Advertisement

Aditi Prabhudeva: ಜನವರಿ 26ರಂದು ತೆರಗೆ ಬರಲಿದೆ ‘ಅಲೆಕ್ಸಾ’

02:43 PM Dec 30, 2023 | Team Udayavani |

“ಅಲೆಕ್ಸಾ’ ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಪವನ್‌ ತೇಜ್‌ ನಾಯಕರಾಗಿರುವ ಈ ಚಿತ್ರವನ್ನು ವಿ.ಚಂದ್ರು ನಿರ್ಮಿಸಿದ್ದು, ಜೀವ ನಿರ್ದೇಶನ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜೀವ, “ಅಲೆಕ್ಸಾ ಮರ್ಡರ್‌ ಮಿಸ್ಟರಿ ಕಥಾಹಂದರ ಹೊಂದಿರುವ ಚಿತ್ರ. ಭುಜಂಗ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ವಿದು. ಚಿತ್ರತಂಡದ ಸಹಕಾರದಿಂದ ಅಲೆಕ್ಸಾ ಚೆನ್ನಾಗಿ ಮೂಡಿಬಂದಿದೆ’ ಎಂದರು.  ಈ ಚಿತ್ರ ಜ.26ಕ್ಕೆ ತೆರೆಕಾಣಲಿದೆ.

“ನಾನು ಈ ಚಿತ್ರದಲ್ಲಿ ಇನ್ವೆಸ್ಟಿಕೇಶನ್‌ ಪೊಲೀಸ್‌ ಆಫೀಸರ್‌. ಅಲೆಕ್ಸಾ ನನ್ನ ಪಾತ್ರದ ಹೆಸರು. ನನಗೆ ನಿಜ ಜೀವನದಲ್ಲಿ ಪೊಲೀಸ್‌ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ನಿರ್ದೇಶಕರು ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಎಂದ ತಕ್ಷಣ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನಾನು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದೇನೆ. ಸಾಹಸ ದೃಶ್ಯ ಹೇಳಿ ಕೊಟ್ಟ ಸಾಹಸ ನಿರ್ದೇಶಕ ರವಿ ವರ್ಮ ಅವರಿಗೆ ಧನ್ಯವಾದ’ ಎನ್ನುವುದು ನಾಯಕಿ ಅದಿತಿ ಮಾತು.

Advertisement

Udayavani is now on Telegram. Click here to join our channel and stay updated with the latest news.

Next