆ ಸುಗಮಗೊಳಿಸುತ್ತದೆ. ಇದರಲ್ಲಿನ ಎಸ್‌ಯುಐಟಿ ಅಭಿವೃದ್ಧಿ ಪಡಿಸುವಲ್ಲಿ ಹಲವು ಸಂಸೆœಗಳು ಕೈ ಜೋಡಿಸಿವೆ. ಇಸ್ರೊ ಜತೆಗೆ, ಪುಣೆ ಖಗೋಳ ವಿಜ್ಞಾನ ಮತ್ತು ಖಗೋಳಭೌತ ವಿಜ್ಞಾನ ವಿ.ವಿ. ಮತ್ತು ಮಾಹೆ ಸೇರಿದೆ ಎಂದರು.
ಎಸ್‌ಯುಐಟಿ ಯೋಜನಾ ವಿಜ್ಞಾನಿ, ಮಾಹೆ ಎಂಸಿಎನ್‌ಎಸ್‌ನ ಸಹಾಯಕ ಪ್ರಾಧ್ಯಾಪಕ ಡಾ| ಶ್ರೀಜಿತ್ ಪದಿನ್ಹತ್ತೇರಿ, ಜಗತ್ತಿನಲ್ಲಿ ಪ್ರಥಮ ಬಾರಿಗೆ ನೇರಳಾತೀತ ವರ್ಣವಿಭಾಗೀಕರಣ ಶ್ರೇಣಿ ಆಲ್ಟ್ರಾ ವಾಯಿಲೆಟ್ ಸ್ಪೆಕ್ಟ್ರಲ್ ರೇಂಜ್ 200 ಎನ್‌ಎಂನಿಂದ 400 ಎನ್‌ಎಂ ನ ನಡುವೆ ಸೂರ್ಯನ ಚಿತ್ರ ತೆಗೆಯ ಲಾಗಿದೆ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ರಾಷ್ಟ್ರೀಯ ಮಹತ್ವದ ಕಾರ್ಯಗಳಿಗೆ ಮಾಹೆ ಸದಾ ಬೆಂಬಲ, ಕೊಡುಗೆ ನೀಡಲಿದೆ ಎಂದು ತಿಳಿಸಿದರು.